ಚಿತ್ರದುರ್ಗದಲ್ಲಿ ಮೂರು ದಿನ ” ಸೆಕ್ಷನ್ 144- ನಿಷೇಧಾಜ್ಞೆ  ಜಾರಿ”

Chitradurga Districts Bureau State

ಮಾಲತೇಶ್ ಅರಸ್
ಚಿತ್ರದುರ್ಗ: ಮಹತ್ವದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಕೇಂದ್ರ ಸರ್ಕಾರಕ್ಕೆ ಹಲವೆಡೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ನಡುವಲ್ಲೇ ರಾಜ್ಯದಲ್ಲೂ ಕೂಡ ಪ್ರತಿಭಟನೆ ಭುಗಿಲೆದ್ದಿದೆ.

ತಿದ್ದುಪಡಿ ಮಸೂದೆಗೆ ಹಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಾವಿರಾರು ಜನರು  ರಾಜ್ಯದ ಹಲವೆಡೆ ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು ಕೋಟೆಗಳ ನಾಡು ಚಿತ್ರದುರ್ಗದಲ್ಲಿ ಬಿಸಿ ಎದ್ದಿದೆ.

ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಮಾಹಿತಿ ಅನ್ವಯ ಚಿತ್ರದುರ್ಗ ಜಿಲ್ಲಾಧ್ಯಂತ ಡಿಸೆಂಬರ್ 19.20.21 ಮೂರು ದಿನಗಳ ಕಾಲ ಸಿ.ಆರ್.ಪಿ.ಸಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ವಿನೋತ್ ಪ್ರಿಯಾ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *