ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೌಕರರಿಂದ ರಕ್ತದಾನ

Chitradurga Districts Bureau

ಚಿತ್ರದುರ್ಗ: (ಸುದ್ದಿವಾಣಿ): ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೌಕರರ ಸಂಘದ 2021-2022 ಸಾಲಿನ ಒಂದನೇ ವರ್ಷದ ವಾರ್ಷಿಕ ಮಹಾಸಭೆ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭ ದಲ್ಲಿ ಬ್ಯಾಂಕಿನ ನೌಕರರ ಸಂಘ ದಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಬ್ಯಾಂಕಿನ 25 ಜನ ನೌಕರರು ರಕ್ತದಾನ ಮಾಡಿದರು.

ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಂಪನಿ ಬೆಂಗಳೂರು ಇವರು ಹೆಲ್ತ್ ಇನ್ಸೂರೆನ್ಸ್ ಬಗ್ಗೆ ಮಾಹಿತಿ ನೀಡಿದರು. ಮತ್ತು ಡಾ. ಕೆ ದೀಪಕ್ ಇವರು ಮಾನಸಿಕ ಒತ್ತಡ ನಿವಾರಣೆ ಬಗ್ಗೆ ವಿಷಯ ಪ್ರಸ್ತುತ ಪಡಿಸಿದರು.

ಈ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಬಿ ವಿ ಪ್ರಶಾಂತ್ ಉಪಾಧ್ಯಕ್ಷರಾದ ಎಂ ಡಿ ಹಳೇಮನಿ ಮತ್ತು ಸಂಘದ ನಿರ್ದೇಶಕರುಗಳು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತ ರಿದ್ದರು.

 

ಮಾಲತೇಶ್ ಅರಸ್. ನ್ಯೂಸ್ ಎಡಿಟರ್. ಚಿತ್ರದುರ್ಗ

Leave a Reply

Your email address will not be published. Required fields are marked *