
ಚಿತ್ರದುರ್ಗ: (ಸುದ್ದಿವಾಣಿ) ಕಾಡುಹಂದಿಯೊಂದು ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ಕಾರು ಡಿಕ್ಕಿ ಹೊಡೆದು ಮಹಿಳೆ ಸೇರಿದಂತೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಬಳಿ ನಡೆದಿದೆ.
ಅವರು ದಾವಣಗೆರೆಯ ದುರ್ಗಾಂಬಿಕ ಜಾತ್ರೆಯ ಸಂಭ್ರಮದಲ್ಲಿ ಹೋಗುತ್ತಿದ್ದರು. ಆದರೆ ಅವರಿಗೆ ಜವರಾಯ ದಾವಣಗೆರೆಗಿಂತ ಮುಂಚೆಯೇ ಕಾಯುತ್ತಿದ್ದ, ಚಿತ್ರದುರ್ಗದ ಬಳಿ ಕಾಡುಹಂದಿಯೊಂದು ಅವರ ಸಂಭ್ರಮವನ್ನು ಕಸಿದು ಮನೆಯನ್ನು ಸೂತಕ ಮಾಡಿದೆ.

ಕುಟುಂಬ ಸಮೇತ ಬೆಂಗಳೂರಿನಿಂದ ದಾವಣಗೆರೆಗೆ ಹೊರಟಿದ್ದರು, ಆದರೆ ಚಿತ್ರದುರ್ಗದ ಐಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಕಾಡುಹಂದಿ ಅಡ್ಡ ಬಂದಿದೆ. ಅದನ್ನು ತಪ್ಪಿಸಲು ಹೋಗಿ ಎರಡು ಜೀವಗಳು ಬಲಿಯಾಗಿವೆ.
ವಿಜಯಕುಮಾರ್, ರವಿಚಂದ್ರ ಮತ್ತು ರವಿಚಂದ್ರ ತಾಯಿ ಮೃತರು. ಇದು ನಿಜವಾಗಿಯೂ ಘನಘೋರ, ಕಾಡುಹಂದಿ ಪ್ರಾಣ ಉಳಿಸಲು ಹೋಗಿ. ಮುಂದೆ ಹೋಗುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಡಿವೈಡರ್ ಗೆ ಅಪ್ಪಳಿಸಿದೆ. ಅಲ್ಲಿಗೆ ಸ್ಥಳದಲ್ಲಿಯೇ ಇಬ್ಬರೂ ಶವವಾಗಿದ್ದಾರೆ. ಉಳಿದಂತೆ ಕಾರಿನಲ್ಲಿದ್ದ ಇತರರು, ಇಬ್ಬರು ಮಕ್ಕಳು ಬದುಕುಳಿದ್ದಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಹಿರಿಯೂರು ಡಿವೈಎಸ್ ಪಿ ರೋಷನ್ ಜಮೀರ್, ಸಿಪಿಐ ರಾಘವೇಂದ್ರ, ಶಿವಕುಮಾರ್, ಪಿಎಸ್ ಐ ಮಂಜುನಾಥ್ ತಂಡ ಕೂಡಲೇ ರಾಷ್ಟ್ರೀಯ ಹೆದ್ದಾರಿ ನಿಯಂತ್ರಣಕ್ಕೆ ತೆಗೆದುಕೊಂಡರು, ನೆರೆದಿದ್ದ ನೂರಾರು ಜನರನ್ನು ದೂರಸರಿಸಿ ಟ್ರಾಫಿಕ್ ಕಂಟ್ರೋಲ್ ಮಾಡಿದರು.
ಒಟ್ಟಾರೆ ಕಾಡುಹಂದಿ ಜೀವ ಉಳಿಸಲು ಹೋಗಿ ಎರಡು ಜೀವಗಳು ಬಲಿಯಾಗಿವೆ.
ಮಾಲತೇಶ್ ಅರಸ್. ನ್ಯೂಸ್ ಎಡಿಟರ್. ಸುದ್ದಿವಾಣಿ.