ಕೋಟೆನಾಡಿನ ಕಾಂಗ್ರೆಸ್ ಅಭ್ಯರ್ಥಿಯಾಗಲು ಶಿವು ಯಾದವ್ ಎಂಟ್ರಿ.

Chitradurga

ಚಿತ್ರದುರ್ಗ( ಸುದ್ದಿವಾಣಿ) : ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಇದೀಗ ಧಗಧಗ ಅಂತಾ ಬೆಂಕಿ ಹೊತ್ತಿ ಉರಿಯುತ್ತಿದೆ. ತಾ ಮುಂದು ನೀ ಮುಂದು ಎಂದು  ಅನೇಕರು ಎರಡು ಲಕ್ಷ ದುಡ್ ಹಾಕಿ ಅರ್ಜಿ ಹಾಕಿದ್ದಾರೆ. ನನಗೆ ಟಿಕೆಟ್ ನನಗೆ ಟಿಕೆಟ್ ಕೊಡಿ ಅಂತ ಕೆಪಿಸಿಸಿ ಗೆ ಧೀರ್ಘದಂಡ ನಮಸ್ಕಾರ ಮಾಡಿದ್ದಾರೆ.

ಇದೀಗ ಯಾರಿಗೂ ನಿರೀಕ್ಷೆ ಇಲ್ಲದೆ ಧೀಡಿರ್ ಎಂದು ಡಿಸಿಸಿ ಮಾಜಿ ಜಿಲ್ಲಾ ಕಾರ್ಯಾಧ್ಯಕ್ಷರೂ, ಹಾಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರೂ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಸಿ.ಶಿವು ಯಾದವ್ ಕೋಟೆ ನಾಡಿನ ಚಿತ್ರದುರ್ಗ ಜಿಲ್ಲಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾಗಲು ಕೈ ಟಿಕೆಟ್ ಅರ್ಜಿ ಸಲ್ಲಿಸಿ ಕಾಂಗ್ರೆಸ್ ಅಖಾಡ ಕ್ಕೆ ಇಳಿದಿದ್ದಾರೆ.

ಕಾಡುಗೊಲ್ಲರು, ವಕೀಲರು ಹಾಗೂ ಅಭಿಮಾನಿಗಳು, ಮತ್ತು ಮಿತ್ರರ ಒತ್ತಾಸೆಯ ಮೇಲೆ ಕೊನೆ ಕ್ಷಣದಲ್ಲಿ ಅಖಾಡಕ್ಕೆ ಧುಮುಕಿದ್ದಾರೆ. ಶಿವುಯಾದವ್ ಹೆಸರು ಇದೀಗ ಅನೇಕರಿಗೆ ನುಂಗಲಾರದ ತುಪ್ಪವಾಗಿದೆ.

 

ಮಾಲತೇಶ್ ಅರಸ್. ಚಿತ್ರದುರ್ಗ. 9480472030

Leave a Reply

Your email address will not be published. Required fields are marked *