ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಬಡಿದಾಟ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗಿಡ್ಡೋಬನಹಳ್ಳಿ ಅಶೋಕ್, ಜಿಪಂ ಮಾಜಿ ಅಧ್ಯಕ್ಷೆ ಗಂಡ ಕೆಪಿಸಿಸಿ ಸಹ ಸದಸ್ಯ ಕಂದಿಕೆರೆ ಸುರೇಶ್‌ಬಾಬು ಮೇಲೆ FIR ದಾಖಲು
(EX MLA ಡಿ.ಸುಧಾಕರ್, Dif MLC ಬಿ.ಸೋಮಶೇಖರ್)
ಚಿತ್ರದುರ್ಗ: ವಿಧಾನಸಭಾ ಚುನಾವಣೆ ಇನ್ನೂ ಒಂದು ವರ್ಷ ಇರುವ ಮುನ್ನವೇ ಕಾಂಗ್ರೆಸ್ ನಲ್ಲಿ ಒಳಜಗಳಗಳು ಬೀದಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಡಾ.ಬಾಬು ಜಗಜೀವನ್ ರಾಮ್ ಜಯಂತಿಗೂ ಮುನ್ನ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಬಡಿದಾಟ ನಡೆದಿದೆ. ಇದು ಪಕ್ಕಾ ಟಗರು ಸಿದ್ದು ಮತ್ತು ಡಿಕೆಶಿ ಶಿಷ್ಯರ ಕಾಳಗವಾಗಿ ಕೈ ಇಬ್ಬಾಗವಾಗಿದೆ.

ಇದು ಕಾಂಗ್ರೆಸ್ ಸಂಸ್ಕೃತಿ, ಇದು ಕೈ ನಾಯಕರ ಪ್ರಲಾಪ, ಇದು ಅಪ್ಪಟ ಗೂಂಡಾ ವರ್ತನೆ, ಡಿ.ಕೆ. ಶಿವಕುಮಾರ್ ವರ್ಸಸ್ ಸಿದ್ದರಾಮಯ್ಯ ಬಣಗಳ ಅಸಲಿ ಜಗಳ. ಇದು ಹಿಂದೂ ಮತ್ತು ಮುಸ್ಲಿಂ ನಡುವಿನ ವಾರ್ ಹೀಗೆ ಹಿರಿಯೂರು ಕ್ಷೇತ್ರದ ಮತದಾರರೇ ಮಾತನಾಡುವಂತಾಗಿದೆ.
ಹೌದು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕೈ ಮುಖಂಡರ ನಡುವೆ ಘರ್ಷಣೆ ನಡೆದಿದೆ. ಮಾಜಿ ಸಚಿವ ಡಿ.ಸುಧಾಕರ್ ಮತ್ತು ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಬಿ. ಸೋಮಶೇಖರ್ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು ಮುಸ್ಲಿಂ ಯುವಕರನ್ನು ಥಳಿಸಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗಿಡ್ಡೋಬನಹಳ್ಳಿ ಅಶೋಕ್, ಜಿಪಂ ಮಾಜಿ ಅಧ್ಯಕ್ಷೆ ಗಂಡ ಕಂದಿಕೆರೆ ಸುರೇಶ್‌ಬಾಬು ಮೇಲೆ ಪ್ರಕರಣ ದಾಖಲಿಸಿ ಎಫ್ ಐ ಆರ್ ಹಾಕಲಾಗಿದೆ.

( ಇದೇ ಪ್ಲೆಕ್ಸ್ ಕಟ್ಟದಂತೆ ಗಲಾಟೆ ಮಾಡಿದ್ದು)
ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಕೈ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಮೂವರು ಮುಸ್ಲಿಂ ಕಾರ್ಯಕರ್ತರಾದ ಅಸ್ಲಂ ಭಾಷಾ, ಮಹಮ್ಮದ್ ಗಫರ್, ಸೈಯದ್ ಅಕ್ತಾರ್ ಭಾಷಾ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿನ್ನೆ ರಾತ್ರಿ ಹಿರಿಯೂರು ನಗರದಲ್ಲಿ ಸೋಮಶೇಖರ್ ಅಭಿಮಾನಿಗಳ ಬಳಗದಿಂದ ಅನೇಕರು ಪ್ಲೆಕ್ಸ್ ಕಟ್ಟುತ್ತಿದ್ದರು ಆಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗಿಡ್ಡೋಬನಹಳ್ಳಿ ಅಶೋಕ್, ಜಿಪಂ ಮಾಜಿ ಅಧ್ಯಕ್ಷೆ ಗಂಡ ಕೆಪಿಸಿಸಿ ಸಹ ಸದಸ್ಯ ಕಂದಿಕೆರೆ ಸುರೇಶ್‌ಬಾಬು ಮತ್ತು ಇತರರು ಗಲಾಟೆ ಮಾಡಿದ್ದಾರೆ. ಪ್ಲೆಕ್ಸ್ ಕಟ್ಟಬಾರದು ಎಂದು ಧಮಕಿ ಹಾಕಿ ಹಲ್ಲೆ ಮಾಡಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು ಎಫ್ ಐ ಆರ್ ನಲ್ಲಿ ದಾಖಲಾಗಿದೆ. ಹಲ್ಲೆಗೊಳಗಾದವರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


(ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗಿಡ್ಡೋಬನಹಳ್ಳಿ ಅಶೋಕ್, ಜಿಪಂ ಮಾಜಿ ಅಧ್ಯಕ್ಷೆ ಗಂಡ ಕೆಪಿಸಿಸಿ ಸಹ ಸದಸ್ಯ ಕಂದಿಕೆರೆ ಸುರೇಶ್‌ಬಾಬು ಮೇಲೆ ದಾಖಲಾದ FIR)
ಡಾ. ಬಾಬು ಜಗಜೀವನ್ ರಾಮ್ ಜಯಂತಿ ಮೂಲಕ ಶಕ್ತಿ ಪ್ರದರ್ಶನ ಮಾಡಲು ಡಿ. ಸುಧಾಕರ್ ಮುಂದಾಗಿದ್ದು ಸಿದ್ದರಾಮಯ್ಯ, ಡಿಕೆಶಿ ಬರುವ ಮುನ್ನ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಇನ್ನೂ ಮುಂಜಾನೆ ಮತ್ತು ರಾತ್ರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್, ಮಾಜಿ ಸಚಿವ ಆಂಜನೇಯ ಎದುರೇ ವಾಗ್ವಾದಕ್ಕಿಳಿದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಬಿ. ಸೋಮಶೇಖರ್ ಬರಬಾರದು ಎಂದು ವಾದಕ್ಕಿಳಿದಿದ್ದಾರೆ.
ಬೆಂಗಳೂರಿನಿಂದ ಆಗಮಿಸಿದ ಸೋಮಶೇಖರ್ ಮೇಲೆ ಮಾತಿಗಿಳಿದಿದ್ದಾರೆ. ಇದು ಸೋಮಶೇಖರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಕಾಂಗ್ರೆಸ್ ನಲ್ಲೂ ಅಲ್ಪಸಂಖ್ಯಾತರು, ಹಿಂದೂಗಳೆಂಬ ತಾರತಮ್ಯ ಆರೋಪ ಎದುರಾಗಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ನ ಹಣೆಬರಹ ಎಫ್ ಐ ಆರ್ ನಲ್ಲಿ ಅನಾವರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಾಯ್ತು ಸಿದ್ದರಾಮಯ್ಯ ಶಿಷ್ಯ ಸೋಮಶೇಖರ್ ಹವಾ..

ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ ಆಪ್ತ ಮಾಜಿ ಸಚಿವ ಡಿ.ಸುಧಾಕರ್ ಇಲ್ಲಿ ಎರಡು ಬಾರಿ ಗೆದ್ದು ಶಾಸಕರೂ, ಸಚಿವರೂ ಕಿಯೋನಿಕ್ಸ್ ನಿಗಮದ ಅಧ್ಯಕ್ಷರಾಗಿದ್ದರು. ಇದೀಗ ಸಿದ್ದರಾಮಯ್ಯ ಬಲಗೈ ಬಂಟ ಎನಿಸಿಕೊಂಡಿರುವ MLC ಚುನಾವಣೆಯ ಪರಾಜಿತ ಅಭ್ಯರ್ಥಿ ಬಿ. ಸೋಮಶೇಖರ್ ಹಿರಿಯೂರು ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದು ಸುಧಾಕರ್ ಬಣಕ್ಕೆ ನುಂಗಲಾರದ ತುತ್ತಾಗಿದೆ. ದಿನದಿಂದ ದಿನಕ್ಕೆ ಹೆಚ್ಚು ಪ್ರಚಾರಕ್ಕಾಗಿ ಹಳ್ಳಿಗಳತ್ತ ಗಮನ ಹರಿಸಿರುವ. ಕುರುಬ ಸಮುದಾಯದ ಬಿ. ಸೋಮಶೇಖರ್ ಅವರಿಗೆ ಈ ಬಾರಿ ಟಿಕೆಟ್ ಎಂಬ ಸುದ್ದಿ ಹಬ್ಬಿದ್ದು , ಈ ಕಾರ್ಯಕ್ರಮದಲ್ಲಿ ಮತ್ತೆ ಸೋಮಶೇಖರ್ ಬಂದರೆ ನಮಗೆ ಲಾಸು ಎಂದು ಈ ಗಲಾಟೆ ಮಾಡಿದ್ದಾರೆ. ಆದರೆ ಇದೀಗ ಹಿರಿಯೂರು ಜನರು ಇದರಿಂದ ಸೋಮಶೇಖರ್ ಹವಾ ಹೆಚ್ಚಾಗಿದೆ ಎನ್ನುತ್ತಿದ್ದಾರೆ. ಇದೀಗ ಇಬ್ಬರ ನಡುವಿನ ಹೋರಾಟ ಬೂದಿಉಚ್ಚಿದ ಕೆಂಡವಾಗಿದ್ದು ಸೋಮಶೇಖರ್ ಅವರು ನಾನು ಹಿರಿಯೂರು ಕ್ಷೇತ್ರದಲ್ಲಿ ಇರುತ್ತೇನೆ. ಸಿದ್ದರಾಮಯ್ಯ ಸಾಹೇಬರ ಆಶೀರ್ವಾದ ಇದೆ ಎನ್ನುತ್ತಿದ್ದಾರೆ.