ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಏನಾಗುತ್ತೆ ಗೊತ್ತಾ…! ಕುರ್ಚಿಯಾಟ.

Nation

ಲೇಖನ: ಮಾಲತೇಶ್ ಅರಸ್

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಏನ್ ಬೇಕಾದ್ರು ಆಗಬಹುದು.

ಮತ್ತೊಮ್ಮೆ ಅಕ್ಕ,, ಅಕ್ಕನ ಜೊತೆ ನಾನು ಹೀಗೆ ಹತ್ತಾರು ಪೋಸ್ಟರ್ ಗಳು ರಿಂಗಣಿಸುತ್ತಿವೆ. ಶಿಷ್ಯ ಪಡೆ, ಯುವ ಪಡೆ, ಕಾರ್ಯಕರ್ತರು ದಿನಕ್ಕೆ ಹತ್ತಾರು ಪೋಸ್ಟರ್ ಹಾಕಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ, ಮೀಡಿಯಾ, ಪ್ರಿಂಟ್ ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ಪೂರ್ಣಿಮಾ ಅಕ್ಕಂದೇ ಹವಾ.

ಬಿಜೆಪಿಯಿಂದ ಗೆದ್ದು ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಅವರು ಮತ್ತೊಂದು ಬಾರಿ ಶಾಸಕರಾಗಲೇ ಬೇಕು. ಸಚಿವರಾಗಲೇ ಬೇಕು ಎಂಬುದು ಅವರ ಗುರಿ.

ಸರಳ, ಧಿಮಾಕಿಲ್ಲದ, ಸುತ್ತಲೂ ಯಾರನ್ನು ಸಾಕಿಕೊಳ್ಳದೆ , ಎಲ್ಲರೊಟ್ಟಿಗೆ ನಡೆದಾಡುವ ಮತ್ತು ತಾಳ್ಮೆಯಿಂದ ಮಾತನಾಡುವ ಪ್ರತಿ ಅಕ್ಷರಗಳನ್ನು ಎಚ್ಚರದಿಂದ ಆಡುವ ಹೆಣ್ಣು ಮಗಳು.

ಅತ್ತ ಮೂರು ಬಾರಿ ಶಾಸಕರಾಗಿದ್ದ, ಒಂದು ಬಾರಿ ಸಚಿವರಾಗಿದ್ದ, ಕಿಯೋನೆಕ್ಸ್ ನಿಗಮದ ಅಧ್ಯಕ್ಷರಾಗಿದ್ದ ಡಿ.ಸುಧಾಕರ್ ಅವರನ್ನು ಮಣಿಸಲು ಪಕ್ಕ ಗರಡಿ ಸಿದ್ದವಾಗಿದೆ. ಡಿ.ಕೆ.ಶಿವಕುಮಾರ್ ಬಣದ‌ ಡಿ. ಸುಧಾಕರ್, ಸಿದ್ದರಾಮಯ್ಯ ಬಣದ ಬಿ. ಸೋಮಶೇಖರ್ ನಡುವೆ ಟಿಕೆಟ್ ಗಾಗಿ ಶೀತಲಸಮರ ನಡೆದಿದೆ. ಸೋಮಣ್ಣ ಒಳ ಹೊಡೆತ ಕೊಡೋದು ಪಕ್ಕ, ಟಿಕೆಟ್ ತರುವ ತಾಕತ್ತು ಸೋಮಶೇಖರ್ ಗೆ ಇದೆ. ಅಥವಾ ಟಿಕೆಟ್ ಕೊಡಿಸಿ ತಾನೂ ಬೆಳೆಯುವ ಗುಣವೂ ಇದೆ. ಕ್ಷೇತ್ರದ ಜೊತೆ ರಾಜ್ಯದ ಸೆಕೆಂಡ್ ಲೀಡರ್, ಹಾಗೆ ನೋಡಿದರೆ ಸೋಮಶೇಖರ್, ಪೂರ್ಣಿಮಾ ಅವರು ಪಕ್ಕ ಮಾಸ್… ಹೇಗಂದ್ರೆ. ಕುರುಬರು – ಗೊಲ್ಲರು ಒಡಹುಟ್ಟಿದವರ ತರಾ. ಒಂದೇ ಬಳ್ಳಿಯ ಬುಡಕಟ್ಟು ಮಕ್ಕಳು.

ಸೋಮಶೇಖರ್ ಸಾದಾಸೀದಾ ಮನುಷ್ಯ, ಗ್ರಾ ಪಂ ನಿಂದ ಎಲ್ಲಾ ಹುದ್ದೆಯ ಮೂಲಕ ಮೆಟ್ಟಿಲೇರಿದ ಮರಿ ಟಗರು , ಅಂದರೆ ಸಿದ್ದರಾಮಯ್ಯ ಶಿಷ್ಯ, ಸಿದ್ದರಾಮಯ್ಯ ಅವರು ಏನ್ ಹೇಳಿದರೂ” ಆಯ್ತು ಬಾಸ್” ಎನ್ನುವ ವ್ಯಕ್ತಿ. ಮತ್ತೆ ಇತ್ತೀಚಿಗೆ‌ ಕಾಡುಗೊಲ್ಲರ ಪರವಾಗಿ ಧ್ವನಿ ಎತ್ತಿದ ಸಾಮಾಜಿಕ ನ್ಯಾಯದ ಯುವಕ ಸೋಮಶೇಖರ್.

ಪೂರ್ಣಿಮಾ ಗೆ ಕಾಂಗ್ರೆಸ್ ಗಾಳ ಹಾಕಿದೆ. ಈ ಬಾರಿ ಕಾಂಗ್ರೆಸ್ ನಿಂದ ಕರೆತರಬೇಕೆಂಬ ಒಳ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಪೂರ್ಣಿಮಾ ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೇ ಸೋಮಶೇಖರ್ ನಡೆ ಪಕ್ಷದ ಪರವಾಗಿಯೇ ಇರುತ್ತದೆ.

ಆದರೆ ಡಿ.ಸುಧಾಕರ್ ಕತೆ ಏನಾಗಬ್ಯಾಡ. ಡಿ. ಸುಧಾಕರ್ ಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಗೆ ಲಾಭ ಇಲ್ಲ ಅನ್ನುವ ಲೆಕ್ಕಾಚಾರ ಇದೆ. ಯಾಕೆಂದರೆ ಜೈನ ಮತ ಪಕ್ಕ ಬಿಜೆಪಿಯ ಪಾಲು, ಕಾಂಗ್ರೆಸ್ ಗೆ ಯಾವ ಕ್ಷೇತ್ರದಲ್ಲೂ ಸುಧಾಕರ್ ನಿಂದ ಅವರ ಜಾತಿಯ ಮತಗಳು ಬೀಳಲ್ಲ. ಮತ್ತು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಇದೀಗ ಬಿಜೆಪಿ ರಾಜ್ಯ ಸಭಾ ಸದಸ್ಯರು. ‌ಆಗ ಕಾಂಗ್ರೆಸ್ ವರಿಷ್ಠರಿಗೆ ನಮ್ಮ ಜೈನರಿಗೆ ಟಿಕೆಟ್ ಕೊಡಿ ಎಂದು ಹೇಳುವ ಶಕ್ತಿ ಅವರಿಗೆ ಇತ್ರು. ಇದೀಗ ಅವರು ಮೋದಿ ಅಂಗಳದಲ್ಲಿದ್ದು ಸುಧಾಕರ್ ಪರ ಹೇಳೋಕೆ ಪೋನ್ ಮಾಡೊದು ಇರಲಿ ಡಯಲ್ ಕೂಡಾ ಮಾಡಲ್ಲ ಎನ್ನುತ್ತಿವೆ ಜೈನ ಮೂಲಗಳು.

ಆದರೆ ಪೂರ್ಣಿಮಾ ಗೆ ಹಿರಿಯೂರು ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಕೋಲಾರದಲ್ಲಿರುವ. ಗೊಲ್ಲ ಮತ್ತು ಕಾಡುಗೊಲ್ಲರ ಮತಗಳು ಸಿದ್ದರಾಮಯ್ಯ ಗೆ ಪಕ್ಕ, ಚಿತ್ರದುರ್ಗ, ತುಮಕೂರು ಬೆಂಗಳೂರು, ಬೆಂಗಳೂರು ಗ್ರಾಮಾಂತರ ರಾಮನಗರ, ಮೈಸೂರು ಮತ್ತು ಗೊಲ್ಲರ ಮತಗಳು ಕಾಂಗ್ರೆಸ್ ಗೆ ಬೀಳಲಿವೆ. ಅದಕ್ಕೂ ಹೆಚ್ಚಾಗಿ ಪೂರ್ಣಿಮಾ ಶ್ರೀನಿವಾಸ್ ಮುಂದೆ ಸಚಿವರಾಗೋದು ಪಕ್ಕ. ಇದು ಹಿರಿಯೂರು ಚರಿತ್ರೆ.
ಹೇಳಿ ಕೇಳಿ ಇದು 100 ನಂಬರ್ ನ ಕ್ಷೇತ್ರ, ಈ ಬಾರಿ ಹಂಡ್ರೆಡ್ ಪರ್ಸೆಂಟ್ ಅದಲು ಬದಲು.

 

 

ಮಾಲತೇಶ್ ಅರಸ್ ಹರ್ತಿಕೋಟೆ
ಸಂಪಾದಕರು ಈ ನಗರವಾಣಿ.
ಜಿಲ್ಲಾ ಪ್ರತಿನಿಧಿ ZEE ಕನ್ನಡ ನ್ಯೂಸ್.. ಚಿತ್ರದುರ್ಗ.

9480472030

Leave a Reply

Your email address will not be published. Required fields are marked *