ಹಿರಿಯೂರು ಅಪರ ಸರ್ಕಾರಿ ವಕೀಲರಾಗಿ ಟಿ.ಸಂಜಯ್ ನೇಮಕ

Chitradurga
ಚಿತ್ರದುರ್ಗ: (ಸುದ್ದಿವಾಣಿ) ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾಮದ ಟಿ.ಸಂಜಯ್ ಅವರನ್ನು ಹಿರಿಯೂರಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಗೆ ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ, ಕಾನೂನು ಇಲಾಖೆ ಅವರು ನೇಮಕ ಮಾಡಿ, ಜೂನ್ 7 ರಂದು ಆದೇಶ ಹೊರಡಿಸಿದ್ದಾರೆ.
 ಟಿ.ಸಂಜಯ್ ರವರು ನಗರದ ಹಿರಿಯ ವಕೀಲರಾದ ಬಿ.ಎನ್.ತಿಪ್ಪೇಸ್ವಾಮಿಯವರ ಪುತ್ರ, ವಕೀಲ ವೃತ್ತಿ ಜೊತೆಗೆ ಕೃಷಿಕ್ಷೇತ್ರ  ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಹ  ಗುರುತಿಸಿಕೊಂಡು, ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.
 ಪ್ರಸ್ತುತ ಹಿರಿಯೂರು “ವಿಕಾಸ ವೇದಿಕೆ” ಸಂಚಾಲಕರಾಗಿದ್ದು, ಪ್ರಗತಿಪರ ಚಿಂತನೆಗಳು, ಹಾಗೂ ಜನಪರ, ನೀರಾವರಿ ಹೋರಾಟಗಳಲ್ಲೂ ಸಹ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರಿಗೆ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರೂ ಹಾಗೂ ವಕೀಲರಾದ ಮಾಲತೇಶ್ ಅರಸ್ ಹರ್ತಿಕೋಟೆ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *