ಹೈದರಾಬಾದ್: ಗಾಂಧಿ ಜಯಂತಿ ಮಿನ್ನ ದಿನ 1 ಲಕ್ಷ 26 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸುವ ಮೂಲಕ ಆಂಧ್ರಪ್ರದೇಶ ಸರ್ಕಾರ ವಿಶ್ವ ದಾಖಲೆ ನಿರ್ಮಿಸಿದೆ. ಸಿಎಂ ಜಗನ್ ಮೋಹನ್ ರೆಡ್ಡಿಯವರೇ, ಹೊಸದಾಗಿ ನೇಮಕಗೊಂಡವರಿಗೆ ಆದೇಶ ಪತ್ರ ವಿತರಿಸಿ ಸೂಪರ್ ಸಿಎಂ ಎಂಬ ಸ್ಥಾನ ಪಡೆದಿದ್ದಾರೆ.
ವಿಜಯವಾಡದಲ್ಲಿ ನೌಕರರಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸುವಾಗ ಮಾತನಾಡಿದ ಸಿಎಂ ಜಗನ್ ಮೋಹನ್ ರೆಡ್ಡಿ, ವೈಎಸ್ಆರ್ ಕಾಂಗ್ರೆಸ್ ಸರ್ಕಾರ ನಿರುದ್ಯೋಗ ಹೋಗಲಾಡಿಸುವ ಪಣತೊಟ್ಟಿದೆ. ಹಾಗಾಗಿ ಇನ್ಮುಂದೆ ಯುವಕರಿಗಾಗಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದ್ದೇವೆ. ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ನಡೆಯಲಿವೆ ಎಂದರು.
ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು, ಸತತ ಹೊಸ ಯೋಜನೆಗಳನ್ನು ಘೋಷಿಸುತ್ತಲೇ ಇದ್ದಾರೆ. ವೃದ್ಧಾಪ್ಯ ವೇತನ ಹೆಚ್ಚಳ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಕಷ್ಟಪಟ್ಟು ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಗಿಫ್ಟ್ ನೀಡಿದ್ದರು. ಅಂತೆಯೇ ನಿರುದ್ಯೋಗಿಗಳಿಗೆ 1 ಲಕ್ಷ 26 ಸಾವಿರ ಸರ್ಕಾರಿ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಅಂತೂ ಆಂದ್ರ ಈ ರೀತಿ ಸಾಧನೆ ಮಾಡಿದೆ. ಕರ್ನಾಟಕ ಸರಕಾರ ಮಾತ್ರ ನಿದ್ದೆಗೆ ಜಾರಿದೆ ಅಂತೆ.