“ಗೂಂಡಾ ಕಾಯ್ದೆಯಲ್ಲಿ ಬಾಳೆಕಾಯಿ ಸೀನ ಅಲಿಯಾಸ್ ಮಚ್ ಸೀನ ಅರೆಸ್ಟ್ “
ಚಿತ್ರದುರ್ಗ: ಜಿಲ್ಲೆಯಲ್ಲಿ ನಡೆಸುತ್ತಿರುವ ಅಕ್ರಮ ಚಟುವಟಿಕೆಗಳು ಅದರಲ್ಲಿಯೂ ಮರಳು ದಂಧೆಯಂತಹ ಚಟುವಟಿಕೆಗಳಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆಯಲ್ಲಿ ಹೆಚ್. ಶ್ರೀನಿವಾಸ ಅಲಿಯಾಸ್ ಬಾಳೆಕಾಯಿ ಸೀನ @ ಮಚ್ ಸೀನ ನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ರಾಧಿಕಾ IPS ರವರು ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಮರಳು ದಂಧೆಯನ್ನು ಅವ್ಯಾಹತವಾಗಿ ಮಾಡುತ್ತಿದ್ದ ಮತ್ತು ಈತನ ಮೇಲೆ ಬೇರೆ ಬೇರೆ ಠಾಣೆಗಳಲ್ಲಿ 10 ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದು. ರೌಡಿಶೀಟರ್ ಕೂಡ ಆಗಿದ್ದಾನೆ ಎಂದು ತಿಳಿಸಿದ್ದಾರೆ.
( ಕವಿತಾ ಎಸ್ . ಮನ್ನಿಕೇರಿ, ಜಿಲ್ಲಾಧಿಕಾರಿಗಳು)
ವಿವಿಧ ಕೋಮಿನ ನಡುವೆ ಸಂಘರ್ಷಕ್ಕೆ ಒಳಗಾಗುವ ರೀತಿಯಲ್ಲಿ ಅಪರಾಧದ ಚಟುವಟಿಕೆಗಳನ್ನು ನಡೆಸುತ್ತಿರುವ ಪ್ರವೃತ್ತಿ ಉಳ್ಳವನೆಂದು ಗೂಂಡಾ ಆಕ್ಟ್ ಕಾಯ್ದೆ ಅನುಸಾರವಾಗಿ ಜಿಲ್ಲಾಧಿಕಾರಿಗಳಾದ ಕವಿತಾ ಎಸ್ . ಮನ್ನಿಕೇರಿ ಅವರು ಮಾಡಿರುವ ಆದೇಶದಂತೆ ಹೆಚ್ ಶ್ರೀನಿವಾಸ್ ಆಲಿಯಾಸ್ ಬಾಳೆಕಾಯಿ ಸೀನ ಆಲಿಯಾಸ್ ಮಚ್ಚು ಸೀನ ತಂದೆ ಹನುಮಂತಪ್ಪ ಇವರನ್ನು ರಾಜೀವ್ ಗಾಂಧಿ ಆಶ್ರಯ ಬಡಾವಣೆ ಚಿತ್ರದುರ್ಗ ಇಲ್ಲಿ 17/01/2022 ರಂದು ಬಂಧಿಸಲಾಗಿದೆ ಎಂದು ಎಸ್.ಪಿ. ಜಿ.ರಾಧಿಕಾ ಅವರು ಮಾಹಿತಿ ನೀಡಿದ್ದಾರೆ.