ಸಿದ್ರಾಮುಲ್ಲಾಖಾನ್ ಹೇಳಿಕೆ: ಶಾಸಕ ಸಿ.ಟಿ. ರವಿ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾ ಕಾಂಗ್ರೆಸ್ ಒತ್ತಾಯ

Chitradurga State

 

ಚಿತ್ರದುರ್ಗ:(ಸುದ್ದಿವಾಣಿ) ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕುರಿತು ಸಿದ್ರಾಮುಲ್ಲಾ ಖಾನ್ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಕೋಮುವಾದಿ ಎಂಬುದು ಬಹಿರಂಗವಾಗಿ ತೋರಿಸಿಕೊಟ್ಟಿದ್ದು, ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು  ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ  ಮಾಜಿ ಜಿಲ್ಲಾ ಕಾರ್ಯಾಧ್ಯಕ್ಷರೂ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಸಿ.ಶಿವುಯಾದವ್ ಅವರು ಒತ್ತಾಯಿಸಿದ್ದಾರೆ.

ಸಿ.ಟಿ. ರವಿಯವರು ಸಿದ್ದರಾಮಯ್ಯನವರಿಗೆ ಕುಂಕುಮ, ಕೇಸರಿ ಆಗಲ್ಲ, ಟಿಪ್ಪು ಟೋಪಿ ಅವರಿಗೆ ಇಷ್ಟ ಎಂದು ಕೋಮುವಾದದ ಮೂಲಕ ಕಿಳುಮಟ್ಟದ ಮಾತುಗಳನ್ನಾಡಿದ್ದಾರೆ ಎಂದು  ಶಿವುಯಾದವ್ ಖಂಡಿಸಿದ್ದಾರೆ.

ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲ ಪೂರ್ಣ ಅವಧಿ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿ ಕರ್ನಾಟಕ ರಾಜ್ಯದ ಜನರ ಮನದಲ್ಲಿದ್ದಾರೆ. ಆದರೆ ಬಿಜೆಪಿ ಐದು ವರ್ಷಗಳಲ್ಲೇ ಎಷ್ಟು ಜನ ಮುಖ್ಯಮಂತ್ರಿಯನ್ನು ಮಾಡಿದ್ದಾರೆಂಬುದು ಸಿ.ಟಿ. ರವಿ ಅವರು ಮೊದಲು ತಿಳಿದುಕೊಳ್ಳಲಿ. ಸಿದ್ದರಾಮಯ್ಯನವರು ಯಾವುದೇ ಜಾತಿಗೆ ಸಿಮಿತವಾದವರಲ್ಲ. ಅವರೊಬ್ಬ ಜನಾಕರ್ಷಣೆಯ ಧೀಮಂತ ನಾಯಕರಾಗಿದ್ದಾರೆ. ಅವರು ಹೋದ ಕಡೆಯಲ್ಲೆಲ್ಲ ಜನರ ಆಕರ್ಷಣೆಯನ್ನು ಸಹಿಸದ ಬಿಜೆಪಿ ನಾಯಕರು ಹಾಗೂ ಸಿ.ಟಿ. ರವಿಯವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.

ಸಿ.ಟಿ. ರವಿಯವರದು ವಿನಾಶಕಾರಿ ಮನಸ್ಸು, ಆದರೆ ಸಿದ್ದರಾಮಯ್ಯನವರದು ಸಮಾಜವನ್ನು ಒಗ್ಗೂಡಿಸುವಂತಹ ಮನಸ್ಸು ಆಗಿದೆ. ಸಿ.ಟಿ. ರವಿಯವರಿಗೆ ಕೋಮುಭಾವನೆ ಪ್ರಚೋದಿಸುವದೊಂದೆ ಗೊತ್ತಿದೆ. ಇಂತಹ ಬಿಜೆಪಿ ನಾಯಕರು ಕೋಮುಭಾವನೆ ಪ್ರಚೋದಿಸುವ ಹೇಳಿಕೆ ನೀಡುವುದರಿಂದ ಬಿಜೆಪಿ ಕಾರ್ಯಕರ್ತರು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದಿ ಚಿತ್ರ ಹಾಗೂ ಸಂದೇಶಗಳನ್ನು ಬಿಡುತ್ತಿರುವದರಿಂದ ಮುಗ್ದವಾಗಿ ಜೀವನ ನಡೆಸುವಂತಹ ಸಾರ್ವಜನಿಕರು ಹಾಗೂ ಯುವಕರು ತಪ್ಪು ತಿಳಿದುಕೊಂಡು ಸರಿ ಹಾದಿಯನ್ನು ಬಿಟ್ಟು ತಪ್ಪು ಹಾದಿಯನ್ನು ತುಳಿಯುವಂತೆ ಮಾಡುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇಂತಹ ಕೋಮುವಾದಿಗಳ ಹೇಳಿಕೆ ಖಂಡನಾರ್ಹ. ಇಂತಹವರನ್ನು ಕೂಡಲೇ ಕೋಮುಭಾವನೆ ಪ್ರಚೋದಿಸುವ ಆರೋಪದಡಿಯಲ್ಲಿ ಸಿ.ಟಿ. ರವಿ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಆಕಾಂಕ್ಷಿ ಶಿವುಯಾದವ್  ಆಗ್ರಹಿಸಿದ್ದಾರೆ.

 

ಮಾಲತೇಶ್ ಅರಸ್. ನ್ಯೂಸ್ ಎಡಿಟರ್ ಚಿತ್ರದುರ್ಗ.

Leave a Reply

Your email address will not be published. Required fields are marked *