ಚಿತ್ರದುರ್ಗ:www.suddivaani.com: ಚಿತ್ರದುರ್ಗ ಅಂದ್ರೆ ಸಿನಿಮಾ ಸ್ಟಾರ್ ಗಳ ಹೆಸರು ನೆನಪಾಗೋದು ವಿಷ್ಣುವರ್ಧನ್ ಅವರದು.
ಸಾಹಸಸಿಂಹ ಡಾ. ವಿಷ್ಣುದಾದ ಅವರನ್ನು ಅಪ್ಪಾಜಿ ಅಂತಾನೆ ನಮ್ಮ ಯುವಕರು ಕರೆಯೋದು.ಅಂತಹ ದಾದಾನ 11 ನೆ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಚಿತ್ರದುರ್ಗ ನಗರದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಕಹಳೆ ಕೆಫೆ ವತಿಯಿಂದ ಕಡುಬಡವರಿಗೆ ದವಸ ಧಾನ್ಯಗಳನ್ನು ಅಂದರೆ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ, ಸೋಪು, ಶಾಂಪು ಇತರೆ ದಿನನಿತ್ಯದ ವಸ್ತುಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಹಳೆ ಕೆಫೆಯ ಸಂತೋಷ್, ರಾಕೇಶ್ ಮದರಿ, ಪವನ್ ಇತರರು ಇದ್ದರು.
ಮಾಲತೇಶ್ ಅರಸ್. ನ್ಯೂಸ್ ಎಡಿಟರ್. ಸುದ್ದಿವಾಣಿ