ಸನಾತನಿಗಳ ಭಯೋತ್ಪಾದನಾ ಕೃತ್ಯ…

Special story State

ಶರಣ ವಿಜಯೋತ್ಸವ: ಮರಣವೇ ಮಹಾನವಮಿ

ಸನಾತನಿಗಳ ಭಯೋತ್ಪಾದನಾ ಕೃತ್ಯ…

ಹನ್ನೆರಡನೇ ಶತಮಾನದಲ್ಲಿ ಶರಣರ ಸಾಮಾಜಿಕ ಕ್ರಾಂತಿಯಿಂದ ಕಂಗಾಲಾಗಿದ್ದ ವಿಪ್ರ ಗೋವಿಂದ ಭಟ್ಟ ˌ ಮುಂಕುಂದ ಭಟ್ಟ ˌ ಕ್ರಷ್ಣ ಪೆದ್ದಿ ಮುಂತಾದ ಕರ್ಮಠ ವೈದಿಕರು, ಕಲ್ಯಾಣದಲ್ಲಿ ಲಿಂಗಾಯತ ಧರ್ಮೀಯರ ವಿವಾಹವನ್ನು “ಪ್ರತಿಲೋಮ ವಿವಾಹ” ಎಂದೂˌ ಇದರಿಂದ “ವರ್ಣಸಂಕರ”ವಾಯ್ತೆಂದು ಬೊಬ್ಬೆ ಹಾಕಿ, ದೊರೆ ಬಿಜ್ಜಳನ ಮೇಲೆ ಒತ್ತಡ ಹಾಕಿ ಮದುವೆಗೆ ಕಾರಣರಾದ ಶರಣರಿಗೆ “ಎಳೆಹೂಟೆ” ಶಿಕ್ಷೆ ವಿಧಿಸುತ್ತಾರೆ. ವೈದಿಕರ ಈ ನಿರ್ಧಾರ ಕಲ್ಯಾಣದ ವಿಪ್ಲವಕ್ಕೆ ಮುನ್ನುಡಿಯಾಗುತ್ತದೆ.

ಹರಳಯ್ಯ ˌ ಶೀಲವಂತ ಮತ್ತು ಮಧುವರಸರಿಗೆ ಕರ್ಮಠರು ಎಳೆಹೂಟೆ ಶಿಕ್ಷೆ ವಿಧಿಸಿ, ಅವರನ್ನು ಆನೆ ಕಾಲಿಗೆ ಕಟ್ಟಿ ರಾಜಬೀದಿಯಲ್ಲಿ ಎಳೆಸುತ್ತಾರೆ. ಕಾದ ಕಬ್ಬಿಣದ ಸಲಾಕೆಯಿಂದ ಕಣ್ಣುಗಳನ್ನು ಕೀಳಿಸುತ್ತಾರೆ. ಆನಂತರ ಶವಗಳ ಅಂಗಾಂಗಗಳನ್ನು ಕೊಚ್ಚಿ ಹಾಕಿ ನಾಯಿ-ನರಿ, ಪ್ರಾಣಿ-ಪಕ್ಷಿಗಳಿಗೆ ಆಹಾರವಾಗುವಂತೆ ಮಾಡಿ, ಭೀಬತ್ಸತೆ ಮೆರೆದು ಜನರಲ್ಲಿ ಭಯವನ್ನು ಹುಟ್ಟಿಸುತ್ತಾರೆ. ಅದಕ್ಕೆ ಅವರು ನೀಡುವ ಕಾರಣವು ಈ ಕೆಳಗಿನಂತಿದೆ ;

ಭರತ ಖಂಡದಲ್ಲಿ ಬ್ರಾಹ್ಮಣರ ಅನ್ಯಾಯ ಪ್ರಶ್ನಿಸುವವರಿಗೆ ಇಂಥ ಕ್ರೂರ ಶಿಕ್ಷೆಯಾಗುವುದೆಂಬ ಸಂದೇಶ ನೀಡಿ ಜನರನ್ನು ಭಯಭೀತರಾಗಿಸುವುದು.

ಮುಂದಿನ ದಿನಗಳಲ್ಲಿ ಯಾರೂ ಬ್ರಾಹ್ಮಣರ ಅನ್ಯಾಯˌ ಅನಾಚಾರಗಳನ್ನು ಪ್ರಶ್ನಿಸುವ ಧೈರ್ಯ ತೋರಕೂಡದು.

ಇತಿಹಾಸದುದ್ದಕ್ಕೂ ಬ್ರಾಹ್ಮಣರ ಅನಾಚಾರಗಳು ಪ್ರಶ್ನಿಸುವವರು ಇಂಥ ಬಿಭೀತ್ಸ ಘಟನೆಗಳನ್ನು ಕಾಲಾಂತರಗಳಲ್ಲೂ ನೆನಪಿಡಬೇಕು.

ಸನಾತನಿಗಳದ್ದು…
ಭಯವೇ ಧರ್ಮದ ಮೂಲವಯ್ಯ..!

ಶರಣರದ್ದು…
ದಯವೇ ಧರ್ಮದ ಮೂಲವಯ್ಯ..!

ಡಾ. ಜೆ ಎಸ್ ಪಾಟೀಲ

 

(ಮಾಹಿತಿ: ಸಂಗಮದೇವ್, ಹಿರಿಯ ಪತ್ರಕರ್ತರು. ಸುದ್ದಿವಾಣಿ  ಸಲಹೆಗಾರರು)

2 thoughts on “ಸನಾತನಿಗಳ ಭಯೋತ್ಪಾದನಾ ಕೃತ್ಯ…

  1. ಪ್ರಕಟಿಸಿದ್ದಕ್ಕಾಗಿ ಪತ್ರಿಕಾ ಬಳಗಕ್ಕೆ ಧನ್ಯವಾದಗಳು. ವಿಶೇಷವಾಗಿ ಸಗಮದೇವ ಅವರಿಗೂ ಧನ್ಯವಾದಗಳು.

  2. ಪ್ರಕಟಿಸಿದ್ದಕ್ಕೆ ಧನ್ಯವಾದಗಳು. ಸಂಗಮದೇವ ಅವರಿಗೂ ವಿಶೆಷ ಧನ್ಯವಾದಗಳು.

Leave a Reply

Your email address will not be published. Required fields are marked *