ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ವೀರಶೈವ ಲಿಂಗಾಯತ ಪ್ರಬಲ ಸಮುದಾಯ. ಲಿಂಗಾಯತ ಮತಗಳಿಲ್ಲದೆ ಯಾವ ಕ್ಷೇತ್ರದಲ್ಲಿ ಯಾರೂ ಗೆಲ್ಲುವುದು ಅಸಾಧ್ಯ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪರ ಲಿಂಗಾಯತರು ನಿಂತಿದ್ದಾರೆ. ಲಿಂಗಾಯತ ಸಮುದಾಯದ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಡಲು ಪಣ ತೊಟ್ಟಿದ್ದಾರೆ.
ಇತ್ತ ಒಂದ್ ಸಾವಿರ ವೋಟೂ ಇಲ್ಲದ ರಘು ಆಚಾರ್ ಇದೀಗ ಲಿಂಗಾಯತರು ಕೆಟ್ ನನ್ಮಕ್ಳು ನಲವತ್ತು ಸಾವಿರ ಇದಾರೆ ಅಂತ ಜಾತಿ ನಿಂದನೆ ಮಾಡಿರೋ ಆಡಿಯೋ ವೈರಲ್ ಆಗಿದೆ. ಇದು ಲಿಂಗಾಯತರ ಕೆಂಗಣ್ಣಿಗೆ ಗುರಿಯಾಗಿದೆ.
ಚಿತ್ರದುರ್ಗದಲ್ಲಿ ಆರೂ ಕ್ಷೇತ್ರದಲ್ಲಿ ಮೂರು ಲಕ್ಷಕ್ಕೂ ಅಧಿಕ ಲಿಂಗಾಯತರು ಇದ್ದು ಚಿತ್ರದುರ್ಗದಲ್ಲಿ ಲಿಂಗಾಯತರಿಗೆ ಟಿಕೆಟ್ ಕೊಟ್ಟರೆ ಪಕ್ಕ ಗೆಲುವು. ಅದನ್ನು ಬಿಟ್ಟು ರಘು ಆಚಾರ್ ಗೆ ಟಿಕೆಟ್ ಕೊಟ್ಟರೇ ರಾಜ್ಯದಲ್ಲಿ ಮೊದಲ ಸೋಲು ಚಿತ್ರದುರ್ಗ ಕ್ಷೇತ್ರವಾಗಲಿದೆ ಎಂಬ ಎಚ್ಚರಿಕೆಯನ್ನು ವೀರಶೈವ ಲಿಂಗಾಯತರು ಹಾಗೂ ಲಿಂಗಾಯತ ಯುವಕರು ಹಾಗೂ ವೀರಶೈವ ಲಿಂಗಾಯತ ಯುವ ವೇದಿಕೆ ಮತ್ತು ವೀರೇಂದ್ರ ಪಪ್ಪಿ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.
ಮತ್ತು ಜಿಲ್ಲಾ ಮಂತ್ರಿ ಆಂಜನೇಯನ ಪೊಟೋ ಬೇಡ. ಚಂದ್ರಪ್ಪಂದು ಸಣ್ಣದಾಗಿ ಹಾಕು ಎಂದು ಮಾದಿಗರನ್ನು ಬೇಸರಪಡಿಸಿದ್ದಾರೆ.