ಕಂಪನಿಗಳಲ್ಲಿ ಉದ್ಯೋಗ : ಸೆ.27 ರಂದು ನೇರ ಸಂದರ್ಶನ

Chitradurga Employment News

ಚಿತ್ರದುರ್ಗ: ಸೆ.27 ರಂದು ರಾಜ್ಯದ ಪ್ರತಿಷ್ಠಿತ ಕಂಪನಿಗಳು ತಮ್ಮ ಕಂಪನಿಯಲ್ಲಿ ಕಾರ್ಯ ನಿರ್ವಹಿಸಲು ಆಭ್ಯರ್ಥಿಗಳ ಆಯ್ಕೆಗೆ ನೇರ ಸಂದರ್ಶನವನ್ನು ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿದ್ಯಾರ್ಹತೆ, 18 ರಿಂದ 30 ವರ್ಷದೊಳಗಿನ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೊಮೋ, ಬಿಎ, ಬಿಕಾಂ, ಬಿ.ಎಸ್ಸಿ, ಬಿ.ಬಿ.ಎಂ, ಎಂ.ಬಿ.ಎ, ಎಂ.ಎ ಮತ್ತು ಇತರೆ ಪದವೀಧರರು, ಅಗತ್ಯ ದಾಖಲೆಗಳಾದ ಬಯೋಡಾಟಾ 8 ಪ್ರತಿ, ವಿದ್ಯಾರ್ಹತೆ ಪ್ರಮಾಣ ಪತ್ರ, ಭಾವಚಿತ್ರ. ಆಧಾರ ಕಾರ್ಡ್ ಪ್ರತಿಯನ್ನು ಸಂದರ್ಶನ ಸಮಯದಲ್ಲಿ ಹಾಜರುಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದೂರವಾಣಿ-08194-230485,7022459064, 81055619020 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ www.suddivaani.com ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *