ಕಾಂಗ್ರೆಸ್ ನಲ್ಲಿ ಯುವಶಕ್ತಿ ಉದಯ

ಈ ನಗರವಾಣಿ ನ್ಯೂಸ್
ಬೆಂಗಳೂರು; ಕಾಂಗ್ರೆಸಿನಲ್ಲಿ ಹೊಸ ಪರ್ವದ ಶಕೆ ಪ್ರಾರಂಭವಾಗಿದೆ. ಪ್ರತಿಭಾನ್ವಿತ ಯುವಕರು ಹಾಗೂ ಯುವತಿಯರನ್ನು ಗುರುತಿಸಿ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. ಇದಕ್ಕೆ ಪುಷ್ಟಿಯಂತೆ ಬಹುಮುಖ ಪ್ರತಿಭೆ ಕಿರಣ್ ಎ (ಅಣ್ಣಯ್ಯಪ್ಪ ಕಿರಣ್), ಇವರನ್ನು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ರಾಜ್ಯ ಕಾಂಗ್ರೆಸ್ ವಕ್ತಾರನ್ನಾಗಿ ನೇಮಕ ಮಾಡಲಾಗಿದೆ.

ಈ ಸಂದರ್ಭದಲ್ಲಿ ಕಿರಣ್. ಎ ರವರು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಪ್ರಿಯ ಕೃಷ್ಣ, ಪ್ರಿಯಾಂಕ್ ಖರ್ಗೆ ಅವರಿಗೆ ಹಾಗೂ ಕಾಂಗ್ರೆಸ್ಸಿನ ಎಲ್ಲಾ ಧೀಮಂತ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮಾಲತೇಶ್ ಅರಸ್ ಹರ್ತಿಕೋಟೆ. ನ್ಯೂಸ್ ಎಡಿಟರ್. ಬೆಂಗಳೂರು.