ರಾಯಣ್ಣ ಮತ್ತು ಅಂಬೇಡ್ಕರ್‌ರನ್ನು ಎಂದಿಗೂ ಜಾತಿಗೆ ಸೀಮಿತಗೊಳಿಸಬಾರದು

Chitradurga Districts Bureau State

“ಸಂಗೊಳ್ಳಿ ರಾಯಣ್ಣ ಯುವಜನರ ಜಗದ್ಗುರು” ಅರ್ಥಪೂರ್ಣ ರಾಯಣ್ಣ ಬಲಿದಾನ್ ದಿವಸ್

www.suddivaani.com

ಹಿರಿಯೂರು: ಜ೨೬: ಸಂವಿಧಾನ ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯ ಸೇನಾನಿ ಕ್ರ‍್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಯುವಸಮುದಾಯದ ಜಗದ್ಗುರುಗಳು ಎಂದು ಕ್ರ‍್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಜಾಗೃತಿ ವೇದಿಕೆ ರಾಜ್ಯ ಸಂಚಾಲಕರಾದ ಮಾಲತೇಶ್ ಅರಸ್ ಹೇಳಿದರು.

ಅವರು ಕ್ರ‍್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಜಾಗೃತಿ ವೇದಿಕೆ ವತಿಯಿಂದ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿರುವ ಕ್ರ‍್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ “ಸಂಗೊಳ್ಳಿ ರಾಯಣ್ಣ ಬಲಿದಾನ್ ದಿವಸ್” ಅಂಗವಾಗಿ ರಾಯಣ್ಣ ಭಾವಚಿತ್ರದ ಧ್ವಜಾರೋಹಣ ಮಾಡಿ ಮಾತನಾಡಿದ ಅವರು  ಕ್ರ‍್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುಟ್ಟಿದ ದಿನ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ರಾಯಣ್ಣ ಹುತಾತ್ಮರಾದ ದಿನ ದೇಶಕ್ಕೆ ಗಣರಾಜ್ಯೋತ್ಸವ ಸಂದಿದೆ ಅದೇ ನಮಗೆ  ಹೆಮ್ಮ ಎಂದರು.
ಗಣರಾಜ್ಯೋತ್ಸವದಲ್ಲಿ ಅಂಬೇಡ್ಕರ್ ಹಾಗೂ ರಾಯಣ್ಣರನ್ನು ಸ್ಮರಿಸುವ ಸದಾವಕಾಶ ನಮಗೆ ಲಭಿಸಿದೆ. ಇಲ್ಲಿ  ಸಂಗೊಳ್ಳಿ ರಾಯಣ್ಣರನ್ನು ಮತ್ತು  ಸಂಂವಿಧಾನ ಶಿಲ್ಪಿ  ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಎಂದಿಗೂ ಒಂದು ಜಾತಿಗೆ ಸೀಮಿತಗೊಳಿಸಬಾರದು ಇಬ್ಬರು ದೇಶದ  ಮಹಾಶಕ್ತಿಗಳು ಎಂದರು.

( ಹಿರಿಯೂರು ನಗರದಲ್ಲಿ ನೂತನವಾಗಿ ಉದ್ಘಾಟನೆಯಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ರಾಯಣ್ಣ ಅಭಿಮಾನಿಗಳು ಮಾಲಾರ್ಪಣೆ ಮಾಡಿದರು)

ಹಿರಿಯೂರು ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮುದ್ದಲಿಂಗಪ್ಪ ಮಾತನಾಡಿ, ಸೇನಾನಿಯ ಹುತಾತ್ಮ ಕಾರ್ಯದಲ್ಲಿ ಸೈನಿಕನಾಗಿ ನಾನು ಅತ್ಯಂತ ಪ್ರೀತಿಯಿಂದ ಭಾಗವಹಿಸಿದ್ಧೇನೆ. ನಾನು ಸೈನಿಕನಾಗಿದ್ದಾಗ ಅನೇಕ ಬಾರಿ ರಾಯಣ್ಣ ಅವರನ್ನು ಸ್ಮರಿಸಿದ್ದೆ ಇಂದು ಅವರ ಕಾರ್ಯ ಶ್ರೇಷ್ಠವಾಗಿದೆ ನಾನು ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಅಧ್ಯಕ್ಷ ಕಾಂತರಾಜ್ ಹುಲಿ ಮಾತನಾಡಿ, ಕನ್ನಡನಾಡು, ನುಡಿ ದೇಶಪ್ರೇಮಕ್ಕಾಗಿ ರಾಯಣ್ಣ ಇಂದು ಬಲಿಯಾಗಿದ್ದಾರೆ. ಅವರಂತೆ ನಾವು ನಡೆಯಬೇಕಿದೆ. ದೇಶಕ್ಕಾಗಿ ಮಕ್ಕಳನ್ನು ಸೈನ್ಯಕ್ಕೆ ಹೆಚ್ಚು ಕಳಿಸಬೇಕು. ರಾಯಣ್ಣನಂತ ಮಕ್ಕಳು ಮನೆ ಮನೆಯಲ್ಲೂ ಬೆಳೆಸಬೇಕು ಎಂದರು.

ಕಾರ್ಯಕ್ರಮದ ನಂತರ ಹಿರಿಯೂರು ನಗರದಲ್ಲಿ ನೂತನವಾಗಿ ಉದ್ಘಾಟನೆಯಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಜಾಗೃತಿ ವೇದಿಕೆವತಿಯಿಂದ ಮಾಲಾರ್ಪಣೆ ಮಾಡಲಾಯಿತು.

ಕ್ರ‍್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಜಾಗೃತಿ ವೇದಿಕೆ  ಸಂಘಟನಾ ಕಾರ್ಯದರ್ಶಿ ಜಗದೀಶ್ ಭಂಡಾರಿ, ಹರ್ತಿಕೋಟೆ ನೇಕಾರ ಸಂಘದ ಕಾರ್ಯದರ್ಶಿ ಪರಮಶಿವ, ಎಸ್.ಎಲ್. ಶಿವಕುಮಾರ್, ರಾಯಣ್ಣ ಅಭಿಮಾನಿ ಬಳಗದ ನಿಜಲಿಂಗಪ್ಪ, ಜಯಣ್ಣ, ವೀರೇಶ್, ಮಹೇಶ್ ವೀರಣ್ಣ ಲಿಂಗೇಶ್, ಬಸವರಾಜ್ ಇದ್ದರು.

Leave a Reply

Your email address will not be published. Required fields are marked *