ರೋಬೋಟ್ ಕಂಡುಹಿಡಿದ ಗುಡ್ಡದ ಗ್ರಾಮೀಣ ಕಲಿ” 

Special story State Students class
ರಾಜ್ಯ ಮಟ್ಟಕ್ಕೆ ಆಯ್ಕೆಯಾದ  ವೇಣುಕಲ್ಲು ಗುಡ್ಡದ ಶಾಲೆ.
ಮಾಲತೇಶ್ ಅರಸ್
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ  ವೇಣುಕಲ್ಲು ಗುಡ್ಡದ  ಸರ್ಕಾರಿ ಪ್ರೌಢಶಾಲೆಯಿಂದ ತಯಾರಾದ ಇನ್ಸ್ಫೈರ್  ಅವಾರ್ಡ್ ವಿಜ್ಞಾನ ಮಾದರಿಯು ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
 ಇನ್ಸ್ಪೈರ್ ಆವಾರ್ಡನ  ವಿಜ್ಞಾನ ಮಾದರಿಯು ಎಲ್ಲರ ಗಮನವನ್ನು ತನ್ನಡೆ ಸೆಳೆದಿದೆ. ವಿಜ್ಞಾನ ಶಿಕ್ಷಕ ರಾಜೇಶ್ ಎಲ್. ಎನ್. ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿ ಶೇಷಾರ್ಧನ . ವಿ ತಯಾರಿಸಿದ ಮಾದರಿ  “ಹಿರಿಯ ನಾಗರಿಕರಿಗೆ ಬಹು ಉಪಯೋಗಿ ಕುರ್ಚಿ” (multipurpose chair for senior citizen) .  ಸದರಿ ಮಾದರಿಯು ಸ್ವಚ್ಚ ಭಾರತ್ , ಕೌಶಲ್ಯ ಭಾರತ ಕಾರ್ಯಕ್ರಮಗಳ ಪ್ರೇರಣೆಯಿಂದ ಮೂಡಿಬಂದಿದೆ.
ಈ ಮಾದರಿಯುಲ್ಲಿನ ಆಸನದಲ್ಲಿ ಕುಳಿತು ಒಂದು ಸ್ವಿಚ್ ಒತ್ತಿದೊಡನೆ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸುತ್ತದೆ.  ಈ ಮಾದರಿಯೇ ಕಸವನ್ನು ಗುಡಿಸುವುದು ಮತ್ತು ನೆಲವನ್ನು ತೊಳೆಯುವುದು . ಹಿರಿಯರಿಗೆ ಹೆಚ್ಚಿನ ಶ್ರಮದಾಯಕವಾದ ಕೆಲಸಗಳನ್ನು ಆಸನದ ಮೇಲೆ ಕುಳಿತು ಮನೆಯ ಎಲ್ಲಾ ಕೋಣೆಗಳನ್ನು ಸ್ವಚ್ಛ ಮಾಡಬಹುದಾದ ನವೀನ ಮಾದರಿ ಇದಾಗಿದೆ .
ಈ ಮಾದರಿಯಲ್ಲಿ ಕಸವನ್ನು ಗುಡಿಸುವ ಹಾಗೂ ಕಸವನ್ನು ಸಂಗ್ರಹಿಸುವ ಭಾಗಗಳಿವೆ. ಸದರಿ ಮಾದರಿಯಲ್ಲಿ ಸ್ಥಳಿಯವಾಗಿ ದೊರಕುವ ವಸ್ತುಗಳನ್ನು ಬಳಸಿ ಮಾಡಿದಂತಹ ವ್ಯಾಕ್ಯುಮ್ ಕ್ಲೀನರ್ ಇದೆ , ಹಾಗೂ  ಕಸವನ್ನು ಗುಡಿಸಲು ಮುಂದೆ ಮತ್ತು ಹಿಂದೆ ಎರಡು ಫ್ಯಾನ್ ಗಳಿವೆ. ಮನೆಯ ಎಲ್ಲಾ ಕೋಣೆಗಳನ್ನು ಸುಲುಭವಾಗಿ ತಲುಪಲು ಈ ಮಾದರಿಯಲ್ಲಿ ಆಸನಕ್ಕೆ ಎರಡು ಚಕ್ರಗಳನ್ನು ಸಂಪರ್ಕಿಸಲಾಗಿದೆ.
 ಎಲ್ಲಾ ಭಾಗಗಳು ಕಾರ್ಯನಿರ್ವಹಿಸಲು ಬ್ಯಾಟರಿಯಿಂದ ವಿದ್ಯುತ್ ಸಂಪರ್ಕವಿದೆ . ಸದರಿ ಮಾದರಿಯ ಬಳಕೆಯಿಂದ ಮನೆಯ ವಯೋವೃದ್ಧರು ದೈನಂದಿನ ಶ್ರಮದಿಂದ ಕೂಡಿದ ಕೆಲಸಗಳನ್ನು ನಿರಾಯಸವಾಗಿ ನಿರ್ವಹಿಸಬಹುದು.
ಒಟ್ಟಾರೆ ಬಯಲುಸೀಮೆ ಜಿಲ್ಲೆಯ ಪ್ರತಿಭೆ ಇದೀಗ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದೆ.
ಮಾದರಿ ತಯಾರಿಕೆಗೆ ಸಹಕಾರ ಹಾಗೂ ಪ್ರೇರಣೆ ನೀಡಿದ  ಚಿತ್ರದುರ್ಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರವಿಶಂಕರ್ ರೆಡ್ಡಿ ಸರ್, ಹಿರಿಯೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಸರ್. ಹಾಗೂ ಸಮೂಹ ಸಂಪನ್ಮೂಲ ಅಧಿಕಾರಿ ತಿಪ್ಪೇರುದ್ರಪ್ಪ, ಡಯೆಟ್ ಪ್ರಾಂಶುಪಾಲರಾದ  ಎಸ್. ಕೆ. ಬಿ.ಪ್ರಸಾದ್ ಅವರಿಗೆ ಧನ್ಯವಾದಗಳು. ಎಲ್ಲರ ಮಾರ್ಗದರ್ಶನದಲ್ಲಿ ನಮ್ಮ ಶಾಲೆ ಇನ್ನೂ ಉತ್ತಮ ಕಾರ್ಯ ಮಾಡುತ್ತೇವೆ.
ಎಲ್.ಎನ್. ರಾಜೇಶ್.
ವಿಜ್ಞಾನ ಶಿಕ್ಷಕರು. ವೇಣುಕಲ್ಲು ಗುಡ್ಡ.
ಏನೇನ್ ಕೆಲಸ ಮಾಡುತ್ತೇ ಗೊತ್ತಾ..
ಈ ಮಾದರಿಯುಲ್ಲಿನ ಆಸನದಲ್ಲಿ ಕುಳಿತು ಒಂದು ಸ್ವಿಚ್ ಒತ್ತಿದೊಡನೆ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸುತ್ತದೆ.  ಈ ಮಾದರಿಯೇ ಕಸವನ್ನು ಗುಡಿಸುವುದು ಮತ್ತು ನೆಲವನ್ನು ತೊಳೆಯುವುದು . ಹಿರಿಯರಿಗೆ ಹೆಚ್ಚಿನ ಶ್ರಮದಾಯಕವಾದ ಕೆಲಸಗಳನ್ನು ಆಸನದ ಮೇಲೆ ಕುಳಿತು ಮನೆಯ ಎಲ್ಲಾ ಕೋಣೆಗಳನ್ನು ಸ್ವಚ್ಛ ಮಾಡಬಹುದಾದ ನವೀನ ಮಾದರಿ ಇದಾಗಿದೆ  ಕಸವನ್ನು ಗುಡಿಸುವ ಹಾಗೂ ಕಸವನ್ನು ಸಂಗ್ರಹಿಸುವ ಭಾಗಗಳಿವೆ. ಸದರಿ ಮಾದರಿಯಲ್ಲಿ ಸ್ಥಳೀಯವಾಗಿ ದೊರಕುವ ವಸ್ತುಗಳನ್ನು ಬಳಸಿ ಮಾಡಿದಂತಹ ವ್ಯಾಕ್ಯುಮ್ ಕ್ಲೀನರ್ ಇದೆ , ಹಾಗೂ  ಕಸವನ್ನು ಗುಡಿಸಲು ಮುಂದೆ ಮತ್ತು ಹಿಂದೆ ಎರಡು ಫ್ಯಾನ್ ಗಳಿವೆ. ಮನೆಯ ಎಲ್ಲಾ ಕೋಣೆಗಳನ್ನು ಸುಲಭವಾಗಿ ತಲುಪಲು ಈ ಮಾದರಿಯಲ್ಲಿ ಆಸನಕ್ಕೆ ಎರಡು ಚಕ್ರಗಳನ್ನು ಸಂಪರ್ಕಿಸಲಾಗಿದೆ.

Leave a Reply

Your email address will not be published. Required fields are marked *