ಡಾನ್ ಬೋಸ್ಕೋ ಶಾಲೆಯ ಅವ್ಯವಸ್ಥೆ ವಿರುದ್ಧ ಪೋಷಕರ ಆಕ್ರೋಶ

Chitradurga Districts Bureau

 

ಚಿತ್ರದುರ್ಗ: (ಸುದ್ದಿವಾಣಿ) ಮೂರು ವರ್ಷವಾದರೂ ನಡೆಯದ ಪೋಷಕರ ಶಿಕ್ಷಕರ ಸಭೆ, ಮಕ್ಕಳ ಕಲಿಕಾ ಮಟ್ಟದ ಏರಿಕೆಯಲ್ಲಿ ಕೊರತೆ, ಪ್ರತಿ ವರ್ಷ ದುಬಾರಿಯಾದ ಶುಲ್ಕ, ಶುಲ್ಕದ ಹೆಸರಿನಲ್ಲಿ ಪರೀಕ್ಷಾ ದಿನವಾದರೂ ಮಕ್ಕಳಿಗೆ ಹಾಲ್ ಟಿಕೆಟ್ ನೀಡದೆ ಕಿರಿಕಿರಿ, ದಿಢೀರ್ ಶಾಲೆಗೆ ಭೇಟಿ ಕೊಟ್ಟ ಪೋಷಕರಿಂದ ತರಾಟೆ. ಪ್ರಾಂಶುಪಾಲರಿಗೆ ಒಂದು ಪೀರಿಯಡ್ ಪಾಠ ಮಾಡಿದ ಪೋಷಕರು. ರೊಚ್ಚಿಗೆದ್ದ ಪಾಲಕರಿಂದ ಆಕ್ರೋಶ. ಕೂಡಲೇ ಸಭೆ ನಡೆಸಲು ಆಗ್ರಹ.

ಹೌದು. ಚಿತ್ರದುರ್ಗ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡಾನ್ ಬೋಸ್ಕೋ ಶಾಲೆಯ ಕರ್ಮಕಾಂಡ, ಸದಾ ತನ್ನದೇ ಯಶಸ್ವಿ ರಿಸಲ್ಟ್ ಮೂಲಕ ಹೆಸರು ಮಾಡಿರುವ ಡಾನ್ ಬೋಸ್ಕೋ ಶಾಲೆ ಇತ್ತೀಚೆಗೆ ಎಡವುತ್ತಿದೆ.‌ ಪೋಷಕರು ಇಟ್ಟಿರುವ ಅಪಾರ ನಂಬಿಕೆ ಹುಸಿಯಾಗುತ್ತಿದೆ ಎಂದು ಆರೋಪಿಸಿ ಐಸಿಎಸ್ ಸಿ ಶಾಲೆಯ ನೂರಾರು ಪೋಷಕರು ಶಾಲೆಗೆ ಆಗಮಿಸಿ ಗಲಾಟೆ ಮಾಡಿದರು.

ಪ್ರಿನ್ಸಿಪಾಲ್ ಫಾದರ್ ಮಾರ್ಟಿನ್ ವಿಜಯ್ ಅವರ ಕೊಠಡಿಗೆ ಆಗಮಿಸಿದ ಪೋಷಕರು ಮಕ್ಕಳ ಸಮಸ್ಯೆಗಳನ್ನು ಅನಾವರಣ ಮಾಡಿದರು. ಕೋವಿಡ್ ನಿಂದ ಇಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಪೇರೆಂಟ್ಸ್ ಮೀಟಿಂಗ್ ಮಾಡಿಲ್ಲ. ಶಿಕ್ಷಣ ಸಮರ್ಥವಾಗಿಲ್ಲ, ಒಂದು ತರಗತಿಯಲ್ಲಿ ಐವತ್ತು ಮಕ್ಕಳು ಇದ್ದು ಸೂಕ್ತ ಶಿಕ್ಷಣ ಸಿಗುತ್ತಿಲ್ಲ, ಫೀಜು ನೆಪದಲ್ಲಿ ಮಕ್ಕಳಿಗೆ ಒತ್ತಡ ಹಾಕುತ್ತಾರೆ. ಪರೀಕ್ಷಾ ಸಮಯದಲ್ಲಿ ಮಕ್ಕಳ ಕೈಲಿ ಫೀಸು ಕಟ್ಟಬೇಕು. ಇಲ್ಲಾಂದ್ರೆ ಹಾಲ್ ಟಿಕೆಟ್ ಕೊಡಲ್ಲ ಎಂದು ಹೇಳುವುದು ಸರಿಯೇ ಎಂದು ಪ್ರಶ್ನಿಸಿದರು.

ಇದೇ ವೇಳೆ ಪ್ರಾಂಶುಪಾಲರು ಪೋಷಕರು ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಹಲವು ಪೋಷಕರು ನೇರ ನೇರ ಗಲಾಟೆ ಮಾಡಿದರು. ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ನಾವು ಕಾರಣ ಉತ್ತಮ ಶಿಕ್ಷಣ ಕೊಡುತ್ತಾರೆ ಎಂದು ಸೇರಿಸಿದರೆ ಮಕ್ಕಳ ಮೂಲಕ ನಮಗೆ ಕಿರಿಕಿರಿ, ಮಕ್ಕಳಿಗೆ ಮನೆಯಲ್ಲಿ ಕಲಿಸಲು ಹೇಳುವುದಾದರೆ ನಾವ್ಯಾಕೆ ನಿಮ್ ಸ್ಕೂಲಿಗೆ ಸೇರಿಸಬೇಕು ಎಂದು ಆಕ್ರೋಶ ಹೊರಹಾಕಿದರು.

 

ಮಕ್ಕಳಿಗೆ ರಕ್ಷಣೆ ಎಲ್ಲಿದೆ..
ಇನ್ನೂ ಇಬ್ಬರು ಪೋಷಕರು ತಮ್ಮ ಮಕ್ಕಳು ಇಲ್ಲಿ ಆಟ ವಾಡುವಾಗ ಬಿದ್ದರೂ ಯಾರೂ ನೋಡಿಲ್ಲ ಎಂದರು. ಒಬ್ಬ ಪೋಷಕರು ಮಗು ಬಿದ್ದು ಬೆರಳು ಮುರಿದು ಹೋಗಿದೆ
ಗಾಯವಾದ ಕೈ ಎಕ್ಸ್ ರೇ ಹಿಡಿದು ಆಕ್ರೋಶ ಹೊರಹಾಕಿದರು. ಈ ವೇಳೆ ಶಾಲಾ ಸಿಬ್ಬಂದಿ ಮಕ್ಕಳ ತಂದೆ ತಾಯಿಯರ ನ್ನು ಸಮಾಧಾನ ಮಾಡಲು ಹರಸಾಹಸ ಪಡಬೇಕಾಯಿತು.

 

ಪೋಷಕರ ಸಭೆ ಕರೆಯಿರಿ.
ಮೊದಲು ಮಕ್ಕಳ ಬಗ್ಗೆ ಮಕ್ಕಳ ಶಿಕ್ಷಣ ಬಗ್ಗೆ ಹೆಚ್ಚು ಗಮನಕೊಡಿ, ಬಿಲ್ಡಿಂಗ್ ಕಟ್ಟಬೇಕು ಎಂದು ಹಣ ವಸೂಲಿ ಮಾಡುವುದನ್ನು ಬಿಡಿ. ಇರೋ ಒಳ್ಳೆಯ ಹೆಸರು ಉಳಿಸಿಕೊಳ್ಳಿ ನಿಮಗೂ ಒತ್ತಡ ಇರುತ್ತವೆ ಆದರೆ ನೀವು ಪೋಷಕರು ಸಭೆ ಕರೆಯಿರಿ ಎಂದು ಆಗ್ರಹಿಸಿದರು. ಕೊನೆಗೆ ಫಾದರ್ ಮಾರ್ಟಿನ್ ವಿಜಯ್ ಅವರು ಮಕ್ಕಳಿಗೆ ಪರೀಕ್ಷೆ ಪ್ರವೇಶ ಪತ್ರ ನೀಡಿ ಮತ್ತು ಪೋಷಕರಿಗೆ ಸಮಾಧಾನ ಮಾಡಿದಾಗ ಪೋಷಕರು ಒಂದು ಗಂಟೆಗಳ ನಂತರ ಮೌನವಾದರು.

 

ಚಿತ್ರದುರ್ಗ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡಾನ್ ಬೋಸ್ಕೋ ಶಾಲೆಯ ಪೋಷಕರು ದಿಢೀರ್ ಎಂದು ಶಾಲೆಗೆ ಆಗಮಿಸಿ ಶಾಲಾ ಸಮಸ್ಯೆ ಬಗೆಹರಿಸುವಂತೆ ಆಕ್ರೋಶ ಹೊರಹಾಕಿದರು.

 

 

 

Leave a Reply

Your email address will not be published. Required fields are marked *