ಬಿಜೆಪಿ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾಗೆ ಅದ್ದೂರಿ ಸ್ವಾಗತ

Chitradurga State

ಬಿಜೆಪಿ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾಗೆ ಅದ್ದೂರಿ ಸ್ವಾಗತ

 

ಮಾಲತೇಶ್ ಅರಸ್
ಚಿತ್ರದುರ್ಗ: ಜಿಲ್ಲಾ ಬಿಜೆಪಿ ನೇತೃತ್ವದ ಕೇಸರಿಪಡೆ ಜನಪ್ರತಿನಿಧಿಗಳ ಶಕ್ತಿ ಪ್ರದರ್ಶನಕ್ಕೆ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ ಹಮ್ಮಿಕೊಂಡಿದ್ದು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾವೇಶ ಸ್ಥಳ ಮುರುಘಾ ಮಠ ಹಾಗೂ ಕಲ್ಲಿನ ಕೋಟೆ ಚಿತ್ರದುರ್ಗ ಸಂಪೂರ್ಣ ಕೇಸರಿಮಯವಾಗಿದೆ.

ಚಿತ್ರದುರ್ಗ ಜಿಲ್ಲೆ ಅಂದ್ರೆ ಅದು ಕಾಂಗ್ರೆಸ್ ನ ಭದ್ರಕೋಟೆ.. ಕೈ ಭದ್ರಕೋಟೆಯನ್ನು ಛಿದ್ರ ಮಾಡಿದ ಕಮಲ ಪಡೆ ಇದೀಗ ಚಿತ್ರದುರ್ಗ ಜಿಲ್ಲೆಯನ್ನು ಕೇಸರಿ ಕೋಟೆಯಾಗಿಸಿದೆ. ಎಲ್ಲಿ ನೋಡಿದರೂ ಕೇಸರಿ, ಕೇಸರಿ, ಕೇಸರಿ.

 

ಚಿತ್ರದುರ್ಗ ನಗರಕ್ಕೆ ಎಂಟ್ರಿ ಯಾಗುವ ಹೊಳಲ್ಕೆರೆ ರಸ್ತೆ, ಚಳ್ಳಕೆರೆ ರಸ್ತೆ, ದಾವಣಗೆರೆ ರಸ್ತೆ, ಹಿರಿಯೂರು ರಸ್ತೆ, ಅಷ್ಟೇ ಅಲ್ಲ ನಗರದಾದ್ಯಂತ ಎಲ್ಲಾ ಕಡೆ ನೋಡಿದರೂ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು ಹತ್ತು ಸಾವಿರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಇದೇ ಮೊದಲ ಬಾರಿಗೆ ಕಲ್ಲಿನ ಕೋಟೆ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದು. ಜತೆಗೆ ಸಿಎಂ ಬಸವರಾಜ ಬೊಮ್ಮಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ, ಅನೇಕ ಸಚಿವರು ಭಾಗವಹಿಸುವರು ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಮುರುಳಿ ‘ಈ ನಗರವಾಣಿ” ಗೆ ತಿಳಿಸಿದರು.

ಚಿತ್ರದುರ್ಗ ಮುರುಘಾ ಮಠದ ಅನುಭವ ಮಂಟಪದಲ್ಲಿ ಮಧ್ಯಾನ್ಹ ಎರಡು ಗಂಟೆಗೆ ಸಮಾವೇಶ ನಡೆಯಲಿದ್ದು, ಇಡೀ ಮುರುಘಾ ಮಠವೇ ಬಿಜೆಪಿ ಭಾವುಟಗಳಿಂದ ಮುಳುಗಿ ಕೇಸರಿಮಯವಾಗಿದೆ.

ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ.ಸಿಎಂ. ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು, ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ,ಕೇಂದ್ರ ಸಚಿವ ನಾರಾಯಣ ಸ್ವಾಮಿ, ಸಾರಿಗೆ ಸಚಿವರಾದ ಶ್ರೀರಾಮುಲು, ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಮತ್ತು ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಪೂರ್ಣಿಮಾ ಶ್ರೀನಿವಾಸ್, ಖನಿಜ ನಿಗಮದ ಅಧ್ಯಕ್ಷರಾದ ಲಿಂಗಮೂರ್ತಿ. ಪರಿಷತ್ ಸದಸ್ಯರಾದ ನಾರಾಯಣ ಸ್ವಾಮಿ, ಕೆ.ಎಸ್.ನವೀನ್ ಸೇರಿದಂತೆ ನಾಡಿನ ಅನೇಕ ದಿಗ್ಗಜರು ಬರಲಿದ್ದು ಅನುಭವ ಮಂಟಪ ವೇ ಬಿಜೆಪಿಯಾಗಿದ್ದು, ಭರ್ಜರಿ ಸಮಾವೇಶ ಮಾಡಲಿದ್ದಾರೆ.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಶೇ 80 ರಷ್ಟು ಜಯ ಸಾಧಿಸಿರುವ ಬಿಜೆಪಿ ಕಾರ್ಯಕರ್ತರು ಇಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ವಿವಿಧ ಜವಾಬ್ದಾರಿಗಳನ್ನು ಅನೇಕ ಮುಖಂಡರು ಹಾಗೂ ಮೋರ್ಚಾಗಳು ಉಸ್ತುವಾರಿ ವಹಿಸಿದ್ದು ಅನೇಕರು ಸಭೆ ನಡೆಸಿದರು. ‌ಸಮಾವೇಶದ ಒಳಗೆ ಹೊರಗೆ ಭರ್ಜರಿ ಬಂಟಿಂಗ್ಸ್, ಪೋಟೋ ಗಳು ರಾರಾಜಿಸುತ್ತಿವೆ.

ಒಟ್ಟಾರೆ ಚಿತ್ರದುರ್ಗದ ಮೂಲಕ ಬಿಜೆಪಿ ಮುಂದಿನ ಚುನಾವಣಾ ರಣಕಹಳೆ ಮೊಳಗಿಸುತ್ತಿದೆ. ಮತ್ತು ಜಿಲ್ಲಾ ಪಂಚಾಯತಿ. ಮತ್ತು ತಾಲ್ಲೂಕು ಪಂಚಾಯತ ಚುನಾವಣಾ ಕಣವನ್ನು ರೆಡಿ ಮಾಡಲು ತಯಾರು ಮಾಡಿಕೊಳ್ಳಲು ಮೋದಿಯವರೇ ನಡ್ಡಾರ ಮೂಲಕ ಹೊರಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

 

ಚುನಾವಣಾ ರಣಕಹಳೆ…
ಇದು ಪಕ್ಕ ಜನಪ್ರತಿನಿಧಿಗಳ ಸಮಾವೇಶ.ಚಿತ್ರದುರ್ಗದ ಮೂಲಕ ಬಿಜೆಪಿ ಮುಂದಿನ ಚುನಾವಣಾ ರಣಕಹಳೆ ಮೊಳಗಿಸುತ್ತಿದೆ. ಮತ್ತು ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತ ಚುನಾವಣಾ ಕಣವನ್ನು ರೆಡಿ ಮಾಡಲು ತಯಾರು ಮಾಡಿಕೊಳ್ಳಲು ಮೋದಿಯವರೇ ನಡ್ಡಾರ ಮೂಲಕ ಹೊರಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೊಂದು ತಂತ್ರಗಾರಿಕೆಯ ಅಸ್ತ್ರಗಳನ್ನು ಬಳಸಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಯ ಜನಪ್ರತಿನಿಧಿಗಳ ಸಂಗಮವಾಗಲಿದೆ.

ಮುರುಘಾ ಮಠ ಕೇಸರಿಮಯಂ

ಈ ಸಮಾವೇಶದ ಹಿನ್ನೆಲೆಯಲ್ಲಿ ಅನುಭವ ಮಂಟಪ ಅಷ್ಟೇ ಅಲ್ಲ. ಇಡೀ ಮುರುಘಾ ಮಠವೇ ಬಿಜೆಪಿ ಭಾವುಟಗಳಿಂದ ತುಂಬಿ ಹೋಗಿದೆ. ಅನೇಕರು ಬಿಜೆಪಿ ಹಬ್ಬದ ಸಂಭ್ರಮ ಮಠವನ್ನು ಮರೆಮಾಡಿದೆ. ನಡ್ಡಾ ಆಗಮನದ ಹಿನ್ನೆಲೆಯಲ್ಲಿ ಮುಖ್ಯವಾಗಿ ಎಲ್ಲಾ ರಸ್ತೆಗಳು ಕಮಲಮಯವಾಗಿವೆ. ಮಠದೊಳಗೆ ಇಂದು ಎಲ್ಲಾ ಕೇಸರಿ ಬಣ್ಣ ಮಂತ್ರಮುಗ್ದವಾಗಿಸುತ್ತದೆ. ಒಂದೆಡೆ ಮಠದೊಳ್ ಬಿಜೆಪಿ ಯೋ.. ಬಿಜೆಪಿಯೋಳ್ ಮಠವೋ..ಎಂಬಂತಾಗಿದೆ.

 

ಮಾಲತೇಶ್ ಅರಸ್. ನ್ಯೂಸ್ ಎಡಿಟರ್. ಸುದ್ದಿವಾಣಿ.9480472030

Leave a Reply

Your email address will not be published. Required fields are marked *