ವಿಜಯನಗರ(ಹಂಪಿ): ಏ.09: ಹಂಪಿ ಕನ್ನಡ ವಿಶ್ವವಿದ್ಯಾಲಯವು ವಿಜಯ ಕರ್ನಾಟಕದ ಹಿರಿಯ ವರದಿಗಾರ ಈ.ರಮೇಶ್ ಅವರಿಗೆ “ವಸಾಹತೋತ್ತರ ಸಂದರ್ಭದಲ್ಲಿ ಕನ್ನಡ ಬೌದ್ಧಿಕ ಸಂಕಥನಗಳ ಪರಿಶೀಲನೆ” ಎಂಬ ವಿಷಯದ ಮೇಲೆ ನಡೆಸಿದ ಸಂಶೋಧನೆಗೆ ಶುಕ್ರವಾರ, ಪಿಎಚ್. ಡಿ (Doctor of Philosophy) ಪದವಿ ನೀಡಿ ಗೌರವಿಸಿತು.
ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರಾದ ವಜುಭಾಯಿ ವಾಲಾ ಅವರ ಅನುಪಸ್ಥಿತಿಯಲ್ಲಿ ಹಂಪಿ ವಿಶ್ವವಿದ್ಯಾಲಯದ ಕುಲಪತಿ ಸ.ಚಿ. ರಮೇಶ ಅವರು Ph.D ಪ್ರಮಾಣಪತ್ರ ಪ್ರದಾನ ಮಾಡಿದರು.
ಚಿಂತಕರೂ, ಲೇಖಕರೂ ಆದ ಡಾ.ಡಿ.ಮಂಗಳಾ ಪ್ರಿಯದರ್ಶಿನಿ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ‘ಕಾವ್ಯಮಂಡಲ’ ಮಾನ್ಯತಾ ಸಂಸ್ಥೆಯ ವಿದ್ಯಾರ್ಥಿಯಾಗಿ ಸಂಶೋಧನೆ ಕೈಗೊಂಡ ಇವರಿಗೆ ಕನ್ನಡ ವಿಶ್ವವಿದ್ಯಾಲಯದ ‘ಭಾಷಾ ನಿಕಾಯ’ದ ‘ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ’ದಿಂದ ಪಿಎಚ್.ಡಿ ಪದವಿ ದೊರೆತಿದೆ.
Ph.D ಎಂಬ ಅತ್ಯುನ್ನತ ಪದವಿ ಪಡೆಯುವಲ್ಲಿ ಮೂಲ ಕಾರಣಕರ್ತರಾಗಿ ತಾತ್ವಿಕ ಮಾರ್ಗದರ್ಶನ ನೀಡಿದ ಗುರುಗಳಾದ ದಿ. ಕಿ.ರಂ. ನಾಗರಾಜ್ ಅವರಿಗೆ ನಮನ ಸಲ್ಲಿಸಿದ್ದಾರೆ.
ಡಾ.ರಮೇಶ್ ಅವರಿಗೆ ಸುದ್ದಿವಾಣಿ ನ್ಯೂಸ್ ಎಡಿಟರ್ ಮಾಲತೇಶ್ ಅರಸ್ ಹರ್ತಿಕೋಟೆ ಹಾಗೂ ಸುದ್ದಿವಾಣಿ ನ್ಯೂಸ್ ಬಳಗ ಅಭಿನಂದಿಸುತ್ತದೆ.