ಅಸ್ಸಾಂ: ಅವನಿಂದ ತಾಳಿ ಕಟ್ಟಿಸಿಕೊಂಡು ಸಂಸಾರ ಸಾಗಿಸಬೇಕಾಗಿದ್ದವನು ಅಸಲಿಗೆ ವಂಚಕ ಎಂದು ತಿಳಿದ ನಂತರ ಭಾವಿಪತಿ ವಿರುದ್ಧವೇ ಮಹಿಳಾ ಸಬ್ ಇನ್ಸ್ಪೆಕ್ಟರ್ ಕೈಗೆ ಕೋಳ ತೊಡಿಸಿ ಅರೆಸ್ಟ್ ಮಾಡಿ ಎಫ್ಐಆರ್ ದಾಖಲಿಸಿದ್ದಾರೆ. ಈ ಸುದ್ದಿ ಅಸ್ಸಾಂನಲ್ಲಿ ವೈರಲ್ ಆಗುತ
ವಂಚಕ ರಾಣಾ ಪೊಗಾಗ್ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್(ಒಎನ್ಜಿಸಿ)ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಎಲ್ಲರನ್ನು ನಂಬಿಸಿದ್ದನು. ಅಷ್ಟೇ ಅಲ್ಲದೇ ಒಎನ್ಜಿಸಿನಲ್ಲಿ ಕೆಲಸ ಮಾಡಲು ಇಷ್ಟಪಡುವವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ಕೊಟ್ಟು ಹಲವರನ್ನು ವಂಚಿಸುತ್ತಿದ್ದನು. ಈ ಹಿನ್ನೆಲೆ ಸತ್ಯ ಬಯಲಿಗೆ ಬಂದ ನಂತರ ಪೊಗಾಗ್ನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಅಸ್ಸಾಂನ ನಾಗಾಂವ್ ಜಿಲ್ಲೆಯ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಜುನ್ಮೋನಿ ರಾಭಾ ಅವರೊಂದಿಗೆ ರಾಣಾ ಪೊಗಾಗ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದನು. ಈ ಹಿನ್ನೆಲೆ ಕಳೆದ ವರ್ಷ ಅಕ್ಟೋಬರ್ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನವೆಂಬರ್ನಲ್ಲಿ ಮದುವೆಯಾಗಲು ನಿರ್ಧರಿಸಲಾಗಿತ್ತು.
ಆದರೆ ಈತ ಒಬ್ಬ ವಂಚಕ ಎಂದು ತಿಳಿದ ತಕ್ಷಣ ಜುನ್ಮೋನಿ, ಆತನ ವಿರೋಧ ಎಫ್ಐಆರ್ ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿದ ಜುನ್ಮೋನಿ, ಅವನು(ರಾಣಾ ಪೊಗಾಗ್) ಎಷ್ಟು ದೊಡ್ಡ ವಂಚಕ ಎಂದು ನನಗೆ ಮಾಹಿತಿ ಕೊಟ್ಟ ಮೂರು ಜನರಿಗೆ ನಾನು ಆಭಾರಿಯಾಗಿದ್ದೇನೆ. ಅವರು ನನ್ನ ಕಣ್ಣುಗಳನ್ನು ತೆರೆಸಿದರು ಎಂದು ಸಂತೋಷ ವ್ಯಕ್ತಪಡಿಸಿದರು.
ಪ್ರಸ್ತುತ ಪೊಗಾಗ್ನನ್ನು ಪೊಲೀಸರು ಬಂಧಿಸಿದ್ದು, ಜನರನ್ನು ವಂಚಿಸಿ ಕೋಟ್ಯಂತರ ರೂ. ಸಂಗ್ರಹಿಸಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ನಾನು ರಾಣಾ ಪೊಗಾಗ್ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಒಎನ್ ಜಿಸಿಯ ಕೆಲವು ನಕಲಿ ಸೀಲುಗಳು ಮತ್ತು ದಾಖಲೆಗಳಿದ್ದವು. ಅವುಗಳನ್ನು ವಶಪಡಿಸಿಕೊಂಡ ನಂತರ ಆತನ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಿದ್ದೇವೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ರಾಣಾನನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಜುನ್ಮೋನಿ ರಾಭಾ ಅವರು ಈ ಹಿಂದೆ ಕಳೆದ ಜನವರಿಯಲ್ಲಿ ಮಜುಲಿಯಲ್ಲಿದ್ದಾಗ, ಬಿಹ್ಪುರಿಯ ಶಾಸಕ ಅಮಿಯಾ ಕುಮಾರ್ ಭುಯಾನ್ ಅವರೊಂದಿಗಿನ ದೂರವಾಣಿ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು ಮತ್ತು ವಿವಾದಕ್ಕೆ ಕಾರಣವಾಗಿತ್ತು.
ಪೊಲೀಸರು ನಿಯಮ ಉಲ್ಲಂಘಿಸಿದ ದೋಣಿಯನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ತಪ್ಪಿಸಿಕೊಂಡ ಬುಡಕಟ್ಟು ಜನಾಂಗದವರನ್ನು ಬಂಧಿಸದಂತೆ ಅಮಿಯಾ ಕುಮಾರ್ ಭುಯಾನ್ ಮಹಿಳಾ ಪೊಲೀಸ್ ಅಧಿಕಾರಿಗೆ ಕೇಳಿಕೊಂಡಿದ್ದರು. ಆದರೆ ಇದ್ದಕ್ಕೆ ಒಪ್ಪದ ಜುನ್ಮೋನಿ ರಾಭಾ, ತಾವು ಒಬ್ಬ ಚುನಾಯಿತ ಪ್ರತಿನಿಧಿಯಾಗಿ “ಕಾನೂನು ಮತ್ತು ನಿಬಂಧನೆಗಳನ್ನು ಮುರಿಯುವಂತೆ” ಪೊಲೀಸರಿಗೆ ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿದ್ದರು.