ಚಳ್ಳಕೆರೆ ಇನ್ಸ್ ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಅವರಿಗೆ ಸಿಕ್ಕ ಗೌರವ
ಮಾಲತೇಶ್ ಅರಸ್ ಹರ್ತಿಕೋಟೆ
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಪೊಲೀಸ್ ಇನ್ಸ್ ಪೆಕ್ಟರ್ ಜೆ.ಎಸ್ . ತಿಪ್ಪೇಸ್ವಾಮಿ ಅವರಿಗೆ 2021 ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ. ಪದಕ ಬಂದಿರುವುದಕ್ಕೆ ಪೊಲೀಸ್ ಅಧೀಕ್ಷಕರಾದ ಪರಶುರಾಮ್, ಹೆಚ್ಚುವರಿ ಅಧೀಕ್ಷಕರಾದ ಕುಮಾರಸ್ವಾಮಿ ಮತ್ತು ಚಳ್ಳಕೆರೆ ಉಪಾಧೀಕ್ಷಕರಾದ (ಡಿವೈಎಸ್ ಪಿ) ಕೆ.ವಿ ಶ್ರೀಧರ್ ಸಂತಸ ವ್ಯಕ್ತ ಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಸಮೀಪದ ಎನ್. ಉಪ್ಪಾರಹಟ್ಟಿ ಗ್ರಾಮದ ಜೆ.ಎಸ್. ತಿಪ್ಪೇಸ್ವಾಮಿ ಅವರು 2003ರಲ್ಲಿ ಕರ್ನಾಟಕ ಪೊಲೀಸ್ ಅಕಾಡಮಿಯಲ್ಲಿ ತರಬೇತಿ ಪಡೆದ ಮಂಡ್ಯದಲ್ಲಿ ಪ್ರೊಬೇಷನರಿ ಯಾಗಿ ಕಾರ್ಯ ನಿರ್ವಹಿಸಿ ನಂತರ ಶಿವಮೊಗ್ಗ, ರಾಂಪುರ , ಬಿಳಿಚೋಡು ನಲ್ಲಿ ಪಿಎಸ್ಐ ಆಗಿ ಕೆಲಸ ಮಾಡಿದ ಜೆ.ಎಸ್. ತಿಪ್ಪೇಸ್ವಾಮಿ ಅವರು ಬಡ್ತಿ ಪಡೆದು ಬೆಂಗಳೂರು ನಗರದ ಇಂಟಲಿಜೆನ್ಸ್ ನಲ್ಲಿ ಸೇವೆ ಸಲ್ಲಿದ್ದಾರೆ.
ನಂತರ ಜಗಳೂರು ಮೊಳಕಾಲ್ಮೂರು, ತರೀಕೆರೆ, ಶಿವಮೊಗ್ಗ ಎಸಿಬಿಯಲ್ಲಿ ತಮ್ಮದೇ ಆದ ಚಾಕಚಕ್ಯತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಶಿವಮೊಗ್ಗ ಎಸಿಬಿಯಲ್ಲಿ ಕೆಲಸ ಮಾಡುವಾಗ ಅನೇಕ ಕೇಸ್ ಗಳನ್ನು ಜಾಣ್ಮೆಯಿಂದ ನಿರ್ವಹಿಸಿದ್ದಾರೆ. ಚಳ್ಳಕೆರೆ ಇನ್ಸ್ ಪೆಕ್ಟರ್ ಆಗಿದ್ದು,
ಅದೇ ರೀತಿ ಹಿಂದಿನ ಎಸ್ಪಿ ರಾಧಿಕಾ ಅವರ ಜೊತೆಗೆ ಇಲಾಖೆಯಲ್ಲಿ ಎಲ್ಲಾ ಅಧಿಕಾರಿಗಳ ಜೊತೆಗೆ ಚಿತ್ರದುರ್ಗ ತಾಲೂಕು ಭರಮಸಾಗರ ಇಸಾಮುದ್ರ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಶಶಿಕಲಾ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದ ಜಾಗದಲ್ಲಿ ಹಗಲಿರಲು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧಿಕಾರಿಗಳ ಜತೆ ಸೇರಿ ಘಟನೆ ನಡೆದ ಕೇವಲ ನಾಲ್ಕೇ ದಿನಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ತಿಪ್ಪೇಸ್ವಾಮಿಯವರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರ ಜಿಲ್ಲಾ ಸಂಘದಿಂದ ನಾವು ಮನವಿ ಮಾಡಿದಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಉಪ್ಪಾರ ಸಮಾಜಕ್ಕೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರಿಗೆ ಮುಖ್ಯಮಂತ್ರಿಗಳ ಪದಕ ಕೊಟ್ಟಿರುವುದು ಸಂತಸ ತಂದಿದೆ ಎಂದು ಚಿತ್ರದುರ್ಗ ಜಿಲ್ಲಾ ಉಪ್ಪಾರ ಸಂಘದ ಮಾಜಿ ಅಧ್ಯಕ್ಷರಾದ ಆರ್. ಮೂರ್ತಿ ತಿಳಿಸಿದ್ಧಾರೆ.
ತಿಪ್ಪೇಸ್ವಾಮಿ ಅವರಿಗೆ ಇಪ್ಪತ್ತು ವರ್ಷಗಳ ಸೇವೆಗೆ ಸಿಕ್ಕ ಗೌರವ, ಯಾವುದೇ ಕೆಲಸ ಕೊಟ್ಟರು ತಂಡದೊಂದಿಗೆ ಸೇರಿ ಉತ್ತಮ ಕೆಲಸ ಮಾಡುತ್ತಾರೆ. ಆ ಪ್ರಶಸ್ತಿ ಅವರಿಗೆ ಸ್ಪೂರ್ತಿ ನೀಡಲಿ. ಇನ್ನಷ್ಟು ಕೆಲಸ ಮಾಡುವ ಹುಮ್ಮಸ್ಸು ಬರಲಿ. ಇದು ನಮ್ಮ ಚಿತ್ರದುರ್ಗ ಜಿಲ್ಲೆಗೆ ಸಂದ ಗೌರವ. ನಮಗೆಲ್ಲ ಹೆಮ್ಮೆ.
ಪರಶುರಾಮ್ , ಜಿಲ್ಲಾ ಪೊಲೀಸ್ ಅಧೀಕ್ಷಕರು ಚಿತ್ರದುರ್ಗ
135 ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಪದಕ ಪ್ರಕಟ
ಬೆಂಗಳೂರು: 2021ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. 135 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಮೆಡಲ್ ಪ್ರಕಟವಾಗಿದೆ. ಏಪ್ರಿಲ್ 2ರಂದು ಕೋರಮಂಗಲದ ಕೆಎಸ್ ಆರ್ ಪಿ ಗ್ರೌಂಡ್ ನಲ್ಲಿ ಪದಕ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್ಪಿ, ಇನ್ಸ್ ಪೆಕರ್ ಮತ್ತು ಸಿಬ್ಬಂದಿಗೆ ಪದಕ ನೀಡಲಾಗುತ್ತಿದೆ. ಸಿಐಡಿ ಡಿವೈಎಸ್ಪಿ ವೀರೇಂದ್ರ ಕುಮಾರ್, ಉಡುಪಿ ಡಿಎಆರ್ ವಿಭಾಗದ ಡಿವೈಎಸ್ಪಿ ರಾಘವೇಂದ್ರ ಆರ್ ನಾಯಕ್, ಇನ್ಸ್ಪೆಕ್ಟರ್ಗಳಾದ ಗೋವಿಂದಪುರ ಠಾಣೆ ಪಿಐ ಪ್ರಕಾಶ್, ಮಂಜುನಾಥ್, ನಟರಾಜ್, ಶಿವಕುಮಾರ್, ರಾವ್ ಗಣೇಶ್ ಜನಾರ್ಧನ್, ಸೇರಿದಂತೆ ಒಟ್ಟು 135 ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಪದಕ ಪ್ರಕಟ ಮಾಡಲಾಗಿದೆ. ಏಪ್ರಿಲ್ 2ರಂದು ಕೋರಮಂಗಲದ ಕೆಎಸ್ ಆರ್ ಪಿ ಗ್ರೌಂಡ್ ನಲ್ಲಿ ಪದಕ ಪ್ರಧಾನ ಕಾರ್ಯಕ್ರಮ ನಡೆಯಲಿದೆ.