
ಚಿತ್ರದುರ್ಗ: ಹಿರಿಯೂರು ನಗರಸಭೆಗೆ ನೂತನವಾಗಿ ಲೇಡಿ ಕಮಿಷನರ್ ಎಂಟ್ರಿಯಾಗುತ್ತಿದ್ದು, ಪೌರಾಯುಕ್ತರಾಗಿ ಟಿ. ಲೀಲಾವತಿ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ಹಿರಿಯೂರು ನಗರಸಭೆಯ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಹಿಳಾ ಪೌರಾಯುಕ್ತರಾಗಿ ಟಿ. ಲೀಲಾವತಿ ಅಧಿಕಾರ ಸ್ವೀಕರಿಸುತ್ತಿರುವುದು ವಿಶೇಷವಾಗಿದೆ.
ಇದೇ ನಗರಸಭೆಯಲ್ಲಿ ರೆವಿನ್ಯೂ ಇನ್ಸ್ ಪೆಕ್ಟರ್ ಹಾಗೂ ವಿವಿಧ ಹುದ್ದೆಗಳ ಮೂಲಕ ಅಧಿಕಾರವನ್ನು ಮಾಡಿರುವಂತ ಲೀಲಾವತಿ ಅವರು ಖಡಕ್ ಅಧಿಕಾರಿ ಎಂದೇ ಪೌರ ಕಾರ್ಮಿಕರು ಮತ್ತು ಪೌರ ಸಿಬ್ಬಂದಿಗಳಿಂದ ಹೆಸರುಗಳಿಸಿದ್ದಾರೆ.
ಚಿತ್ರದುರ್ಗದ ಜಿಲ್ಲಾಧಿಕಾರಿಯಾಗಿರುವ ವಿನೋತ್ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಹೊನ್ನಾಂಬ ಅವರ ನಂತರ ಇದೀಗ ಹಿರಿಯೂರು ನಗರಸಭೆಗೆ ಲೇಡಿ ಕಮಿಷನರ್ ಆಗಮನವಾಗಿದೆ.
ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಶಶಿಕಲಾ ಸುರೇಶ್ ಬಾಬು, ಸಬ್ ರಿಜಿಸ್ಟ್ರಾರ್ ಕಲಾವತಿ, ಪೊಲೀಸ್ ಇಲಾಖೆಯ ಲೇಡಿ ಸಿಂಗಂ ಅನುಸೂಯಮ್ಮ, ಕೃಷಿ ಇಲಾಖೆಯ ನಜ್ಮಾ ಇರುವ ವೇಳೆ ನಗರಸಭೆಯ ಪೌರಾಯುಕ್ತರಾಗಿ ಟಿ. ಲೀಲಾವತಿಯವರ ಆಗಮನ ಮಹಿಳಾ ಕಾಯಕವನ್ನು ಅನಾವರಣ ಮಾಡಿದೆ.
ಒಟ್ಟಾರೆ ಮಹಿಳಾ ಪಡೆ ಹಿರಿಯೂರು ನಗರ ಮತ್ತು ತಾಲ್ಲೂಕಿನ ಅಭಿವೃದ್ಧಿ ಮಾಡಲೆಂಬುದು ಎಲ್ಲರ ಆಶಯವಾಗಿದೆ.