ಕಳವಿಭಾಗಿ ರೈತ‌ ರಂಗಪ್ಪ ವಿಷಸೇವಿಸಿ ಆತ್ಮಹತ್ಯೆ.

Chitradurga

ಕಳವಿಭಾಗಿ ರಂಗಪ್ಪ ವಿಷಸೇವಿಸಿ ಆತ್ಮಹತ್ಯೆ.

ಹಿರಿಯೂರು: ತಾಲ್ಲೂಕಿನ ಯರಬಳ್ಳಿ ಪಂಚಾಯತಿಯ ಕಳವಿಭಾಗಿ ಗ್ರಾಮದ ರೈತ ಬಿ.ರಂಗಪ್ಪ (65) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂರು ಎಕರೆ ಜಮೀನಿನಲ್ಲಿ ಹಾಕಲಾಗಿದ್ದ ಈರುಳ್ಳಿ ಬೆಳೆ ಕೈ ಕೊಟ್ಟಿತ್ತು ಮತ್ತು ಟ್ರಾಕ್ಟರ್ ಖರೀದಿಸಲು ಸಾಲ ಪಡೆದಿದ್ದರು ಸಾಲ ತೀರಿಸಲಾಗಲು ಕಷ್ಟ ವಾಗಿತ್ತು ಎಂದು ಐಮಂಗಲ ಠಾಣೆಯಲ್ಲಿ  ರಂಗಪ್ಪ ಅವರ ಸಹೋದರ ಗ್ರಾಮ ಪಂಚಾಯತಿ ಸದಸ್ಯರಾದ ಬಿ.ತಿಪ್ಪೇಸ್ವಾಮಿ ದೂರು ಸಲ್ಲಿಸಿದ್ದಾರೆ ಎಂದು ಮಾಜಿ ಸದಸ್ಯರಾದ ಮನೋಹರ್ ಅವರು ಮಾಹಿತಿಯನ್ನು ನೀಡಿದ್ದಾರೆ.

ಟ್ರಾಕ್ಟರ್ ಸಾಲ ಮತ್ತು ಕೈಗಡ ಸಾಲ. 6  ಲಕ್ಷ ತೀರಿಸಲಾಗದೆ ಜಿಗುಪ್ಸೆ ಹೊಂದಿ ಕುಂಚಿಟಿಗ ಸಮುದಾಯದ ಬಿ.ರಂಗಪ್ಪ ಅವರು ಸೇವಿಸಿದ್ದಾರೆ.

Leave a Reply

Your email address will not be published. Required fields are marked *