ಮಾಧ್ಯಮ ಅಕಾಡೆಮಿಯಲ್ಲಿ ದೊಡ್ಡಮನಿ ದತ್ತಿನಿಧಿ ಪ್ರಶಸ್ತಿ  ಸ್ಥಾಪನೆ

Bangalore My Story State
ಮಾಧ್ಯಮ ಅಕಾಡೆಮಿಯಲ್ಲಿ ದೊಡ್ಡಮನಿ ದತ್ತಿನಿಧಿ ಪ್ರಶಸ್ತಿ  ಸ್ಥಾಪನೆ
ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಹೊಸ ಪ್ರಶಸ್ತಿಯೊಂದು ಸೇರ್ಪಡೆಯಾಗಿದೆ.
ಹಿರಿಯ ಪತ್ರಕರ್ತರು, ಕ್ರಿಯಾಶೀಲ ಹೋರಾಟಗಾರ, ಪತ್ರಿಕಾ ಚಳುವಳಿಗಾರರೂ ಲೋಕಪ್ರಿಯ ಸಂಪಾದಕರಾದ ಬಸವರಾಜ್ ದೊಡ್ಡಮನಿ ಅವರು ಕೃಷಿ ವಲಯದಲ್ಲಿ ಅತ್ಯುತ್ತಮ ಲೇಖನ/ ವರದಿ/ಅಂಕಣ/ ನುಡಿ ಚಿತ್ರಕ್ಕೆ ವಾರ್ಷಿಕ ಪ್ರಶಸ್ತಿ ನೀಡಲಿದ್ದಾರೆ.
 ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ದತ್ತಿನಿಧಿ ಸ್ಥಾಪಿಸಿದ್ದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸದಾಶಿವ ಶೆಣೈ ಅವರಿಗೆ ಚೆಕ್ ನೀಡಿದರು. ಕಾರ್ಯದರ್ಶಿ ರೂಪಾ, ಶ್ರೀಮತಿ ಬಸವರಾಜ್ ದೊಡ್ಡಮನಿ ಇದ್ದರು.

Leave a Reply

Your email address will not be published. Required fields are marked *