ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮಪಂಚಾಯತಿ ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಿ.ನೀಲಮ್ಮ, ಮಾಜಿ ಉಪಾಧ್ಯಕ್ಷರಾದ ಪಾಂಡುರಂಗಪ್ಪ, ಸದಸ್ಯರಾದ ಪ್ರತಾಪ್ ಸಿಂಹ, ಯಶೋದಮ್ಮ. ರಾಜಪ್ಪ, ಮಹೇಶ್ವರಿ ಗೋಡೆ ತಿಪ್ಪೇಸ್ವಾಮಿ, ಮುಖಂಡರಾದ ಆರ್ ಹನುಮಂತಪ್ಪ, ಜುಂಜುರಾಮನಾಯಕ, ಗ್ರಾಪಂ ಕಾರ್ಯದರ್ಶಿ ಗಿರೀಶ್, ವನ್ಯಜೀವಿ ಮತ್ತು ಪರಿಸರ ಸಂರಕ್ಷಣಾ ವೇದಿಕೆ ಸಂಚಾಲಕರಾದ ಮಾಲತೇಶ್ ಅರಸ್, ನರೇಗಾ ಇಂಜಿನಿಯರ್ ಹರ್ಷ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇದ್ದರು.
ಹರ್ತಿಕೋಟೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣವನ್ನು ಗ್ರಾಮದ ತಿಪ್ಪೇಸ್ವಾಮಿ (ಬಡಗಿ) ಅವರ ನೇತೃತ್ವದಲ್ಲಿ ವಿವಿಧ ನಮೂನೆಯ ಗಿಡಗಳನ್ನು ನೀಡಲಾಯಿತು.
ಪಂಚಣ್ಣರ ತಿಪ್ಪೇಸ್ವಾಮಿ, ಶಿಕ್ಷಕರಾದ ರೇವಯ್ಯ ಒಡೆಯರ್, ಗ್ರಾಪಂ ಸದಸ್ಯರಾದ ಪ್ರತಾಪ್ ಸಿಂಹ, ಪಾಂಡುರಂಗಪ್ಪ, ಮಾಜಿ ಸದಸ್ಯರಾದ ಸಿದ್ದಪ್ಪ, ಪತ್ರಕರ್ತರಾದ ರಾಜಪ್ಪ, ಗ್ರಾಪಂ ಕಾರ್ಯದರ್ಶಿ ಗಿರೀಶ್,ದಲಿತ ಮುಖಂಡ ದಯಾನಂದ್, ಓಬಳಾನಾಯಕ, ರಾಮಣ್ಣ, SDMC ಅಧ್ಯಕ್ಷರಾದ ವೀರಭದ್ರಪ್ಪ,, ಚಿದಾನಂದಪ್ಪ , ಜಿ. ಟಿ. ಒಡೆಯರ್, ಶಿಕ್ಷಕ ಡಿ.ಜಿ.ನಾಗರಾಜ್, ವೀರೇಂದ್ರ, ಅಜ್ಜಣ್ಣ ಇತರರು ಇದ್ದರು.