ವಾರದ ಕವಿತೆ…ಕಣ್ಣೀರು.

Poem and Song

ಕಣ್ಣೀರು
————–
1.ನೋವಮೀಟಿ
ಬಂದ ಕಣ್ಣೀರಲಿ
ಬೆಳಕು ಹಾಯಿತು.

2.ಪ್ರಪಂಚದ
ಕ್ರೂರತೆ ತಿಳಿಯದೆ
ಕಣ್ಣೀರು
ಹೊರಬಂದಿತು.

3.ಜಗತ್ತನ್ನೇ
ನೋಡುವ
ಕಣ್ಣು
ತನ್ನೊಳಗಿನ
ಕಣ್ಣೀರನ್ನು
ಕಾಣಲಿಲ್ಲ.

4.ಕಣ್ಣ ತುದಿಯಲ್ಲಿನ
ಕಣ್ಣೀರು
ತನ್ನ
ಬಂಧುಗಳಿಗಾಗಿ
ಹುಡುಕುತಿತ್ತು.

5.ಮುಖದ
ನೆರಿಗೆಗಳು
ಸುರಿದ
ಕಣ್ಣೀರಹನಿಗಳ
ಲೆಕ್ಕವಿಡುತಿದ್ದವು

6.ಅವಳ
ಕಣ್ಣೀರೆ
ಸಾಗರವಾಗಿದೆ.

7.ನೀರಿನ
ಸಹವಾಸದಿಂದ
ಕಣ್ಣೀರು
ಅಸ್ಥಿತ್ವ
ಕಳೆದುಕೊಂಡಿತು.

8.ಕಣ್ಣೀರು
ನಿಸ್ವಾರ್ಥಿ
ಮಗುವಿನ
ಹಾಗೂ
ವೃದ್ಧ ನ
ಕಣ್ಣೀರಿಗೆ
ಬೇಧವಿಲ್ಲ.

9.ಆನಂದ ಬಾಷ್ಪ
ದುಃಖದಕಣ್ಣೀರ
ಬಳಿ
ಬರಲಿಚ್ಚಿಸಲಿಲ್ಲ

10.ಕತ್ತಲೆಯಲ್ಲಿ
ಕಣ್ಣೀರ ಮಾತ
ಯಾರೂ
ಕೇಳಲಿಲ್ಲ.
—————————–
ನಿರ್ಮಲ ಮರಡಿಹಳ್ಳಿ
ಕನ್ನಡ ಉಪನ್ಯಾಸಕಿ
ಡಾನ್ ಬೋಸ್ಕೊ ಕಾಲೇಜು
ಚಿತ್ರದುರ್ಗ
ದೂರವಾಣಿ:9901527137

Leave a Reply

Your email address will not be published. Required fields are marked *