ಬೆಂಗಳೂರು, ಡಿ.12: ಭವಿಷ್ಯದ ಮಾಧ್ಯಮವೆಂದು ಪರಿಗಣಿತವಾಗಿರುವ ಡಿಜಿಟಲ್ ಮಾಧ್ಯಮವು ರಾಜ್ಯದಲ್ಲಿ ಹೊಸ ಕ್ರಾಂತಿ ಶುರುಮಾಡಿದೆ. ಕನ್ನಡ ಡಿಜಿಟಲ್ ಮಾಧ್ಯಮಗಳ ಪತ್ರಕರ್ತರು ಭಾನುವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸೇರಿದ್ದ ಮೊದಲ ಸಭೆಯಲ್ಲಿ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ (ಕೆಎಸ್’ಡಿಎಮ್’ಎಫ್) ಅನ್ನು ಅಸ್ಥಿತ್ವಕ್ಕೆ ತರಲಾಯಿತು. ಇದು ಡಿಜಿಟಲ್ ಮಾಧ್ಯಮ ಲೋಕವೇ ಹೆಮ್ಮೆಪಡುವಂತ ವಿಷಯವಾಗಿದೆ.
( ಪೋಟೋ: ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಸುದ್ದಿವಾಣಿಯ ಮಾಲತೇಶ್ ಅರಸ್ ಹರ್ತಿಕೋಟೆ ಅವರನ್ನು ಸನ್ಮಾನಿಸಲಾಯಿತು)
ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ರಾಜ್ಯಾಧ್ಯಕ್ಷರಾಗಿ ಪತ್ರಕರ್ತರಾದ ದಿ ಸ್ಟೇಟ್ಸ್’ನ ಸಮೀವುಲ್ಲಾ ಬೆಲಗೂರು ಅವರು ಒಮ್ಮತದಿಂದ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಏನ್ ಸುದ್ದಿ ಡಾಟ್ ಕಾಮ್ ನ ಸುನೀಲ್ ಸಿರಸಂಗಿ ಮತ್ತು ಕನ್ನಡ ನ್ಯೂಸ್ ನೌ ನ ವಸಂತ ಬಿ ಈಶ್ವರಗೆರೆ, ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕ ಟಿವಿಯ ಶಿವು ಬೆಸಗರಹಳ್ಳಿ ಜಂಟಿ ಕಾರ್ಯದರ್ಶಿಗಳಾಗಿ ರಜಿನಿ ಎಕ್ಸ್ ಪ್ರೆಸ್’ನ ರಜಿನಿ ಮತ್ತು ಸುದ್ದಿವಾಣಿಯ ಮಾಲತೇಶ್ ಅರಸ್ ಹರ್ತಿಕೋಟೆ, ಖಂಜಾಂಚಿಯಾಗಿ ಸಾಕ್ಷಾ ಟಿವಿಯ ಸನತ್ ರೈ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮೀಡಿಯಾ ಮಾಸ್ಟರ್ ನ ಎಂ.ಎಸ್. ರಾಘವೇಂದ್ರ, ಗೌರೀಶ್ ಅಕ್ಕಿ ಸ್ಟುಡಿಯೋದ ಗೌರೀಶ್ ಅಕ್ಕಿ, ಸಿನಿ ಲಹರಿಯ ವಿಜಯ ಭರಮಸಾಗರ, ಮಿರರ್ ಕನ್ನಡದ ದರ್ಶನ್ ಆರಾಧ್ಯ, ಪ್ರವೀಣ್ ಏಕಾಂತ, ಮಸ್ತ್ ಮಗಾ ಡಾಟ್ ಕಾಮ್ ನ ಅಮರ್ ಪ್ರಸಾದ್, ಅಂಕಿತ, ಸಿನಿಮಾ ಸಾಮ್ರಾಜ್ಯದ ಹರೀಶ್ ಅರಸು ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.