ಪೆಮ್ಮನಹಳ್ಳಿಗೊಲ್ಲರಹಟ್ಟಿ ಘಟನೆ ವೈಭವೀಕರಿಸಿ ರಾಜಕಾರಣ ಮಾಡುವುದು ಬೇಡ

Chitradurga Special story State

ಸಿ.ಶಿವುಯಾದವ್
ಚಿತ್ರದುರ್ಗ: ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು, ಪೆಮ್ಮನಹಳ್ಳಿ ಕಾಡುಗೊಲ್ಲರಹಟ್ಟಿಯಲ್ಲಿ ಸಂಸದರಾದ ಎ.ನಾರಾಯಣಸ್ವಾಮಿರವರನ್ನು ಹಟ್ಟಿಯೊಳಕ್ಕೆ ಪ್ರವೇಶ ನೀಡದಿರುವುದಕ್ಕೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ವಿಷಾದ ವ್ಯಕ್ತಪಡಿಸಿದೆ.
ಜೊತೆಗೆ ಈ ಘಟನೆಯ ಹಿಂದೆ ಯಾವುದೋ ರಾಜಕೀಯ ಕೋಮುವಾದಿ ಷಡ್ಯಾಂತರ ಅಡಕವಾಗಿದೆ. ಈ ಹಿಂದಿನಿಂದಲೂ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹ ಘಟನೆಗಳು ಜರುಗಿರುವುದಿಲ್ಲ. ಸಂಸದ ನಾರಾಯಣಸ್ವಾಮಿರವರು ಚುನಾವಣಾ ಸಂದರ್ಭದಲ್ಲಿ ಬಹುತೇಕ ಎಲ್ಲಾ ಹಟ್ಟಿಗಳಿಗೂ ತೆರಳಿ ಮತಯಾಚನೆ ಮಾಡಿ ಬಹುತೇಕ ಕಾಡುಗೊಲ್ಲರ ಮತವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮತಯಾಚನೆಗೆ ಹಟ್ಟಿಗಳಿಗೆ ಹೋದಾಗ ಇಂತಹ ಘಟನೆಗಳು ತಮ್ಮ ಗಮನಕ್ಕೆ ಬರಲಿಲ್ಲವೇ? ಮತ ಕೇಳುವಾಗ ಮತ ಹಾಕಿಸಿಕೊಳ್ಳುವಾಗ ಇಂತಹ ಘಟನೆಗಳನ್ನು ತಾವು ಗಮನಿಸಲಿಲ್ಲವೇ? ಮತಯಾಚನೆಗೆ ಹೋದಾಗ ಮತ ಹಾಕಿಸಿಕೊಳ್ಳುವಾಗ ಇಲ್ಲದ ಅಸ್ಪøಶ್ಯತೆ ತಾವು ಗೆದ್ದ ನಂತರ ಹೇಗೆ ಬರಲು ಸಾಧ್ಯ. ಆದ್ದರಿಂದ ಇದರ ಹಿಂದೆ ಯಾವುದೋ ಕಾಣದ ಕೈಗಳು ಕೆಲಸ ಮಾಡಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಈ ಹಿಂದೆ ಜಿಲ್ಲೆಯನ್ನಾಳಿದ ಕೆ.ಹೆಚ್.ರಂಗನಾಥ್, ಡಿ.ಮಂಜುನಾಥ್, ಹೆಚ್.ಆಂಜನೇಯ, ಬಿ.ಎನ್.ಚಂದ್ರಪ್ಪನವರ ಅಧಿಕಾರ ಅವಧಿಯಲ್ಲಿ ಯಾವುದೇ ಇಂತಹ ಘಟನೆಗಳು ಜರುಗಿರುವುದಿಲ್ಲ. ಆದ್ದರಿಂದ ಕೂಡಲೇ ಈ ಘಟನೆಯ ಬಗ್ಗೆ ತನಿಖೆ ಸತ್ಯಾಸತ್ಯತೆಯನ್ನು ಕಂಡುಕೊಳ್ಳಬೇಕಾಗಿರುತ್ತದೆ. ಸಂಸದ ನಾರಾಯಸ್ವಾಮಿರವರು ಸಮಾಜ ಕಲ್ಯಾಣ ಮಂತ್ರಿಗಳಾದಾಗ ಜಿಲ್ಲಾ ಗೊಲ್ಲರ ಸಂಘವು ಅವರಿಗೆ ತ.ರಾ.ಸು ರಂಗ ಮಂದಿರದಲ್ಲಿ ಕರೆಯಿಸಿ ಸನ್ಮಾನ ಮಾಡಿರಲಿಲ್ಲವೇ? ಅಲ್ಲಿಂದ ಇಲ್ಲಿಯವರೆಗೂ ನಾರಾಯಣಸ್ವಾಮಿರವರು ಗೊಲ್ಲರಹಟ್ಟಿಗೆ ಮಾಡಿದ್ದೇನು? ಸಂಸದರೇ ತಿಳಿಸಬೇಕು?
ಕಾಡುಗೊಲ್ಲ ಸಂಸ್ಕøತಿಯು ಯಜಮಾನಿಕೆಯ ಸಂಸ್ಕøತಿಯನ್ನು ಹೊಂದಿರುವುದಿಲ್ಲ. ತಮ್ಮನ್ನು ತಾವೇ ದಂಡಿಸಿಕೊಂಡು ತಮ್ಮ ಆಚಾರ, ವಿಚಾರ, ನಡೆ, ನುಡಿ, ಪೂಜೆ, ಪುನಸ್ಕಾರ, ಹುಟ್ಟು, ಮುಟ್ಟುಗಳನ್ನು ತಮ್ಮ ಜನಾಂಗದ ಸಂಪ್ರದಾಯಕ್ಕನುಗುಣವಾಗಿ ನಡೆಸಿಕೊಂಡು ಬರುತ್ತಾ ಇರುತ್ತಾರೆ.
ಕಾಡುಗೊಲ್ಲ ಜನಾಂಗದಲ್ಲಿ ದೇವರ ಬಗ್ಗೆ ದೇವರ ಕಲ್ಪನೆಯ ಬಗ್ಗೆ ಕಾಡುಗೊಲ್ಲರ ವೀರಗಾರರ ಬಗ್ಗೆ, ಜನಾಂಗವು ಸಂಪೂರ್ಣ ನಂಬಿಕೆಯನ್ನಿಟ್ಟಿದ್ದು, ಕಾಡುಗೊಲ್ಲ ದೈವಗಳಿಗೆ ಕುಂದೂಂಟಾದರೆ ದೈವಗಳು ನಮ್ಮನ್ನು ಕ್ಷಮಿಸುವುದಿಲ್ಲ ಎಂಬ ಬಲವಾದ ನಂಬಿಕೆ ಜನಾಂಗದಲ್ಲಿರುವುದರಿಂದ ಇಂತಹ ಸಣ್ಣಪುಟ್ಟ ಘಟನೆಗಳು ಘಟಿಸುತ್ತಿರುತ್ತವೆ. ಇಂತಹ ಘಟನೆಗಳನ್ನೇ ಮಾಧ್ಯಮಗಳು ಮತ್ತು ರಾಜಕೀಯ ಪ್ರತಿನಿಧಿಗಳು, ವೈಭವೀಕರಿಸಿ ಇಡೀ ಕಾಡುಗೊಲ್ಲ ಜನಾಂಗವನ್ನು ಅವಮಾನಿಸಿ ಅವರ ಮೇಲೆ ದಬ್ಬಾಳಿಕೆ ಮಾಡುವುದನ್ನು ಕರ್ನಾಟಕ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘವು ತೀವ್ರವಾಗಿ ಖಂಡಿಸಿದೆ.
ಭಾರತ ಸರ್ವೋಚ್ಛ ನ್ಯಾಯಾಲಯವು ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೂ ಪ್ರವೇಶ ನೀಡಿ ಎಂದು ನೀಡಿರುವ ಆದೇಶವನ್ನು ದಿಕ್ಕರಿಸುವ ಕೋಮುವಾದಿಗಳು ಮತ್ತು ಜಾತಿವಾದಿಗಳು ಕಾಡುಗೊಲ್ಲರ ಬಗ್ಗೆ ಕೀಳಾಗಿ ಮಾತನಾಡುವುದು ಖಂಡನೀಯ. ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಅವಕಾಶ ನೀಡದಿರುವುದು ಮೌಡ್ಯವಲ್ಲವೇ? ಇದನ್ನು ಪ್ರಶ್ನಿಸುವ ಧೈರ್ಯ ಮಾಧ್ಯಮಗಳು ಮಾಡಬೇಕಲ್ಲವೇ? ಕಾಡುಗೊಲ್ಲರನ್ನು ಕಾಡುಗೊಲ್ಲರೆಂದು ಗುರುತಿಸಲು ಸುಮಾರು 70 ವರ್ಷ ಬೇಕಾಗಿತು. ಈಗಲೂ ಸಹ ಸರ್ಕಾರವು ಕಾಡುಗೊಲ್ಲರಿಗೆ ಕಾಡುಗೊಲ್ಲ ಎಂದು ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ?
ಕಾಡುಗೊಲ್ಲರಲ್ಲಿರುವಂತಹ ವೈಚಾರಿಕತೆಗಳು ಬೇರೆ ಯಾವುದೇ ಸಮಾಜದಲ್ಲಿರಲು ಸಾಧ್ಯವಿಲ್ಲ. ಏಕೆಂದರೆ ಕಾಡುಗೊಲ್ಲರು ಸಂಸ್ಕøತಿಯಲ್ಲಿ ಹೆಣ್ಣು ಮಕ್ಕಳು ಗಂಡ ಸತ್ತರೆ ಹೆಂಡತಿಯರು ತಾಳಿ ತೆಗೆಯುವುದಿಲ್ಲ, ಬಿಳಿಸೀರೆ ಹುಡುವುದಿಲ್ಲ. ಬಳೆ ಮತ್ತು ಕಾಲುಂಗರ ತೆಗೆಯುವುದಿಲ್ಲ, ಹೂವನ್ನು ಮುಡಿಯುತ್ತಾರೆ. ಮತ್ತು ಕಾಡುಗೊಲ್ಲರ ಕೆಲವು ಪಂಗಡಗಳಲ್ಲಿ ತಮ್ಮ ಆಚಾರ ವಿಚಾರಗನುಗುಣವಾಗಿ ತಮ್ಮ ಹೆಂಡತಿಯರಿಗೆ ತಾಳೆಯನ್ನೇ ಕಟ್ಟದೆ ತನ್ನ ಹೆಂಡತಿ ಎಂದು ಸ್ವೀಕರಿಸಿ ಜೀವನ ಪರಿಯಂತ ಅವಳೊಂದಿಗೆ ಸುಖ ಸಂಸಾರ ಮಾಡುವ ಪದ್ಧತಿ ನಮ್ಮಲ್ಲಿದೆ. ಇಂತಹ ವೈಚಾರಿಕತೆ ಯಾವ ಮುಂದುವರೆದ ಸಮುದಾಯದಲ್ಲಿದೆ ತಿಳಿಸಿ? ಇವೆಲ್ಲವೂ ಬೇರೆ ಸಮುದಾಯದವರು ಕಾಡುಗೊಲ್ಲರಿಂದ ಕಲಿಯಬೇಕಾದ ಸಂಸ್ಕಾರಗಳಲ್ಲವೇ?
ಕಾಡುಗೊಲ್ಲರಹಟ್ಟಿಗಳು ಬಹುತೇಕ ಕಾಡುಗೊಲ್ಲರ ಖಾಸಗಿಹಟ್ಟಿಗಳಾಗಿರುತ್ತವೆ. ಸ್ವಂತ ಒಡೆತನದಲ್ಲಿರುತ್ತವೆ? ಅವುಗಳಿಗೆ ಸರ್ಕಾರದಿಂದ ಯಾವುದೇ ಮಾನ್ಯತೆ (ಸ್ವಂತಿಕೆ) ಇರುವುದಿಲ್ಲ. ನಮ್ಮ ಹಟ್ಟಿಗಳು ಬಹುತೇಕವಾಗಿ ರಿ.ಸರ್ವೆ ನಂಬರ್ ಸ್ವಂತ ಜಮೀನುಗಳಲ್ಲಿ ಕಟ್ಟಿಕೊಂಡಿರುತ್ತೇವೆ. ಇವುಗಳ ಸಂಪೂರ್ಣ ರಕ್ಷಣೆ ನಮ್ಮದಾಗಿರುತ್ತದೆ.
ನಮ್ಮ ಹಟ್ಟಿಯೊಳಗೆ ಯಾರು ಬರಬೇಕು? ಯಾರು ಬರಬಾರದು? ಎಂಬುದನ್ನು ನಾವೇ ನಿರ್ಧರಿಸುತ್ತೇವೆ. ಏಕೆಂದರೆ ಅವುಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿ ಎಂದು ನೂರಾರು ಮನವಿಗಳನ್ನು ನೀಡಿ ಅನೇಕ ಹೋರಾಟಗಳನ್ನು ನಡೆಸಿದರು ಆಡಳಿತ ನಡೆಸಿದ ಯಾವುದೇ ಸರ್ಕಾರಗಳು ಕಂದಾಯ ಗ್ರಾಮಗಳು ಮಾಡುವಲ್ಲಿ ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಡುಗೊಲ್ಲರಹಟ್ಟಿ ಪ್ರವೇಶಿಸಲು ಕಾಡುಗೊಲ್ಲರ ಹಟ್ಟಿಗಳ ಮುಖಂಡರ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕಾಗುತ್ತದೆ, ನಮ್ಮ ಹಟ್ಟಿಗಳ ಖಾಸಗಿತನಕ್ಕೆ ಸಂವಿಧಾನ ಬದ್ಧವಾಗಿ ಧಕ್ಕೆಯುಂಟಾಗಲು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘವು ಬಿಡುವುದಿಲ್ಲ ಎಂದು ತಿಳಿಸಿದೆ.
ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಹಟ್ಟಿಯೊಳಗೆ ಯಾರು ಬರಬೇಕು? ಯಾರು ಬರಬಾರದು? ಎಂಬುದನ್ನು ನಮ್ಮ ಹಟ್ಟಿಯ ಮುಖಂಡರೇ ನಿರ್ಧರಿಸುತ್ತಾರೆ. ಇದನ್ನು ನಿರ್ಧರಿಸುವ ಹಕ್ಕು ಸರ್ಕಾರಕ್ಕೂ ಜನಪ್ರತಿನಿಧಿಗಳಿಗೂ ಇರುವುದಿಲ್ಲ. ಕಾಡುಗೊಲ್ಲರ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಬಹು ಹಳೇಯ ಬುಡಕಟ್ಟು ಜನಾಂಗವಾದ ಕಾಡುಗೊಲ್ಲರನ್ನು ಇಲ್ಲಿಯವರೆಗೂ ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ ಚಕಾರವೆತ್ತುತ್ತಿಲ್ಲ. ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ಸಹ ಕರ್ನಾಟಕ ಸರ್ಕಾರ ನೀಡುತ್ತಿಲ್ಲ.
ನಮ್ಮ ಸಮಾಜವು ಸಮಾಜದ ಮುಖ್ಯವಾಹಿನಿಯಿಂದ ಬಹುದೂರವಿದ್ದು, ನಮ್ಮಲ್ಲಿರುವ ಆಚಾರ-ವಿಚಾರ, ನಡೆ-ನುಡಿ, ಹುಟ್ಟು-ಮುಟ್ಟು, ಪೂಜೆ-ಪುನಸ್ಕಾರ ಇವುಗಳ ಬಗ್ಗೆ ಅಪಾರ ನಂಬಿಕೆ ಇರುವುದರಿಂದ ಯಾವುದು ನಂಬಿಕೆ, ಯಾವುದು ಮೂಡನಂಬಿಕೆ ನಮ್ಮ ಆಚಾರಗಳಲ್ಲಿ ಯಾವುದು ಮೌಢ್ಯ? ಯಾವುದು ಮೌಢ್ಯವಲ್ಲ ಎಂಬುದು ಇನ್ನು ತರ್ಕದಲ್ಲೇ ಇರುವುದರಿಂದ ನಮ್ಮ ಜನರು ಕೆಲವು ನಂಬಿಕೆಗಳನ್ನು ಕೆಲವು ಮೂಡ ನಂಬಿಕೆಗಳನ್ನು ಅನುಸರಿಸಿಕೊಂಡು ಬರುತ್ತಾ ಇರುತ್ತಾರೆ. ಅವು ಪ್ರಸ್ತುತ ಸಮಾಜಕ್ಕೆ ಸರಿಯೊಂದಬೇಕಾದರೆ ಸಮಯ ಬೇಕಾಗಿರುತ್ತದೆ.
ಸಮಯ ಕಳೆದಂತೆ ಮೂಡ ನಂಬಿಕೆಗಳು ಕಡಿಮೆಯಾಗಿ ಸ್ವಸ್ತ ಸಮಾಜದ ಕಡೆ ತಿರುಗಬಹುದಾಗಿರುತ್ತದೆ. ಅಲ್ಲಿಯತನಕ ಜನಪ್ರತಿನಿಧಿಗಳು, ಅಧಿಕಾರಿಗಳು ಇತರೆ ಮುಖಂಡರು ಕಾಡುಗೊಲ್ಲ ಸಮಾಜದ ಮೇಲೆ ಘಾಸಿ ಮಾಡುವಂತಹ ವಿಭಜಿಸುವಂತಹ ಹೇಳಿಕೆಗಳನ್ನು ಕೆಲಸಗಳನ್ನು ಮಾಡಬಾರದೆಂದು ಸಂಘವು ಅವರಲ್ಲಿ ಮನವಿ ಮಾಡುತ್ತದೆ.
ಒಂದು ವೇಳೆ ಯಾವುದೇ ದುಷ್ಟಶಕ್ತಿಗಳು ನಮ್ಮ ಸಮಾಜದ ಮೇಲೆ ದಬ್ಬಾಳಿಕೆ ಮತ್ತು ಘಾಸಿಗೊಳಿಸಿದರೆ ನಮ್ಮ ಆಚಾರ-ವಿಚಾರ, ನಡೆ-ನುಡಿ, ಪೂಜೆ ಪುನಸ್ಕಾರಗಳಿಗೆ ಧಕ್ಕೆಯುಂಟಾಗುವಂತೆ ಮಾಡುವ ಯಾವುದೇ ಶಕ್ತಿಗಳನ್ನು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘವು ಖಂಡತುಂಡಾಗಿ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷರಾದ ಶಿವುಯಾದವ್ ಎಚ್ಚರಿಸಿದ್ದಾರೆ
(ಹೆಚ್ಚಿನ ಮಾಹಿತಿಗಾಗಿ 9448178502)

1 thought on “ಪೆಮ್ಮನಹಳ್ಳಿಗೊಲ್ಲರಹಟ್ಟಿ ಘಟನೆ ವೈಭವೀಕರಿಸಿ ರಾಜಕಾರಣ ಮಾಡುವುದು ಬೇಡ

Leave a Reply

Your email address will not be published. Required fields are marked *