ಮಾಲತೇಶ್ ಅರಸ್
ಚಿತ್ರದುರ್ಗ: ನಂಬಿಕೆಗೆ ಮತ್ತೊಂದು ಹೆಸರೇ ಎಸ್.ಆರ್.ಎಸ್. ಪೋಷಕರು ಶಾಲೆಯ ಮೇಲೆ ಇಟ್ಟ ನಂಬಿಕೆಯನ್ನು ಉಳಿಸುವ ಜತೆಗೆ ಮಕ್ಕಳ ಅಭಿವೃದ್ಧಿ ನಮ್ಮ ಗುರಿಯಾಗಿದೆ. ನಮ್ಮ ಶಾಲೆಯಲ್ಲಿ ಓದಿದ ಮಕ್ಕಳು ಉನ್ನತಮಟ್ಟಕ್ಕೇರಬೇಕು ಎಂಬುದು ನಮ್ಮ ಉದ್ದೇಶ ಎಂದು ಎಸ್.ಆರ್.ಎಸ್ ಸಮೂಹ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಲಿಂಗಾರೆಡ್ಡಿ ಹೇಳಿದರು.
ಬೆಂಗಳೂರು ರಸ್ತೆಯ ಐಯುಡಿಪಿ ಬಡಾವಣೆಯಲ್ಲಿ ನೂತನವಾಗಿ ಆರಂಭವಾದ ಎಸ್.ಆರ್.ಎಸ್ ಆಸ್ಕರ್ ಫರ್ನಾಂಡೀಸ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ಪೋಷಕರಿಗೆ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಧ್ಯೇಯ. ನಮ್ಮಲ್ಲಿ ವಿವಿಧ ರಾಜ್ಯದಿಂದ ಶಿಕ್ಷಕರು ಮತ್ತು ಉಪನ್ಯಾಸಕರು ಇದ್ದಾರೆ. ರಾಜ್ಯದ ನಂಬರ್ ಒನ್ ಶಾಲೆ ಮಾಡುವ ಗುರಿಗೆ ಪೋಷಕರ ಸಹಕಾರ ತುಂಬಾ ಅಗತ್ಯ, ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ, ನೂರಕ್ಕೆ ನೂರು ಫಲಿತಾಂಶ ನಾವು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಎಸ್.ಆರ್.ಎಸ್ ಸಮೂಹ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ ಮಾತನಾಡಿ, ನಮ್ಮಲ್ಲಿ ಉತ್ತಮ ಗುಣಮಟ್ಟದ ಶಿಕ್ಷಕರು ಮತ್ತು ಆಧುನಿಕ ತಂತ್ರಜ್ಞಾನದ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ನೀವು ಹೋಮ್ ಟ್ಯೂಷನ್ ಗೆ ಕಳುಹಿಸಬೇಡಿ, ನಿಮ್ಮ ಮಕ್ಕಳಿಗೆ ಯಾವುದೇ ಸಮಸ್ಯೆಯಿದ್ದರೂ ಟೀಚರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿ. ನಡುವೆ ನಮಗೆ ಬೇಕಾದ ಎಲ್ಲವೂ ನಮ್ಮಲ್ಲಿ ಲಭ್ಯ ಎಂದರು.
ಮಕ್ಕಳನ್ನು ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಕೆಲಸ ಪೋಷಕರದ್ದು, ಅಕಾಡೆಮಿಕ್ ಆಗಿ ಮಾಡುವ ಎಲ್ಲವನ್ನೂ ನಾವು ಮಾಡುತ್ತೇವೆ. ಹೆಚ್ಚುವರಿ ಪಾಠವನ್ನು ನಾವೇ ಮಾಡುತ್ತೇವೆ. ನಿಮ್ಮ ಮಕ್ಕಳ ಮುಂದಿನ ಭವಿಷ್ಯದ ಶ್ರೇಷ್ಠ ವ್ಯಕ್ತಿಯಾಗಿ ಮಾಡಲು ನೀವು ನಮ್ಮೊಂದಿಗೆ ಜತೆಯಾಗಿರಿ ಎಂದರು.
ಎಸ್.ಆರ್.ಎಸ್ ಆಸ್ಕರ್ ಫರ್ನಾಂಡೀಸ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನ ಪ್ರಾಚಾರ್ಯರಾದ ಕೆ.ಜೆ. ಪದ್ಮಾವತಿ ಮಾತನಾಡಿ, ಮಕ್ಕಳಲ್ಲಿ ಇರುವ ಸುಪ್ತ ಪ್ರತಿಭೆಯನ್ನು ಹೊರಹಾಕುವುದು ನಮ್ಮ ಉದ್ದೇಶ, ಶಾಲೆಯಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತೇವೆ. ಪೋಷಕರು ಮಕ್ಕಳಲ್ಲಿನ ಕ್ರಿಯಾಶೀಲ ಕೆಲಸಗಳಿಗೆ ಬೆಂಬಲ ನೀಡಿ ಮಕ್ಕಳನ್ನು ಪ್ರತಿಭೆಗಳನ್ನಾಗಿ ಮಾಡಿ ಎಂದರು.
ಎಸ್. ಆರ್.ಎಸ್. ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ ಮಾತನಾಡಿ, ಭಾರತದ. ಪ್ರತಿಷ್ಠಿತ ಐದು ನೂರು ಶಾಲೆಗಳಲ್ಲಿ ಎಸ್ ಆರ್ ಎಸ್ ಸ್ಥಾನ ಪಡೆದಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ನೈತಿಕವಾಗಿ, ಆಧ್ಯಾತ್ಮಿಕವಾಗಿ ಮಕ್ಕಳ ಭವಿಷ್ಯವನ್ನು ಬಲ ಪಡಿಸುತ್ತೇವೆ. ನಮ್ಮಲ್ಲಿ ನಿಮ್ಮ ಮಕ್ಕಳು ಓದುತ್ತಿರುವುದು ನಮಗೆ ಸಂತಸ ತಂದಿದೆ. ಉತ್ತಮ ಫಲಿತಾಂಶ ನಮ್ಮ ಗುರಿ ಎಂದರು.
ಎಸ್. ಆರ್.ಎಸ್ ಹೆರಿಟೇಜ್ ಪ್ರಾಚಾರ್ಯರಾದ ಎಂ. ಎಸ್ ಪ್ರಭಾಕರ್ ಮಾತನಾಡಿ, ಪೋಷಕರು ಶಾಲೆಯ ಜೊತೆ ನಿಕಟ ಸಂಬಂಧ ಹೊಂದುವ ಮೂಲಕ ಮಕ್ಕಳ ಅಭಿವೃದ್ಧಿಗೆ ಬೇಕಾದ ಸೂಕ್ತ ಎಲ್ಲಾ ಅನುಕೂಲವನ್ನು ಪಡೆದು ಕೊಳ್ಳಿ, ನಿಮಗೆ ಇರುವ ನಿರೀಕ್ಷೆನಾವು ಪೂರೈಸುತ್ತೇವೆ ಹೊಸ ಬದಲಾವಣೆ ಗಳೊಂದಿಗೆ ನಾವು ನೂತನ ಶಾಲೆ ಆರಂಭಿಸಿದ್ದು ನಿಮ್ಮ ಸಹಕಾರ ಇರಲಿ ಎಂದರು.
ಎಸ್.ಆರ್.ಎಸ್ ಆಸ್ಕರ್ ಫರ್ನಾಂಡೀಸ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನ ಸಂಯೋಜಕರಾದ ಚಿನ್ಮಯ್ ಸಾಲೀಮಠ್ ಹಾಗೂ ಸಿಬ್ಬಂದಿಗಳು ಇದ್ದರು.
ಪಠ್ಯೇತರ ಮತ್ತು ಕ್ರೀಡೆಗೆ ಅವಕಾಶ ಕೊಡಿ, ಪೋಷಕರಿಗೆ ಹೆಚ್ಚು ಪೀಡ್ ಬ್ಯಾಕ್ ಬೇಕು ಎಂದು ಪೋಷಕರು ಮನವಿ ಮಾಡಿದರು.
ಶಿಕ್ಷಕರಾದ ರಾಧ ಪ್ರಾರ್ಥಿಸಿದರು, ಕಿರರ್ ಬಾಬು ನಿರೂಪಿಸಿದರು, ಸುಮಾಯ ಸ್ವಾಗತಿಸಿದರು, ಪದ್ಮ ಪ್ರಕಾಶ್ ವಂದಿಸಿದರು, ಮಂಗಳ, ರಾಕೇಶ್, ಗೀತಾ, ಸೌಮ್ಯ, ಸಂಧ್ಯಾ, ಇದ್ದರು.
ಮಾಲತೇಶ್ ಅರಸ್. ನ್ಯೂಸ್ ಎಡಿಟರ್. ಚಿತ್ರದುರ್ಗ.9480472030