ಪತ್ರಕರ್ತರಿಗೆ ಇದು ಸಂಕಷ್ಟದ ಸಮಯ…! ಮಿಡಿಯಿತು ಸ್ವಾಮೀಜಿಗಳ ಮಾತೃ ಹೃದಯ..

Bangalore Editorial My Story State

ಬೆಂಗಳೂರು : ಕೊರೊನಾ ವೈರಸ್‌ ಬಂದು ಇಡೀ ದೇಶವನ್ನೇ ಬಿಕ್ಕಟ್ಟಿಗೆ ಸಿಲುಕಿದೆ. ಎಷ್ಟೋ ಜನ ಇದ್ದ ಕೆಲಸವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ಹೊರಗೆ ಬರೋದಕ್ಕೆ ಭಯ ಪಟ್ಟು ಮನೆಯೊಳಗೆ ಕುಳಿತ ಸಮಯದಲ್ಲೂ ಜೀವದ ಹಂಗು ತೊರೆದು ಹೋರಾಡಿದ ಪತ್ರಕರ್ತರರಲ್ಲಿ ಕೆಲವರ ಪಾಡು ಹೇಳಿಕೊಳ್ಳುವಷ್ಟು ಸುಶಿಕ್ಷಿತವಾಗಿಲ್ಲ.

ಇವರು ಅಣ್ಣಪ್ಪ. ದಾವಣಗೆರೆ ಬಳಿಯ ಹೊಸ ಕುಂದವಾಡದವರು. ಸಂಜೆವಾಣಿ ಪತ್ರಿಕೆ ವರದಿಗಾರರಾಗಿದ್ದರು. ಕೊರೊನಾ ಸಂಕಷ್ಟದ ಕಾಲದಲ್ಲಿ ಕೆಲ್ಸ ಕಳೆದ ಕೊಂಡವರಲ್ಲಿ ಇವರೂ ಒಬ್ಬರು. ಈಗ ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ. ನೌಕರಿಗಾಗಿ ಅಲ್ಲಾ. ಸಾವು ಬದುಕಿನೊಂದಿಗೆ ಹೋರಾಟ ಮಾಡುತ್ತಿರುವ ತನ್ನ ಒಂಬತ್ತು ತಿಂಗಳ ಮನಸ್ವಿ ಎಂಬ ಮಗಳನ್ನ ಉಳಿಸಿಕೊಳ್ಳಲು. ಕಾರಣ ಮಗಳಿಗೆ ರೋಗ ನಿರೋಧಕ ಶಕ್ತಿ(COMBINED IMMUNODEFICIENCY) ಇಲ್ಲಾ. ಒಂದು ತಿಂಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯಲ್ಲಿ ನಿತ್ಯ ಹತ್ತು ಸಾವಿರ ರೂಪಾಯಿ ಬರೀ ಔಷಧಕ್ಕೆ ನೀಡುತ್ತಿದ್ದಾರೆ. ಇದಕ್ಕಾಗಿ ವೈದ್ಯರು BONE MORROW TRONSPLANT ಮಾಡಬೇಕು ಎಂದು ಹೇಳಿದ್ದಾರೆ. ಇದಕ್ಕೆ 20 ರಿಂದ 25 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದಿದ್ದಾರೆ. ಹೀಗಾಗಿ ಆ ಮಗುವಿನ ಪೋಷಕರಿಗೆ ದಿಕ್ಕೆ ಕಾಣದಾಗಿತ್ತು.

*ಈ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹಾಗೂ ಜನಮಿತ್ರ ಪತ್ರಿಕೆಯ ಸಂಪಾದಕರ ಮದನ್ ಗೌಡ ಅವರ ಮನವಿ ಮೇರೆಗೆ ಹೊಂಬುಜ ಜೈನ ಮಠದ ಭಟ್ಟಾರಕ ಮಹಾಸ್ವಾಮೀಜಿಗಳ ಐವತ್ತು ಸಾವಿರ ರೂ. ಸಹಾಯಧನ ನೀಡಿದ್ದಾರೆ. ಶ್ರೀಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗೌರವ ಸೂಚಿಸಿದೆ*.

ಪ್ರಜಾಪ್ರಭುತ್ವದ ಮೂರು ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ಮತ್ತು ನ್ಯಾಯಾಂಗ ವ್ಯವಸ್ಥೆಗಳಿಗೆ ವೇತನವಿದೆ, ಬಡ್ತಿ ವ್ಯವಸ್ಥೆ ಇದೆ, ಅರಿಯರ್ಸ್ ಮತ್ತು ಅಲೋಯನ್ಸ್ ಗಳಿವೆ. ಜೊತೆಗೆ ಪೆನ್ಷನ್ ಸೌಕರ್ಯವಿದೆ.
ಆದರೆ ಥ್ಯಾಂಕ್ ಲೆಸ್ ಜಾಬ್ ಮಾಡುವ ನಾಲ್ಕನೇ ಅಂಗವಿದೆಯಲ್ಲ ಅದು ಪತ್ರಿಕಾ ಮಾಧ್ಯಮ. ಅಲ್ಲಿ ಪತ್ರಕರ್ತ ಅಥವಾ ಮಾಧ್ಯಮ ಪ್ರಜಾಪ್ರಭುತ್ವದ ಕಾವಲುನಾಯಿ. ಅವನಿಗೇನು ಸೌಲಭ್ಯವಿದೆ ? ಇದನ್ನು ಪತ್ರಕರ್ತರೆಲ್ಲರೂ ತಮ್ಮನ್ನು ತಾವು ಸಾವಿರ ಬಾರಿ ಕೇಳಿಕೊಂಡಿರುತ್ತಾರೆ. ನಮ್ಮನ್ನು ಯಾರೂ ಹೊಗಳುವುದಿಲ್ಲ. ಎಷ್ಟೇ ಅದ್ಭುತವಾದ ಲೇಖನ ಬರೆಯಲಿ, ಯಾವುದೇ ಸಮಸ್ಯೆಯತ್ತ ಬೆಳಕು ಚೆಲ್ಲಲಿ, ಯಾರದ್ದೇ ಕರ್ಮಕಾಂಡಗಳನ್ನು ಬಯಲು ಮಾಡಲಿ, ಎಂತಹದ್ದೇ ವಿಶೇಷ ಕಾರ್ಯಕ್ರಮ ಮಾಡಲಿ. ಊಹೂಂ ನಮಗೆ ಬಯ್ಗುಳದ ವಿನಃ ಮತ್ಯಾವ ಪ್ರೋತ್ಸಾಹವೂ ಇಲ್ಲ.

ಪೆನ್ಷನ್ ಸಾಯಲಿ ತಿಂಗಳ ಸಂಬಳ ನೆಟ್ಟಗೆ ಆಗುತ್ತದಾ ಅದೂ ಡೌಟ್. ಅವನ ಸಣ್ಣ ಮಗುವಿಗೆ ಕಾಯಿಲೆ. ಅವನಿಗೆ ತನ್ನ ಮಗುವಿನ ಚಿಕಿತ್ಸೆಗೆ ಪೈಸೆ ಪೈಸೆಗೂ ಪರದಾಡಬೇಕಾದ ಹೀನಾಯ ಸ್ಥಿತಿ.ದಯಮಾಡಿ ಮಾಡಿ ಅನೇಕರು, ಕೈಲಾದವರೂ ಸಹಾಯ ಮಾಡಬೇಕಾಗಿದೆ.

ಸಹಾಯ ಮಾಡುವ ಮನಸ್ಸಿರುವವರು ಈ ನಂಬರ್‌ಗೆ ಕರೆ ಮಾಡಬಹುದು : ಅಣ್ಣಪ್ಪ ಹೊಸಕುಂದವಾಡ 8660625034.

ಬ್ಯಾಂಕ್‌ ಡಿಟೈಲ್‌ ಕೂಡ ಇಲ್ಲೇ ಇದೆ : AC : 2223330011389981
AC name: Annappa
Ifsc Code : RATNOVAAPIS..

 

ವಂದನೆಗಳೊಂದಿಗೆ

ಮಾಲತೇಶ್ ಅರಸ್ ಹರ್ತಿಕೋಟೆ. ನ್ಯೂಸ್ ಎಡಿಟರ್. ಸುದ್ದಿವಾಣಿ. ರಾಷ್ಟ್ರೀಯ ಮಂಡಳಿ ಸದಸ್ಯರು. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ IFWJ.     NMC NCIB Bangalore.

Leave a Reply

Your email address will not be published. Required fields are marked *