ರಾಷ್ಟ್ರಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯಾದ  ಚಿತ್ರದುರ್ಗದ ಎಸ್‌ ಆರ್‌ ಎಸ್ ವಿದ್ಯಾರ್ಥಿ

Chitradurga Nation Sports Student/Youth

 

ರಾಷ್ಟ್ರಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯಾದ  ಚಿತ್ರದುರ್ಗದ ಎಸ್‌ ಆರ್‌ ಎಸ್” ವಿದ್ಯಾರ್ಥಿ

ಚಿತ್ರದುರ್ಗ:  ಪದವಿ ಪೂರ್ವ ಶಿಕ್ಷಣ ಇಲಾಖೆಯು  ಆಯೋಜಿಸಿದ್ದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಎಸ್‌ ಆರ್‌ ಎಸ್‌ ಕಾಲೇಜಿನ ವಿದ್ಯಾರ್ಥಿನಿ ರಾಷ್ಟ್ರ ಮಟ್ಟಕ್ಕೆ  ಆಯ್ಕೆಯಾಗಿದ್ದಾಳೆ.

ನಮ್ಮ ಕಾಲೇಜಿನ ವಿದ್ಯಾರ್ಥಿನಿ ಕು.ಶ್ರೇಯಾ ಕೆ.  ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಸ್ಪರ್ಧೇಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ  ಹಾಗೂ ರಾಜ್ಯಮಟ್ಟದ ಸ್ಪರ್ಧೇಯಲ್ಲಿ ಭಾಗವಹಿಸಿದ್ದ ಕು.ಸಿದ್ದೇಶ್‌ ಹಾಗೂ ಕು. ನಾಜ್‌ ಅಲೀಯಾ ಇವರು ಟ್ವೆಕ್ವಾಂಡೊ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳಾದ   ಕು. ಶ್ರೇಯಾ ಕೆ, 200ಮೀ, 400ಮೀ ಹಾಗೂ 800ಮೀ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು, ಕು.ಅಮಿತ್‌ ಸಿ, ಗುಡ್ಡಗಾಡು ಓಟದ ಸ್ಪರ್ಧೆ ಮತ್ತು 5000ಮೀ ಓಟದಲ್ಲಿ ದ್ವಿತೀಯ ಸ್ಥಾನವನ್ನು, ಕು.ಚಿರಾಗ್‌ 400ಮೀ ಓಟದಲ್ಲಿ ಪ್ರಥಮ ಸ್ಥಾನ, ಕು.ಕಾರ್ತಿಕ್‌ ಎಸ್‌ 800ಮೀ ಓಟದಲ್ಲಿ ದ್ವಿತೀಯ ಸ್ಥಾನವನ್ನು, ಸೈಯದ್‌ ಜುನೈದ್‌, 100ಮೀ ಓಟದಲ್ಲಿ ತೃತೀಯ ಸ್ಥಾವನ್ನು, 4*100ಮೀ ರಿಲೇ ಓಟದಲ್ಲಿ ಕು.ಶ್ರೇಯಾ ಕೆ, ಕು.ಶುಭಾ ಚಿನ್ಮಯಿ, ಕು.ರಚನಾ, ಕು.ವಂದನಾ ಪ್ರಥಮ ಸ್ಥಾನವನ್ನು ಹಾಗೂ ಶಟಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಕು.ಶ್ರೇಯಾ ಕೆ ಮತ್ತು ಕು.ಸಾಹಿತ್ಯ ಪ್ರಥಮ ಸ್ಥಾನವನ್ನು ಪಡೆದು  ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಉತ್ತಮ ಸಾಧನೆ ಮಾಡಿರುತ್ತಾರೆ.

ಈ ಅಮೋಘ ಸಾಧನಗೈದ ವಿದ್ಯಾರ್ಥಿಗಳಿಗೆ, ಸಂಸ್ಥೆಯ ಅಧ್ಯಕ್ಷರಾದ  ಬಿ ಎ ಲಿಂಗಾರೆಡ್ಡಿ ಮತ್ತು ಕಾರ್ಯದರ್ಶಿಗಳಾದ  ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿಗಳಾದ ಡಾ.ರವಿ ಟಿ. ಎಸ್. ಪ್ರಾಂಶುಪಾಲರದ  ಗಂಗಾಧರ್‌ ಈ. ಉಪ ಪ್ರಾಂಶುಪಾಲರಾದ  ಅಣ್ಣಪ್ಪ ಹೆಚ್‌, ದೈಹಿಕ ನಿರ್ದೇಶಕರಾದ  ರಮೇಶ್‌ ಜೆ ಇವರು ತರಬೇತಿಯನ್ನು ನೀಡಿರುತ್ತಾರೆ. ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯವರು ಹೃದಯಪೂರ್ವಕ ಆಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

ಮಾಲತೇಶ್ ಅರಸ್. ನ್ಯೂಸ್ ಎಡಿಟರ್.

Leave a Reply

Your email address will not be published. Required fields are marked *