ಚಿತ್ರದುರ್ಗ: ಕುರಿ ಸಾಕಾಣಿಕೆ ಮತ್ತು ಹೈನುಗಾರಿಕೆಯ ಮೂಲಕ ನಿರುದ್ಯೋಗಿಗಳು ಸ್ವಾವಲಂಬನೆ ಜೀವನ ಸಾಗಿಸಬೇಕು. ಕುರಿ ಮೇಕೆ ಮಾಂಸ ಹಾಗೂ ಹಾಲು ಉತ್ಪನ್ನವು ಸದಾ ಬೇಡಿಕೆಯ ಉದ್ಯಮ ಎಂದು ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಪ್ರಸನ್ನ ಕುಮಾರ್ ಹೇಳಿದರು.
ಚಿತ್ರದುರ್ಗ ನಗರದ ರುಡ್ ಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕುರಿ ಮೇಕೆ ಸಾಕಾಣಿಕೆ ಹಾಗೂ ಹೈನುಗಾರಿಕೆ ಮತ್ತು ರಸಗೊಬ್ಬರ ತಯಾರಿಕಾ ಹತ್ತು ದಿನಗಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಿರುದ್ಯೋಗಿ ಯುವಕರನ್ನು ಉದ್ಯೋಗಸ್ಥರನ್ನಾಗಿ ಮಾಡುವುದು ಸಂಸ್ಥೆಯ ಮೂಲ ಉದ್ದೇಶ. ಈ ಮೂಲಕ ಕುರಿ ಮತ್ತು ಮೇಕೆ ಸಾಕಾಣಿಕೆ ಹೊಸ ಕಾಣಿಕೆನೀಡಲಿದೆ. ಈ ಮೂಲಕ ಅಭಿವೃದ್ಧಿ ಸಾಧಿಸಿ ಎಂದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲಾ ಉಪ ನಿರ್ದೇಶಕರಾದ ಡಾ. ತಿಪ್ಪೇಸ್ವಾಮಿ ಮಾತನಾಡಿ, ಬೇಡಿಕೆ ಕುಸಿಯದ ಉದ್ಯಮ ಎಂದರೆ ಅದು ಕುರಿ ಸಾಕಾಣಿಕೆಯಾಗಿದ್ದು, ಕುರಿ ಸಾಕಣೆಯ ಮೂಲಕ ಆರ್ಥಿಕ ಲಾಭ ಗಳಿಸಬೇಕು. ಇಂದು ಕೃಷಿ ಮತ್ತು ಪಶು ಸಂಗೋಪನೆ ಹೆಚ್ಚು ಆಧುನಿಕವಾದ ಪದ್ದತಿಯಲ್ಲಿ ಬಳಸಲಾಗುತ್ತಿದೆ ಅದನ್ನು ಬಳಸಿಕೊಂಡು ನೀವೂ ಉದ್ಯಮಿಗಳಾಗಿ ಎಂದರು.
ಉಪನ್ಯಾಸಕರಾದ ರಾಯಚೂರು ಬಸವರಾಜ್ ಅವರು ಮಾತನಾಡಿ ದೇಶದಲ್ಲಿ ಶೇ ೭೦ ರಷ್ಟು ಜನರು ಪಶುಗಳ ಮೇಲೆ ಅವಲಂಬಿತರಾಗಿದ್ದಾರೆ. ಯಾವುದೇ ಉದ್ಯಮವಾದರೂ ಸೋಲಬಹುದು ಕೃಷಿ ಯನ್ನು ಪಶುಸಂಗೋಪನೆಯನ್ನು ಆಧುನಿಕವಾದ ಯೋಜನೆಗಳ ಮೂಲಕ ಬಳಸಿದರೆ ಸೋಲಿಲ್ಲ. ತರಬೇತಿಯಲ್ಲಿ ಮನಸು ಕೊಟ್ಟು ಕಲಿತವರು ನಿರುದ್ಯೋಗ ದೂರಮಾಡಿ ಎಂದರು.
ರುಡ್ ಸೆಟ್ ಸಂಸ್ಥೆ ನಿರ್ದೇಶಕಿ ಮಂಜುಳ ಮಾತನಾಡಿ, ನಿರುದ್ಯೋಗಿಗಳು ಇಂದು ಇನ್ನೊಬ್ಬರ ಮೇಲೆ ಅವಲಂಭಿತರಾಗದೆ ಸ್ವ ಉದ್ಯೋಗ ಮಾಡಿ. ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಅಭಿವೃದ್ಧಿ ಸಾಧಿಸಿ ಎಂದರು.ಉದ್ಯೋಗ ಜತೆಗೆ ಮಾನವೀಯತೆಯಿಂದ ರೂಡಿಸಿಕೊಳ್ಳಿ ನೀವೂ ಬೆಳೆಯಿರಿ. ಇನ್ನೊಬ್ಬರನ್ನು ಬೆಳೆಸಿ ಎಂದರು.
ಇದೇ ಸಂದರ್ಭದಲ್ಲಿ ತರಬೇತಿ ಪಡೆದ ದೊರೆರಾಜು, ಮಾಲತೇಶ್, ಯತೀಶ್, ಆಕಾಶ್, ಶ್ರೀನಿವಾಸ್ , ಧನಂಜಯ, ಮಾತನಾಡಿದರು.
ರುಡ್ ಸಂಸ್ಥೆಯ ಹಿರಿಯ ಉಪನ್ಯಾಸಕಿ ಲತಾ ಹಾಗೂ ತೋಟಪ್ಪ ಇದ್ದರು. ಕಾಂಚನಾ ರಂಗಪ್ಪ ಪ್ರಾರ್ಥಿಸಿದರು
ಮಾಲತೇಶ್ ಅರಸ್. ನ್ಯೂಸ್ ಎಡಿಟರ್. ಸುದ್ದಿವಾಣಿ 9480472030