ಗುರುಪರಂಪರೆ -೨೧ ನೇ ಶತಮಾನ : -ಗೀತಾ ಭರಮಸಾಗರ

Nation

ಗುರುಪರಂಪರೆ -೨೧ ನೇ ಶತಮಾನ -ಗೀತಾ ಭರಮಸಾಗರ

 

 

ಗುರು -ಶಿಷ್ಯ ಸಂಪ್ರದಾಯವು ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಪವಿತ್ರ ಹಾಗೂ ಪ್ರಮುಖ ಭಾಗವಾಗಿದೆ. ಇತಿಹಾಸದುದ್ದಕ್ಕೂ ಗುರುವಿನ ಗುರುತರವಾದ ಹೆಜ್ಜೆಗಳು ಪ್ರತಿಯೊಬ್ಬರ ಬದುಕಿನಲ್ಲೂ ಮೂಡಿರುತ್ತದೆ. ಶಿಕ್ಷಕನು ಸಮಾಜದ ನೀತಿ ನಿಯಮಗಳು ಹಾಗೂ ಸಂಸ್ಕೃತಿಯನ್ನಾಧರಿಸಿ ಕಿರಿಯ ಪೀಳಿಗೆಯವರ ವ್ಯಕ್ತಿತ್ವವನ್ನು ಸದೃಢವಾಗಿ ರೂಪಿಸಿ ಸಾಮಾಜೀಕರಣಗೊಳಿಸಬೇಕಾಗುತ್ತದೆ .

 

ಈ ನಿಟ್ಟಿನಲ್ಲಿ “ಶಿಕ್ಷಕನು ತೋಟವನ್ನು ವಿವಿಧ ಬಣ್ಣಗಳ ಹೂವುಗಳಿಂದ ಅಲಂಕರಿಸುವ ಮಾಲಿಯಂತೆ ”.
“ಹಾದಿಯ ತೊಡಕಿದು ಇಷ್ಟೆ ”, ಶಿಷ್ಯನನ್ನು ಸಹಜವಾಗಿ ಬೆಳಸುವವನೇ ಗುರು. ಇಂಥ ಗುರು ಮತ್ತು ಗ್ರಂಥರಾಶಿಗಳೆರಡೂ ವಿದ್ಯೆಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ . ಇಂದು ಶಿಕ್ಷಣ ಎಲ್ಲರ ಕಡ್ಡಾಯ ಹಕ್ಕಾಗಿದೆ.ಶಿಕ್ಷಣ ಕ್ಷೇತ್ರವೆಂದರೆ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಮಾರ್ಪಡಿಸುವ ತಾಣ. ಇಲ್ಲಿ ತರಬೇತಿ ಪಡೆದ ಯುವ ಪೀಳಿಗೆ ಸತ್ಪçಜೆಯಾಗಿ ರಾಷ್ಟçನಿರ್ಮಾಣದಲ್ಲಿ ಪಾಲ್ಗೊಳ್ಳುತ್ತದೆ. ಭಾರತ ಕಂಡ ಗುರು ಪರಂಪರೆಯ ಸತ್ವವನ್ನು ನಮ್ಮ ಶಿಕ್ಷಣ ಕ್ಷೇತ್ರ ಮೈಗೂಡಿಸಿಕೊಂಡರೆ “ ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ” ಎಂಬ ಕವಿಯ ಕನಸು ನನಸಾಗುತ್ತದೆ.
ಇಂದು ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಬದಲಾವಣೆಯೊಂದಿಗೆ ತಾಂತ್ರಿಕವಾಗಿ ಹೊಸ ಕಲಿಕಾ ಹಾದಿಗೆ ನಾಂದಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆಗಾಗಿ ಶಿಕ್ಷಕರನ್ನು ಅವಲಂಬಿಸದೇ, ಕಂಪ್ಯೂಟರ್, ಆನ್ಲೆöನ್ ಕ್ಲಾಸ್, ವಾಟ್ಸಾಪ್ ಶಿಕ್ಷಣ, ಡಿಜಿಟಲ್ ಗ್ರಂಥಾಲಯವನ್ನು ಅವಲಂಬಿಸಿದ್ದಾರೆ.
ಇಂತಹ ಕಾಲಘಟ್ಟದಲ್ಲಿ ಶಿಕ್ಷಕರ ಜವಾಬ್ದಾರಿಗಳು ಹೆಚ್ಚಿವೆ. ಶ್ರೇಷ್ಠ ಮಟ್ಟದ ಬದುಕಿಗಾಗಿ ಎಲ್ಲಿಲ್ಲದ ಪೈಪೋಟಿ ನಡೆಯುತ್ತಿರುವ ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ತಳಹದಿಯಾಗಿ ನೈತಿಕ ಮತ್ತು ವೈಚಾರಿಕ ಶಿಕ್ಷಣ ನೀಡಿ ಅವರನ್ನು ಸತ್ಪçಜೆಯನ್ನಾಗಿ ಮಾಡುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಸಮುದಾಯದ ಮೇಲಿದೆ . ಈ ನಿಟ್ಟಿನಲ್ಲಿ ಶಿಕ್ಷಕರು ಆತ್ಮಾವಲೋಕನ ಮಾಡಿಕೊಂಡು ಸಜ್ಜಾಗಬೇಕಾಗಿದೆ .

ಶ್ರೀಮಂತ ಗುರುಪರಂಪರೆಯ ಹಿನ್ನೆಲೆಯುಳ್ಳ ನಮ್ಮ ಶಿಕ್ಷಣ ಪದ್ದತಿಯು ಯಾವ ಸ್ಥಿತಿಯಲ್ಲಿದೆ? ಎತ್ತ ಸಾಗುತ್ತಿದೆ? ಎಂದು ಯೋಚಿಸಿದರೆ ವಿಷಾದವಾಗದಿರದು.

 

ಭಾರತೀಯ ಸಂಸ್ಕೃತಿಯ ವೈಶಿಷ್ಟö್ಯ ಪರಂಪರಾನುಗತವಾಗಿ ಮುಂದುವರಿಯಲು ಕಾರಣ ಭಾರತದ “ಗುರುಕುಲಶಿಕ್ಷಣಪಧ್ದತಿ” ಎಂಬುದನ್ನು ಚೆನ್ನಾಗಿ ಮನಗಂಡಿದ್ದ ಬ್ರಿಟೀಷ್ ಅಧಿಕಾರಿ ಮೆಕಾಲೆ ಭಾರತದ ಸಂಸ್ಕೃತಿಯನ್ನು ಹಾಳುಗೆಡವಬೇಕಿದ್ದರೆ… ಮೊದಲು ಗುರುಕುಲ ಶಿಕ್ಷಣ ಪದ್ದತಿಯಲ್ಲಿರುವ ಅದರ ಬೇರನ್ನು ತುಂಡರಿಸಬೇಕು ಎಂಬ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡಿದ್ದ ಎನ್ನಲಾಗಿದೆ
ಅವನ ಸಲಹೆಯಂತೆ ಆಡಳಿತದ ಪ್ರತಿಯೊಂದು ಹಂತದಲ್ಲೂ ಆಂಗ್ಲಭಾಷೆಯನ್ನು ಸೇರಿಸಿ ಉದ್ಯೋಗ ಪಡೆಯಲು ಆಂಗ್ಲರ ವಿದ್ಯಾಭ್ಯಾಸ ಪದ್ದತಿ ಅನಿವರ‍್ಯ ಎಂಬ ವಾತಾವರಣ ಸೃಷ್ಟಿಸಿರುವುದು ಇಂದಿಗೂ ಜೀವಂತ.
ಇದರ ಫಲಶೃತಿಯೇ ಸಂಪೂರ್ಣ ಹಾಳಾದ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆ . ಕೇವಲ ಅಂಕ ಮತ್ತು ಹಣಗಳಿಕೆಗಾಗಿಯೇ ಶಿಕ್ಷಣವು ಮಾರುಕಟ್ಟೆಯಾಗಿ ಅದರ ಮೂಲ ಆಶಯ ಹುಸಿಯಾಗಿದ್ದು; ಜ್ಞಾನಕ್ಕಾಗಿ, ಉತ್ತಮ ಜೀವನಕ್ರಮಕ್ಕಾಗಿ, ನೈತಿಕತೆಗಾಗಿ ಶಿಕ್ಷಣ ಎಂಬರ್ಥಕ್ಕೆ ಧಕ್ಕೆಯಾದಂತಿದೆ.

ಭವಿಷ್ಯದ ದೃಷ್ಟಿಯಿಂದ ಮತ್ತು ಮುಂದಿನ ತಲೆಮಾರಿನ ಸವಾಲನ್ನು ಎದುರಿಸಲು ವಿಶ್ವದಾದ್ಯಂತ ಅನೇಕ ಶಿಕ್ಷಕರಿಗೆ, ಶಿಕ್ಷಕರ-ಶಿಕ್ಷಣಕ್ಕೆ ಸಂಬAಧಿಸಿದ ಅನೇಕ ಆಯೋಗಗಳು, ಸಮಿತಿಗಳು ಶಿಕ್ಷಕರಿಗೆ ಅವಶ್ಯಕವಾದ ಸಾಮರ್ಥ್ಯಗಳನ್ನು ಗುರ್ತಿಸಿದ್ದಾರೆ. ಕಾಲ ಬದಲಾದಂತೆ ಶಿಕ್ಷಕರ ಜವಾಬ್ಧಾರಿಗಳು, ಸಾಮರ್ಥ್ಯಗಳು ಸ್ವಲ್ಪ ಮಟ್ಟಿಗಾದರೂ ಬದಲಾಗುತ್ತದೆಯೆಂಬ ಹಿನ್ನೆಲೆಯಲ್ಲಿ ಇಂದಿನ ಶಿಕ್ಷಕರುಗಳ ಸಾಮರ್ಥ್ಯಾಧಾರಿತ ಶಿಕ್ಷಣಕ್ಕೆ ಒತ್ತು ಕೊಟ್ಟಾಗ ಮಾತ್ರ ನೈಜ ಶಿಕ್ಷಕ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ೨೧ನೇ ಶತಮಾನದಲ್ಲಿ ಪ್ರಬುದ್ಧ ಪ್ರಜಾಪ್ರಭುತ್ವದ ನೆಲೆಯಲ್ಲಿ ಆದರ್ಶ ನಾಗರಿಕರನ್ನಾಗಿ ರೂಪಿಸುವ ಧ್ಯೇಯದೊಂದಿಗೆ ಸ್ವಾರ್ಥ ಸಮಾಜವನ್ನು ನಿರ್ಮಿಸುವ ಶಿಕ್ಷಕರ ಸಮುದಾಯಕ್ಕೆ ಡಾ// ಸರ್ವಪಲ್ಲಿ ರಾಧಾಕೃಷ್ಣನ್ ಅವರ ವಿಚಾರಧಾರೆಗಳು ಇಂದಿಗೂ ದಾರಿದೀಪ.
—–

ಶಿಕ್ಷಕರು, ಚಿತ್ರದುರ್ಗ ಮೊ:೯೧೧೩೬೯೪೨೦೦

Leave a Reply

Your email address will not be published. Required fields are marked *