ಡಿ.೨೯ಕ್ಕೆ ಶಶಿಧರ್ ಸಿಕ್ಬಿಟ್ನಾ..!? ಕಿರುಚಿತ್ರ ಬಿಡುಗಡೆ

Film World Hassan

 

 

ಹಾಸನ : ಪತ್ರಕರ್ತರನ್ನೊಗೊಂಡ ಹಾಸನದ ಯುವಕರ ತಂಡ ಸತ್ಯ ಘಟನೆಯನ್ನಾಧರಿಸಿ ನಿರ್ಮಿಸಿರುಗ ಶಶಿಧರ್ ಸಿಕ್ಬಿಟ್ನಾ..!? ಕಿರುಚಿತ್ರ ಇದೇತಿಂಗಳು ೨೯ರಂದು ತುಳಸಿ ಕನ್ನಡ ಯೂಟ್ಯೂಬ್‌ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಕಿರುಚಿತ್ರದ ನಟ, ಪತ್ರಕರ್ತ ಮಂಜು ಬನವಾಸೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾನು ಮತ್ತು ಮಿತ್ರ ಹೆತ್ತೂರು ನಾಗರಾಜ್ ವ್ಯಾಸಂಗದ ದಿನದಿಂದಲೂ ಕೂಡ ಚಲನಚಿತ್ರದ ಬಗ್ಗೆ ವ್ಯಾಮೋಹ ಹೊಂದಿದ್ದೆವು. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಸದಭಿರುಚಿಯ ಚಿತ್ರವನ್ನು ಜನರಿಗೆ ಉಣಬಡಿಸುವ ಇಂಗಿತವನ್ನು ಹಲವು ಬಾರಿ ಚರ್ಚಿಸಿ ಅಂತಿಮವಾಗಿ ಜಿಲ್ಲೆಯ ನೈಜಕಥೆಯ ಕಿರುಚಿತ್ರವನ್ನು ಮಾಡಲು ಮುಂದಾದೆವು ಎಂದು ಹೇಳಿದರು.
ಈ ಕಿರುಚಿತ್ರವನ್ನು ಸ್ಯಾಂಡಲ್ ವುಡ್ ಚಲನಚಿತ್ರ ನಿರ್ದೇಶಕ ಕಿರಣ್ ಬ್ಯಾಬ ನಿರ್ದೇಶನ ಮಾಡಿದ್ದು, ನಾನು ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಬರೆದಿದ್ದೇನೆ. ಹೆತ್ತೂರು ನಾಗರಾಜ್ ಅವರು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಜಿಲ್ಲೆಯ ಪ್ರತಿಭಾವಂತ ನಟ ಮದನ್ ನಾಯಕನಾಗಿ ನಟಿಸಿದ್ದು, ಅವರ ಜತೆಗೆ ರಂಗಭೂಮಿ ಕಲಾವಿದೆ ಲಕ್ಷ್ಮಿ ಭೂಮಿಕೆಯಲ್ಲಿದ್ದಾರೆ ಎಂದು ವಿವರಿಸಿದರು.
ಡಿ.೨೯ರಂದು ತುಳಸಿ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗುತ್ತಿದ್ದು, ಜಿಲ್ಲೆಯ ಜನರು ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಕಿರುಚಿತ್ರದ ನಿರ್ಮಾಪಕ ಹೆತ್ತೂರು ನಾಗರಾಜ್ ಮಾತನಾಡಿ, ಸಕಲೇಶಪುರದ ಪೌರ ಕಾರ್ಮಿಕರ ಕುಟುಂಬದ ನೈಜ ಕಥೆಯಾಗಿದ್ದು, ಇದನ್ನು ಅತ್ಯಂತ ಸುಂದರವಾಗಿ ಚಿತ್ರೀಕರಿಸಲಾಗಿದೆ. ಎಲ್ಲಾ ವಿಭಾಗದಲ್ಲಿಯೂ ಕೂಡ ಉತ್ತಮವಾಗಿ ಮೂಡಿಬಂದಿದ್ದು, ಜಿಲ್ಲೆಯ ಜನರು ನಮ್ಮ ಚೊಚ್ಚಲ ಪ್ರಯತ್ನವನ್ನು ಪ್ರೋತ್ಸಾಹಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಕಿರಣ್ ಬ್ಯಾಬ ಹಾಜರಿದ್ದರು. ಇದೇ ವೇಳೆ ಚಿತ್ರದ ಪೋಸ್ಟರ್ ಅನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಮತ್ತು ಪ್ರಧಾನ ಕಾರ‍್ಯದರ್ಶಿ ಕೆ.ಜೆ.ಸುರೇಶ್ ಬಿಡುಗಡೆ ಮಾಡಿದರು.

Leave a Reply

Your email address will not be published. Required fields are marked *