ನಿರ್ಲಕ್ಷ್ಯಕ್ಕೊಳಗಾದ ಕಳವಿಭಾಗಿ ಆರೂಢ ರಂಗಪ್ಪಸ್ವಾಮಿ ಮಠ

Chitradurga My Story State

ಮಾಲತೇಶ್ ಅರಸ್ www.suddivaani.com

ಚಿತ್ರದುರ್ಗ: ಈ ಜಾಗ ಪವಿತ್ರವಾದ ಒಂದು ಪುಣ್ಯಕ್ಷೇತ್ರ ವಾಗಬೇಕಿತ್ತು, ಇಲ್ಲಿ ಒಂದು ಅಪ್ಪಟ ಧ್ಯಾನಮಂದಿರ ನಿರ್ಮಾಣವಾಗಬೇಕಿತ್ತು, ಈ ಸ್ಥಳದಲ್ಲಿ ಸುಂದರ ಉದ್ಯಾನವನ್ನು ಇರಬೇಕಾಗಿತ್ತು ಆದರೆ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸ್ಥಳವಾಗಿದೆ.

ಹೌದು. ಹಿರಿಯೂರು ತಾಲ್ಲೂಕಿನ ಕಳವಿಭಾಗಿ ಗ್ರಾಮದ ಸುಕ್ಷೇತ್ರ ಆರೂಢ ರಂಗಪ್ಪ ಮಠ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಆರೂಢ ಪರಂಪರೆಯ ಈ ಸ್ಥಳದಲ್ಲಿ ಮೂವರು ಸ್ವಾಮೀಜಿಗಳು ಜೀವ ಸಮಾಧಿಯಾಗಿದ್ದಾರೆ .

ಹಿರಿಯೂರು ತಾಲ್ಲೂಕಿನ ಕೊಳಾಳ್ ಕೆಂಚಪ್ಪ ಎಂಬ ಮಠದಂತೆ ಈ ಮಠವು ಕೂಡ ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದೆ. ಕಳವಿಭಾಗಿ ಮಠದಲ್ಲಿ ಶ್ರೀ ರಂಗಪ್ಪಸ್ವಾಮಿ ಮತ್ತು ಗುರು ಆರೂಢ ಶ್ರೀ ತಿಪ್ಪೇಸ್ವಾಮಿ ಮತ್ತು ಮೈಸೂರು ಪಂಡಿತ್ ಗರೀಬ್ ಸ್ವಾಮಿ ಮತ್ತು ಕೊರಮಪ್ಪ ಸ್ವಾಮಿಗಳ ಸಮಾಧಿ ಇದೆ.

ನೂರಾರು ವರ್ಷಗಳ ಇತಿಹಾಸ ಇರುವಂತಹ ಮತ್ತು ವಿನೂತನವಾದ ಧಾರ್ಮಿಕ ಚರಿತ್ರೆ ಇರುವಂಥ ಸ್ಥಳ ಇಂದು ಬಿಕೋ ಎನ್ನುತ್ತಿದೆ. ಈ ಜಾಗದಲ್ಲಿ ವಿಶೇಷವಾದ ಶಕ್ತಿಯಿದೆ ಎಂಬ ನಂಬಿಕೆ ಇದ್ದರೂ ಇಂದು ಭಕ್ತರ ಸಂಖ್ಯೆ ಕಡಿಮೆಯಾಗಿದೆ.

ಮೈಸೂರಿನ ಭಕ್ತರೊಬ್ಬರು ದೇವಸ್ಥಾನವನ್ನು ನಿರ್ಮಾಣ ಮಾಡುವ ಭರವಸೆ ಕೊಟ್ಟಿದ್ದರು ಆದರೆ ಸ್ಥಳೀಯರ ನಿರ್ಲಕ್ಷ್ಯದಿಂದ ಇಂದು ಮಠ ನಿರ್ಮಾಣವಾಗದೆ ಹಾಗೆ ಉಳಿದುಕೊಂಡಿದೆ. ಮಠಕ್ಕೆ ಬೇಕಾದಂತಹ ಎಲ್ಲ ರೀತಿಯ ಕಲ್ಲುಕಂಬಗಳು, ಸೈಜುಗಲ್ಲುಗಳು ಮತ್ತು ಬಾಗಿಲಿಗೆ ಸಂಬಂಧಪಟ್ಟಂತಹ ವಸ್ತುಗಳು ಮಠದ ಮುಂಭಾಗದಲ್ಲಿ ಹಾಗೇ ಬಿದ್ದಿವೆ ಮೂವರು ಸ್ವಾಮೀಜಿಗಳ ಪವಿತ್ರ ಸ್ಥಳ ಇಂದು ಅಪಾರ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಭಕ್ತರಲ್ಲಿ ಬೇಸರವನ್ನುಂಟು ಮಾಡಿದೆ ಎಂದು ಸ್ಥಳೀಯ ಯುವಕ ಪಿ.ನಟೇಶ್ ಮಾಹಿತಿ ನೀಡಿದರು.

ಇದು ಕೇವಲ ಕಳವಿಬಾಗಿ ಗ್ರಾಮಕ್ಕೆ ಸೀಮಿತವಾಗಿಲ್ಲ ಸಮೀಪದ ಸಲಬೊಮ್ಮನಹಳ್ಳಿ, ಹೆಗ್ಗೆರೆ ಚಳ್ಳಕೆರೆ , ಗುಡಿಬಂಡೆ, ಹೊಸಪೇಟೆ, ಹಿರಿಯೂರು, ಹರ್ತಿಕೋಟೆ ಮೈಸೂರು, ಬೆಂಗಳೂರು, ದಾವಣಗೆರೆ ಹೀಗೆ ವಿವಿಧ ಭಾಗದ ಭಕ್ತರು ಆಗಮಿಸುತ್ತಾರೆ ವಿಶೇಷವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗುವ ಬಲಭಾಗದಲ್ಲಿ ಕೂಡ ಕಳವಿಬಾಗಿ ಆರೂಢ ರಂಗಸ್ವಾಮಿಯ ಮಠ ಇದೆ ಎಂಬ ಮಾಹಿತಿ ಇದೆ.

ಸ್ಥಳೀಯ ನಿವಾಸಿಗಳಿಂದ ಅಪಾರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಅವರು ಒಪ್ಪಿದ್ದಿದ್ದರೆ ಇಷ್ಟೊತ್ತಿಗೆ ಇಲ್ಲಿ ಹೊಸ ಮಠ ನಿರ್ಮಾಣ, ಶಾಲಾ ಕಾಲೇಜುಗಳು ಮಠಕ್ಕೆ ಹೋಗಿ ಬರುವವರ ರಸ್ತೆ ಮತ್ತು ಭಕ್ತರಿಗೆ ಬೇಕಾದಂಥ ವಿಶ್ರಾಂತಿ ಗೃಹಗಳು ನಿರ್ಮಾಣವಾಗುತ್ತಿದ್ದವು.

ಶಿವರಾತ್ರಿ, ಯುಗಾದಿ, ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳಲ್ಲಿ ಇಲ್ಲಿ ಸಕಲ ಭಕ್ತರು ಆಗಮಿಸಿ ವಿಶೇಷ ಭೋಜನದ ಮೂಲಕ ಸಂತೃಪ್ತಿ ಆಗ್ತಾ ಇದ್ರು ಆದರೆ ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇದೇ ರಂಗಪ್ಪ ಸ್ವಾಮಿಯ ಮೂಲ ಸ್ಥಳದಿಂದ ಪೂಜಾ ಕಲ್ಲನ್ನು ತೆಗೆದುಕೊಂಡು ಹೋಗಿರುವ ಭಕ್ತರು ಗುಡಿಬಂಡೆಯಲ್ಲಿ ಮಠ ನಿರ್ಮಾಣ ಮಾಡಿದ್ದಾರೆ ಮತ್ತು ಸಕಲ ಭಕ್ತರ ಮೂಲಕ ನಡೀತಾ ಇದೆ ಎಂದು ರಂಗಪ್ಪ ಸ್ವಾಮಿ ಮಠವನ್ನು ನೋಡಿಕೊಳ್ಳುತ್ತಿರುವ ರಂಗಪ್ಪ ಸ್ವಾಮಿಯ ಮೊಮ್ಮಗನಾದ ಹಿರಿಯರಾದ ಜುಟ್ಲರ್ ರಂಗಪ್ಪನವರು ಮಾಹಿತಿ ನೀಡಿದ್ದಾರೆ.

ಒಟ್ಟಾರೆ ರಂಗಪ್ಪ ಸ್ವಾಮಿ ಮಠ ವಿಶೇಷವಾದ ಶಕ್ತಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಮಠವನ್ನು ಅಭಿವೃದ್ಧಿ ಮಾಡಬೇಕೆಂದು ಭಕ್ತರ ಆಗ್ರಹವಾಗಿದೆ.

ಪೊಟೋಗಳು:

Leave a Reply

Your email address will not be published. Required fields are marked *