ಚಿತ್ರದುರ್ಗ 🙁 ಸುದ್ದಿವಾಣಿ) ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಧಾರುಣವಾಗಿ ಮೃತಪಟ್ಟರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮದ ಬಳಿ ನಡೆದಿದೆ.
ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದ ಬಂಧುಗಳ ಮನೆಯಲ್ಲಿ ಊಟ ಮುಗಿಸಿಕೊಂಡು ರಾತ್ರಿ ಹನ್ನೊಂದುವರೆ ಸಮಯದಲ್ಲಿ ಸ್ವ ಗ್ರಾಮ ಬಿದುರ್ಗ ಕ್ಕೆ ತೆರಳುವಾಗ ದುರ್ಗಾಂಬ ಎಂಬ ಖಾಸಗಿ ಬಸ್ ಚಿತ್ರದುರ್ಗದಿಂದ ಬರುತ್ತಿತ್ತು.
ಬಸ್ ಒವರ್ ಟೇಕ್ ಮಾಡಿ ಮುನ್ನುಗ್ಗುತ್ತಿದ್ದಾಗ ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿದ್ದ ನಾಗರಾಜ್ (43), ಪತ್ನಿ ಶೈಲಜ (37), ವೀರೇಶ್(9), ಸಂತೋಷ್ (7) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹೊಳಲ್ಕೆರೆ ಪೊಲೀಸ್ ಇನ್ಸ್ ಪೆಕ್ಟರ್ ರವೀಶ್ ಪಾಟೀಲ್ ಹಾಗೂ ಅಧಿಕಾರಿಗಳು, ಸಿಬ್ಬಂದಿ ಬೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ.
ಕ್ರೈಂ ಬ್ಯೂರೋ ಸುದ್ದಿವಾಣಿ. ಡಿಜಿಟಲ್.