ಚಿಕ್ಕಮಗಳೂರು ಜಿಲ್ಲೆಯ ಬೀರೂರು ಕ್ಷೇತ್ರದ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ.09.10.2019 ಬುಧವಾರ
“ಪಂಜರದ ಗಿಳಿಗಳು ಹಾರಿಹೋದವು.
ಕಟ್ಟಿದ ಕೋಟೆ ಪರರಾಯ್ತು.
ಮುಂಗಾರು ಮಳೆ ಸುರಿಸಿದವು
ಸರ್ವರೂ ಎಚ್ಚರದಿಂದಿರಬೇಕು”
ಹಿರೇ ಮೈಲಾರ ಕಾರ್ಣಿಕ
ಕಬ್ಬಿಣದ ಸರಪಳಿ ತುಂಡಾತಲೇ ಪರಾಕ್.
ಮೈತ್ರಿ ಸರಕಾರ ಪತನ
ದೇವರ ಗುಡ್ಡದ ಮಾಲತೇಶ ಸ್ವಾಮಿ ಕಾರ್ಣಿಕ
ಘಟಸರ್ಪ ಕಂಗಾಲಾದಿತಲೇ ಪರಾಕ್ 07.10.2019
ರಾಜಕೀಯವಾಗಿ ಅಧಿಕಾರಸ್ಥರಿಗೆ ನೆತ್ತಿಮೇಲೆ ತೂಗುಗತ್ತಿ.
ಯಡಿಯೂರಪ್ಪರಿಗೆ ಭಯ. ಸರ್ಪದಂತೆ ಬುಸು ಗುಟ್ಟಿದರೂ ಕಂಗಾಲಾಗಿ ಅಧಿಕಾರ ತ್ಯಾಗ ಸಾಧ್ಯತೆ.
ಘಟಸರ್ಪದಂತೆ ದುಡ್ಡಿನ ಮದದಲ್ಲಿರುವವರಿಗೆ ಅಪಾಯ.
ಬೀರೂರು ಮೈಲಾರಲಿಂಗೇಶ್ವರ ಕಾರ್ಣೀಕ. 09.10.2019
ಪಂಜರದ ಗಿಳಿಗಳು ಹಾರಿಹೋದವು.
ಕಟ್ಟಿದ ಕೋಟೆ ಪರರಾಯ್ತು.
ಮುಂಗಾರು ಮಳೆ ಸುರಿಸಿದವು
ಸರ್ವರೂ ಎಚ್ಚರದಿಂದಿರಬೇಕು.
@
ಕೋಟೆ ಕಟ್ಟಿ ಮೆರೆದೋರು ಮಣ್ಣಾಗುವ ಕಾಲ ಸನ್ನಿಹಿತ.
ರಾಜಕೀಯ ವ್ಯಕ್ತಿಗಳಿಗೆ ಸಂಕಷ್ಟ
ಜನ ಸಾಮಾನ್ಯರಿಗೆ ಆರ್ಥಿಕ ಹೊಡೆತ,
ವರುಣನಿಂದ ರೈತರ ಸಂಭ್ರಮ.
ಕೆರೆ ಕಟ್ಟೆ ಅಣೆಕಟ್ಟು ಭರ್ತಿಯಾಗಿ ಹಲವೆಡೆ ಜಲಪ್ರಳಯ ಸಂಭವ.
ಕಾಂಗ್ರೆಸ್ ಗೂಡಿನಿಂದ ಹಕ್ಕಿಗಳು ಹೊರಗೆ ಹಾರುವ ಕಾಲ.
ಕಾರ್ಮಿಕ ವರ್ಗಕ್ಕೆ ದುಡಿಮೆ ಇಲ್ಲದೆ ಪರದಾಟ. ಮಾಧ್ಯಮಗಳಿಂದ ಅಲ್ಲೋಲ ಕಲ್ಲೋಲ ಸಾಧ್ಯತೆ.
ಜೀವ ವೈವಿದ್ಯ ಸಂಕುಲದಿಂದ ಅಪಾಯಕಾರಿ ಸೃಷ್ಟಿ.
ಮಾಲತೇಶ್ ಅರಸ್ ಹರ್ತಿಕೋಟೆ
ಬುಡಕಟ್ಟು ಸಂಸ್ಕೃತಿ ಸಂಶೋದಕ ಚಿತ್ರದುರ್ಗ.
.
.
.
.
..
ಮಾಲತೇಶ್ ಅರಸ್ ಹರ್ತಿಕೋಟೆ.ಸಂಪಾದಕರು ಸುದ್ದಿವಾಣಿ
Good job karnika should listening properly. Thank you sir for display of the time of birur karnika