ಹೌದು ನಮ್ಮ ಸಿದ್ದರಾಮಯ್ಯ
ಸಿದ್ರಾಮುಲ್ಲಖಾನರೇ ಏನೀಗ…..?
ಅವರು ಸಿದ್ದು ಫರ್ನಾಂಡಿಸ್
ಅವರು ಸಿದ್ದರಾಮ್ ಸಿಂಗ್
ಅವರು ಸಿದ್ದರಾಮೇಗೌಡ
ಸಿದ್ದರಾಮಾ ನಾಯ್ಕ
ಸಿದ್ದರಾಮ ನಾಯ್ಕರ್
ಸಿದ್ದರಾಮ ಒಡ್ಡರ್
ಸಿದ್ದರಾಮ ಹಡಪದ
ಸಿದ್ದರಾಮ ಬಡಿಗೇರ
ಸಿದ್ದರಾಮ ಆಚಾರ್
ಸಿದ್ದರಾಮ ಮೇದಾರ
ಸಿದ್ದರಾಮ ಭಟ್ಟ
ಸಿದ್ದರಾಮ ಹರಿಜನ್
ಸಿದ್ದರಾಮ ಕಲಾಲ್
ಸಿದ್ದರಾಮ ಭಜಂತ್ರಿ
ಸಿದ್ದರಾಮ ಈಡಿಗೇರ್
ಸಿದ್ದರಾಮ ಸ್ವಾಮಿ
ಸಿದ್ದರಾಮ ಮಡಿವಾಳ್
ಸಿದ್ದರಾಮ ಶೆಟ್ಟಿ
ಸಿದ್ದರಾಮ ಕೋಲಿ
ಸಿದ್ದರಾಮ ಸುಣಗಾರ
ಸಿದ್ದರಾಮ ಕಂಬಾರ
ಸಿದ್ದರಾಮ ಮಾದಾರ
ಸಿದ್ದರಾಮಗೊಂಡ
ಸಿದ್ದರಾಮ ಮರಾಠಿ
ಸಿದ್ದರಾಮ ಕುಣಬಿ
ಸಿದ್ದರಾಮ ಹಸಲರ
ಸಿದ್ದರಾಮ ಬಡಗರ
ಸಿದ್ದರಾಮ ಇರುಳರ
ಸಿದ್ದರಾಮ ಸೋಲಿಗ
ಸಿದ್ದರಾ ಕೊರಗರ
ಸಿದ್ದರಾಮ ಕಮ್ಮಾರ್
ಸಿದ್ದರಾಮೋಜಿ ರಾವ್
ಸಿದ್ದರಾಮ ಸಿಂಪಿ
ಸಿದ್ದರಾಮ ಕೊರಮರ್
ಸಿದ್ದರಾಮ ದಕ್ಕಲಿ
ಸಿದ್ದರಾಮ ನಾಯ್ಡು
ಸಿದ್ದರಾಮ್ ರೆಡ್ಡಿ
ಸಿದ್ದರಾಮ ಜೈನ್
ಸಿದ್ದರಾಮ ಅಯ್ಯಂಗಾರ್
ಸಿದ್ದರಾಮ ಉಪ್ಪಾರ
ಸಿದ್ದರಾಮ ನೇಕಾರ
ಸಿದ್ದರಾಮ ಬಳೆಗಾರ
ಸಿದ್ದರಾಮ ಬಣಕಾರ
ಸಿದ್ದರಾಮ ಕೋಟೆಕಾರ
ಸಿದ್ದರಾಮ ಗುಡಿಗಾರ
ಸಿದ್ದರಾಮ್ ಕಲಂದರ್
ಸಿದ್ದರಾಮ ಕಬ್ಬಲಿ
ಸಿದ್ದರಾಮ ಬಂಜಾರ
ಸಿದ್ದರಾಮ ತಳವಾರ
ಸಿದ್ದರಾಮ ಚಲವಾದಿ
ಸಿದ್ದರಾಮ ದೊಂಬರ
ಸಿದ್ದರಾಮ ಹಕ್ಕಿಪಿಕ್ಕಿ
ಸಿದ್ದರಾಮ ಗೌಳೇರ
ಎಲ್ಲವೂ ಹೌದು. ಸಿದ್ದರಾಮಯ್ಯ ಎಲ್ಲರ ನಾಯಕ. ಒಂದು ಸಮುದಾಯದ ಹೆಸರನ್ನು ಬಳಸಿ ಸಿದ್ರಾಮುಲ್ಲಾ ಖಾನ್ ಎಂದು ಹೀಯಾಳಿಸಿಬಿಟ್ಟರೆ ಚುನಾವಣೆ ಗೆದ್ದುಬಿಡುತ್ತೇವೆಂದು ತಿಳಿದಿರುವ ಹೊಲಸು ಹಿಂದುತ್ವವಾದಿಗಳೇ ಎಲ್ಲರ ನಾಯಕನಾದ ಸಿದ್ದರಾಮಯ್ಯರನ್ನು ನೀವೇನೂ ಮಾಡಿಕೊಳ್ಳಲಾರಿರಿ. ಎಲ್ಲ ಸಮುದಾಯದ ರಾಮಯ್ಯ ನಿಜವಾದ ‘ರಾಮ’ ನಮ್ಮ ಸಿದ್ದರಾಮಯ್ಯ. ನಿಮ್ಮ ಹಾಗೆ ನಾಗರಪುರದ ಹಾವುಗಳ ಗುಲಾಮ ಅಲ್ಲ. ನೀವೆಷ್ಟು ಹೀಯಾಳಿಸುತ್ತೀರೊ, ಕುಚೇಷ್ಟೆ, ಕುಚೋದ್ಯದ ಮಾತುಗಳನ್ನಾಡುತ್ತೀರೋ ಅದೆಲ್ಲವೂ ನಿಮ್ಮ ಪಾಲಿನ ಮುಳ್ಳೇ ಆಗುತ್ತವೆಂದು ಮರೆಯಬೇಡಿರಿ. ನಿಮ್ಮ ಹಾಗೆ ಸಾವಿರ ಸಾವಿರ ಕೋಟಿ ಹಣವನ್ನು ಭ್ರಷ್ಟಾಚಾರ ಮಾಡಿದ ಕಳ್ಳ ಅಲ್ಲ ಸಿದ್ದರಾಮಯ್ಯ. ಇದೆಲ್ಲದನ್ನೂ ಪ್ರಜ್ಞಾವಂತರು, ಕರ್ನಾಟಕದ ಶೋಷಿತ ಸಮುದಾಯಗಳು, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಸಭ್ಯ ಜನಕೋಟಿ ಗಮನಿಸುತ್ತಿದೆ. ಪಾಠ ಕಲಿಸುವ ಹೊತ್ತು ಸಮೀಪಕ್ಕೆ ಬಂದಿದೆ. ನಾಡಿನ ಎಲ್ಲ ಸಮುದಾಯಗಳ ಪ್ರೀತಿ ಅಭಿಮಾನ ಗಳಿಸಲಾಗದ ನಿಮ್ಮಂಥಹ ದರಿದ್ರರ ವಿಕೃತ ಕುಚೇಷ್ಟೆ ಮತ್ತು ಗೂಂಡಾ ಹಲಾಲ್ತೋಪಿ ರಾಜಕೀಯಕ್ಕೆ ಅಂತ್ಯಕಾಲ ಸಮೀಸಿದೆ. ಈ ನಮ್ಮ ಪ್ರೀತಿಯ ಭಾರತ ದೇಶದಲ್ಲಿ ದ್ವೇಷ ಎಂದೂ ಗೆದ್ದಿಲ್ಲ. ಗೆಲ್ಲುವುದೂ ಇಲ್ಲ.
–ಸುರೇಶ ಎನ್ ಶಿಕಾರಿಪುರ. ಶಿವಮೊಗ್ಗ ಜಿಲ್ಲೆ