ಚಾಮುಂಡಿ ಸನ್ನಿಧಿಗೆ ದ್ರೌಪದಮ್ಮನ ಆಗಮನ..: ರಾಷ್ಟ್ರಪತಿ ಅವರಿಂದ ದಸರಾ ಉದ್ಘಾಟನೆ: ಸಿಎಂ

Nation

 

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿದ ಮೊದಲ ರಾಷ್ಟ್ರಪತಿ

 

 

ಮಾಲತೇಶ್ ಅರಸ್
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಈ ಬಾರಿಯ ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.

ಈ ಬಾರಿ ದಸರಾ ಯಾರು ಉದ್ಘಾಟನೆ ಮಾಡಲಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.

ಮೈಸೂರು ದಸರಾ ಸೆಪ್ಟೆಂಬರ್ 26 ರಿಂದ ಆರಂಭ ಗೊಳ್ಳಲಿದ್ದು, ಅಕ್ಟೋಬರ್ 5 ವರೆಗೆ ನಡೆಯಲಿದೆ. ಪ್ರತಿಷ್ಠಿತ ಮೈಸೂರು ದಸರಾಗೆ ಸರ್ಕಾರ ಈಗಾಗಲೇ ಹಲವು ಸುತ್ತಿನ ಪೂರ್ವಭಾವಿ ಸಭೆ ನಡೆಸಿದೆ.

ಈಗಾಗಲೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸ್ಥಳೀಯ ನಾಯಕರನ್ನೊಳಗೊಂಡ ಸಮಿತಿ ಹಲವು ಸುತ್ತಿನ ಸಭೆ ನಡೆಸಿದೆ. ಕೊರೋನಾ ಕಾರಣ ಕಳೆದ ವರ್ಷ ಸರಳ ದಸರಾ ಆಚರಿಸಲಾಗಿತ್ತು.

ದೇಶದ ಮೊದಲ ಪ್ರಜೆ ಕೈಯಿಂದ ಈ ಬಾರಿ ದಸರಾ ಉದ್ಘಾಟನೆಯಾಗುತ್ತದೆ ಎಂಬುದು ಬಹಳ ಖುಷಿ ನೀಡಿದೆ. ರಾಜ್ಯದಿಂದ ಎಲ್ಲರೂ ಪಾಲ್ಗೊಂಡಿರುತ್ತಾರೆ. ಮುಖ್ಯವಾಗಿ ದಸರಾ ಉದ್ಘಾಟನೆ ರಾಷ್ಟ್ರಪತಿ ಅವರಿಂದ ಆಗುತ್ತದೆ. ರಾಷ್ಟ್ರಪತಿಯವರು ದಸರಾ ಉದ್ಘಾಟನೆಗಾಗಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಅಗತ್ಯ ಭದ್ರತೆ ಒದಗಿಸಲಾಗುತ್ತದೆ ಎಂದು ಹೇಳಿದರು.

ಈ ಬಾರಿ ಅದ್ಧೂರಿ ನಾಡಹಬ್ಬ

ದಸರಾ ಆಚರಣೆ ಬಗ್ಗೆ ಹಿಂದೆಯೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾಡಹಬ್ಬ ದಸರಾವನ್ನು ಈ ಬಾರಿ ಅದ್ದೂರಿಯಾಗಿ ಮಾಡುವುದು ಶಾಸಕರ ಅಭಿಲಾಷೆಯಾಗಿದೆ. ಮೈಸೂರು ದಸರಾ, ಕರ್ನಾಟಕದ ಪರಿವರ್ತನೆಯ ಹಬ್ಬವಾಗಬೇಕು. ಕೊರೊನಾದಿಂದ 2 ವರ್ಷ ಸರಳ ದಸರಾ ಆಚರಿಸಲಾಯ್ತು. ಆದ್ರೆ ಈ ಬಾರಿ ಅದ್ಧೂರಿ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ದಸರಾ ಕುರಿತು ಹೆಚ್ಚಿನ ಪ್ರಚಾರ ಕೊಡಲು ತೀರ್ಮಾನ ಮಾಡಲಾಗಿದೆ ಎಂದರು.

 

15 ದಿನ ಮುಂಚೆ ವಸ್ತು ಪ್ರದರ್ಶನ

ದಸರಾ ಬ್ರಾಂಡ್ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ತೀರ್ಮಾನ ಮಾಡಲಾಗಿದೆ. ಅಲ್ಲಿನ ವಸ್ತು ಪ್ರದರ್ಶನ 15 ದಿನದ ಮುಂಚೆಯೇ ನಡೆಸಲು ತೀರ್ಮಾನ ಮಾಡಲಾಗಿದೆ. ಸ್ಥಳೀಯ ಕಲಾಕಾರರಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ದಿನಕ್ಕೆ ಒಬ್ಬರು ರಾಷ್ಟ್ರೀಯ ಕಲಾಕಾರರನ್ನು ಮುಖ್ಯ ಆಕರ್ಷಕರಾಗಿ ಕರೆಯಲು ತೀರ್ಮಾನ ಮಾಡಲಾಗಿದೆ. ಶ್ರೀರಂಗಪಟ್ಟಣ ಹಾಗೂ ಚಾಮರಾಜನಗರದಲ್ಲೂ ದಸರಾ ಆಚರಣೆ ಮಾಡಲು ತೀರ್ಮಾನ ಮಾಡಿರೋದಾಗಿ ಸಿಎಂ ತಿಳಿಸಿದರು.

 

 

Leave a Reply

Your email address will not be published. Required fields are marked *