ಮುಖ್ಯಶಿಕ್ಷಕ ಪಿ. ಈ. ಸತೀಶ್  ಹೃದಯಾಘಾತದಿಂದ ನಿಧನ

Chitradurga Districts Bureau

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ವೇಣುಕಲ್ಲು ಗುಡ್ಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ  ಪಿ.ಈ.ಸತೀಶ್ (೫೫) ರವರು ಶುಕ್ರವಾರ ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಶುಕ್ರವಾರ  ಹಿರಿಯೂರಿನ ಅವರ ಮನೆಯಲ್ಲಿ ಅವರಿಗೆ ಗ್ಯಾಸ್ಟಿಕ್ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರ ಕುಟುಂಬದ ಸದಸ್ಯರು ಅವರನ್ನು ಹಿರಿಯೂರಿನಿಂದ ದಾವಣಗೆರೆ ಆಸ್ಪತ್ರೆಗೆ ತೆರಳಿದರು. ಅವರಿಗೆ ಎಸ್.ಎಸ್.ಆಸ್ಪತ್ರೆ, ಸಿಟಿಸೆಂಟರ್ ಆಸ್ಪತ್ರೆ, ಅಹಲ್ಯಾ ಆಸ್ಪತ್ರೆ ಸೇರಿದಂತೆ ಯಾವುದೇ ಆಸ್ಪತ್ರೆಯಲ್ಲಿ ಕೊರೋನಾ ಸಂಕಷ್ಠ ಪರಿಸ್ಥಿತಿಯಿಂದಾಗಿ ಬೆಡ್ ಸಿಗಲಿಲ್ಲ ಎನ್ನಲಾಗಿದೆ.

ಕೊನೆಗೆ ಕುಟುಂಬದ ಸದಸ್ಯರು ಅವರನ್ನು ವಾಪಸ್ಸು ಕರೆತಂದು ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಸಮಯ ಮೀರಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ  ಸಾವನ್ನಪ್ಪಿದರು ಎನ್ನಲಾಗಿದೆ.

ಈ ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣ ಸಂಯೋಜಕರಾಗಿ ದಕ್ಷತೆಯಿಂದ ಕೆಲಸನಿರ್ವಹಿಸಿದ್ದರು, ಇತ್ತೀಚಿಗಷ್ಟೇ ಇವರು ಕಳೆದ ಆಗಷ್ಟ್ ತಿಂಗಳಿಂದ ತಾಲ್ಲೂಕಿನ ವೇಣುಕಲ್ಲು ಗುಡ್ಡ ಸರ್ಕಾರಿ ಪ್ರೌಢಶಾಲೆಗೆ ಮುಖ್ಯಶಿಕ್ಷಕರಾಗಿ ಬಡ್ತಿಹೊಂದಿದ್ದರು. ತುಂಬಾ ಸರಳ ಜೀವಿ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದವರಾಗಿದ್ದು, ಶಿಕ್ಷಣ ಇಲಾಖೆಯಲ್ಲಿ ಅಪಾರ  ಸ್ನೇಹಿತರು ಹಾಗೂ ಪತ್ನಿ ಹಾಗೂ ಪುತ್ರಿಯನ್ನು ಆಗಲಿದ್ದಾರೆ.

ಸತೀಶ್ ಅಬರ ನಿಧನಕ್ಕೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

 

ಮಾಲತೇಶ್ ಅರಸ್. ಸುದ್ದಿವಾಣಿ. ಚಿತ್ರದುರ್ಗ

Leave a Reply

Your email address will not be published. Required fields are marked *