ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಸ್ತಂಗತ
ಹಾಸನ: ಬದುಕಿನುದ್ದಕ್ಕೂ ಸಂತನಂತಿದ್ದ ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅನಾರೋಗ್ಯದಿಂದ ಯುಗಾದಿ ಚಂದ್ರನ ದಿನದ ಬೆಳಗ್ಗೆ ನಿಧನರಾಗಿದ್ದಾರೆ. ವಿಶ್ವಶಾಂತಿಯ ಬಾವುಟ ಹಿಡಿದಿದ್ದ ಪರಮಪೂಜ್ಯ ಕರ್ಮಯೋಗಿ ಸ್ವಸ್ಥಿಶ್ರೀ ಚಾರುಕೀರ್ತಿ ಭಟ್ಟಾರಕರು, ಚರಿತ್ರೆ ಹಾಗೂ ತತ್ವಶಾಸ್ತ್ರ ಎರಡು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಬಹುಶ್ರುತರಾಗಿದ್ದವರು. ಪ್ರಾಕೃತವೂ ಸೇರಿದಂತೆ ಆರು ಭಾಷೆಗಳ ಪ್ರಾಜ್ಞರಾಗಿದ್ದವರು. ನಿಸ್ವಾರ್ಥ ಸೇವೆ, ಸತತ ಪರಿಶ್ರಮ, ಸಮಕಾಲೀನ ದೃಷ್ಟಿಕೋನ, ವೈಜ್ಞಾನಿಕ ಚಿಂತನೆ, ಸಮರ್ಪಣಾ ಮನೋಭಾವ ಇವುಗಳನ್ನು ಪಂಚಾಣುವ್ರತದಂತೆ ಪಾಲಿಸುತ್ತಿದ್ದ ಸ್ವಾಮೀಜಿಯವರನ್ನು ಹತ್ತಿರದಿಂದ ಕಂಡಿದ್ದೇನೆ. ಭಟ್ಟಾರಕರ ನಿರ್ಗಮನ ಜೈನ […]
Continue Reading