ಕೋಟೆನಾಡು ಚಿತ್ರದುರ್ಗದಲ್ಲಿ ಜಯ ಕರ್ನಾಟಕ ರಾಜ್ಯೋತ್ಸವ ವೈಭವ

Chitradurga

ಚಿತ್ರದುರ್ಗ:( ಸುದ್ದಿವಾಣಿ):ಜಯ ಕರ್ನಾಟಕ ಸಂಘಟನೆ ಚಿತ್ರದುರ್ಗ ಜಿಲ್ಲೆಯ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅದ್ದೂರಿಯಾಗಿ ನಡೆಯಿತು.

ಚಿತ್ರದುರ್ಗ ನಗರದಲ್ಲಿ ಇರುವ ಇತಿಹಾಸ ಪುರುಷರಾದ ಭಕ್ತ ಕನಕದಾಸರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ , ಡಾ.ಬಿ.ಆರ್ ಅಂಬೇಡ್ಕರ್, ವೀರವನಿತೆ ಒನಕೆ ಓಬವ್ವ, ಮದಕರಿ ನಾಯಕರ ಪ್ರತಿಮೆಗಳಿಗೆ ಬೃಹತ್ ಮಾಲಾರ್ಪಣೆಯ ಮುಖಾಂತರ ತ.ರಾ.ಸು ರಂಗಮಂದಿರದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ.ಬಿ ಎನ್ ಜಗದೀಶ್ ಅಧ್ಯಕ್ಷತೆ ವಹಿಸಿ ಕನ್ನಡ ನಾಡು ನುಡಿ ಜಲ ವಿಚಾರದಲ್ಲಿ ನಮ್ಮ ಸಂಘಟನೆ ತುಂಬಾ ಬಲಿಷ್ಠವಾಗಿದೆ ಎಂದು ಮಾತನಾಡಿದರು.

 

ಚಿತ್ರದುರ್ಗ ಜಿಲ್ಲೆಯಲ್ಲಿ ಸಾಧನೆ ಮಾಡಿದ ಕುಸ್ತಿ ಕ್ರೀಡಾಪಟು ಸದ್ದಾಂ , ಸಾಹಸಿ ಕ್ರೀಡಾಪಟು ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ , ಕರಾಟೆ ಕ್ರೀಡಾಪಟು ರುದ್ರೇಶ್ , ಜಾನಪದ ಕಲಾವಿದೆ ಭಾನುಪ್ರಿಯಾ ಮಂಗಳಮುಖಿ , ಉರಗ ಸಂರಕ್ಷಕ ಸ್ನೇಕ್ ಶಿವು ಹಾಗೂ ಸಾಹಿತಿಗಳಿಗೆ ಜಯಕರ್ನಾಟಕ ಸಂಘಟನೆ ನಿಮ್ಮ ಜೊತೆಯಲ್ಲಿ ಸದಾಕಾಲ ಇರುತ್ತದೆ ಎಂದು ತಿಳಿಸಿ ಸನ್ಮಮಾನಿಸಲಾಯಿತು.

ಹಾಗೂ ರಾಜ್ಯದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರಾದ ರಾಜೇಶ್ ಮದರಿ ಮತ್ತು ಚಿತ್ರದುರ್ಗ ಜಿಲ್ಲಾ ಎಲ್ಲಾ ಪದಾಧಿಕಾರಿಗಳು ಭಾಗಿಯಾಗಿದ್ದರು.

ಮಾಲತೇಶ್ ಅರಸ್. ನ್ಯೂಸ್ ಎಡಿಟರ್. 9480472030

Leave a Reply

Your email address will not be published. Required fields are marked *