ಭ್ರಷ್ಟ ರಾಜಕಾರಣಿಗಳು  ಹಾಗೂ ಭ್ರಷ್ಟ ಅಧಿಕಾರಿಗಳನ್ನು ಪ್ರಶ್ನೆ ಮಾಡಿ: ಅವಿನಾಶ್

Nation
ರಾಷ್ಟ್ರೀಯ ಪ್ರಬುದ್ಧ ಸೇನೆ ಜಗಳೂರು ತಾಲ್ಲೂಕು ಸಮಿತಿ ಉದ್ಘಾಟನೆ.
ದಾವಣಗೆರೆ:  ಯುವಕರು ಭ್ರಷ್ಟ ರಾಜಕಾರಣಿಗಳು  ಹಾಗೂ ಭ್ರಷ್ಟ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ರಾಷ್ಟ್ರೀಯ ಪ್ರಬುದ್ಧ ಸೇನೆ ಅಧ್ಯಕ್ಷರಾದ ಸಿ.ಎಲ್.ಅವಿನಾಶ್
 ತಿಳಿಸಿದರು.
ರಾಷ್ಟ್ರೀಯ ಪ್ರಬುದ್ಧ ಸೇನೆಯ ಜಗಳೂರು ತಾಲೂಕು ಸಮಿತಿಯ ಉದ್ಘಾಟನೆ ಮಾಡಿ, ದೇಶವನ್ನು ಸ್ವಚ್ಛಗೊಳಿಸುವ ಪೌರ ಸೇನಾನಿಗಳಿಗೆ ಗೌರವ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಷ್ಟ್ರೀಯ ಪ್ರಬುದ್ಧ ಸೇನೆ ಅಧ್ಯಕ್ಷರಾದ ಅವಿನಾಶ್ ರವರು ಮಾತನಾಡಿ, ಸಂವಿಧಾನ ಭಾರತ ದೇಶದ ಪವಿತ್ರ ಗ್ರಂಥ ಅದನ್ನು ಮೀರಿದ ಯಾವುದೇ ಗ್ರಂಥವು ಭಾರತ ದೇಶದಲ್ಲಿ ಇಲ್ಲ . ಹಾಗೂ ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಪ್ರತಿಯೊಬ್ಬರ ಅಭಿವೃದ್ಧಿ ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷರಾದ ಅವಿನಾಶ್ ಸಿ ಎಲ್, ಜಗಳೂರು ತಾಲ್ಲೂಕು ಅಧ್ಯಕ್ಷರಾದ ಹನುಮಂತಪ್ಪ, ಸಂಚಾಲಕರಾದ ಮಂಜಪ್ಪ ನೀತಿಗೆರೆ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಯುವ ಘಟಕದ ಅಧ್ಯಕ್ಷ ಅನುಷ್, ಪರಿಸರ ರಕ್ಷಕ ಸೇನೆ ಅಧ್ಯಕ್ಷ ಹನುಮಂತರಾಯ ಜಗಳೂರು ಅಡ್ವೊಕೇಟ್, ಇತರ ಸಮುದಾಯದ ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.
ಮಾಲತೇಶ್ ಅರಸ್. ನ್ಯೂಸ್ ಎಡಿಟರ್
ಪೊಟೋ

Leave a Reply

Your email address will not be published. Required fields are marked *