ಯುವಕವಿ ‘ಲಕ್ಷ್ಮಿ ಕಿಶೋರ್ ಅರಸ್’ ಗೆ “ರಾಜ್ಯ ಯುವ ಪ್ರಶಸ್ತಿ”

ಯುವಕವಿ ‘ಲಕ್ಷ್ಮಿ ಕಿಶೋರ್ ಅರಸ್’ ಗೆ”ರಾಜ್ಯ ಯುವ ಪ್ರಶಸ್ತಿ” ಬೆಂಗಳೂರು: ಯುವಕವಿ,ಲೇಖಕ ‘ ಲಕ್ಷ್ಮಿ ಕಿಶೋರ್ ಅರಸ್’ಗೆ ಕರ್ನಾಟಕ ರಾಜ್ಯ ಯುವಸಂಘಗಳ ಒಕ್ಕೂಟದ ಪ್ರತಿಷ್ಠಿತ” ರಾಜ್ಯ ಯುವ ಪ್ರಶಸ್ತಿ” ಲಭಿಸಿದೆ. ಯುವ ಲೇಖಕ, ಲಕ್ಷ್ಮಿ ಕಿಶೋರ್ ಅರಸ್ ಕೂಡ್ಲೂರು ರಾಜ್ಯ ಯುವ ಸಂಘಗಳ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಭಾಗಿತ್ವದಲ್ಲಿ ಪ್ರತಿ ವರ್ಷ ಕೂಡ ಮಾಡಲ್ಪಡುವ “ರಾಜ್ಯ ಯುವ ಪ್ರಶಸ್ತಿಗೆ” ಭಾಜನರಾಗಿದ್ದಾರೆ.   ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಯುವ ಸಾಧಕರನ್ನು ಗುರುತಿಸಿ ಅವರಿಗೆ ಅತಿ […]

Continue Reading

Ph.D ಪಡೆದ ಪತ್ರಕರ್ತ ರಮೇಶ್ ನಿಂಬೆಮರದಹಳ್ಳಿ

ವಿಜಯನಗರ(ಹಂಪಿ): ಏ.09: ಹಂಪಿ ಕನ್ನಡ ವಿಶ್ವವಿದ್ಯಾಲಯವು ವಿಜಯ ಕರ್ನಾಟಕದ ಹಿರಿಯ ವರದಿಗಾರ ಈ.ರಮೇಶ್ ಅವರಿಗೆ “ವಸಾಹತೋತ್ತರ ಸಂದರ್ಭದಲ್ಲಿ ಕನ್ನಡ ಬೌದ್ಧಿಕ ಸಂಕಥನಗಳ ಪರಿಶೀಲನೆ” ಎಂಬ ವಿಷಯದ ಮೇಲೆ ನಡೆಸಿದ ಸಂಶೋಧನೆಗೆ ಶುಕ್ರವಾರ, ಪಿಎಚ್. ಡಿ (Doctor of Philosophy) ಪದವಿ ನೀಡಿ ಗೌರವಿಸಿತು. ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರಾದ ವಜುಭಾಯಿ ವಾಲಾ ಅವರ ಅನುಪಸ್ಥಿತಿಯಲ್ಲಿ ಹಂಪಿ ವಿಶ್ವವಿದ್ಯಾಲಯದ ಕುಲಪತಿ ಸ.ಚಿ. ರಮೇಶ ಅವರು Ph.D ಪ್ರಮಾಣಪತ್ರ ಪ್ರದಾನ ಮಾಡಿದರು. ಚಿಂತಕರೂ, ಲೇಖಕರೂ ಆದ ಡಾ.ಡಿ.ಮಂಗಳಾ ಪ್ರಿಯದರ್ಶಿನಿ ಅವರ ಮಾರ್ಗದರ್ಶನದಲ್ಲಿ […]

Continue Reading

ಸುದ್ದಿವಾಣಿ ವಾರದ ಕವಿತೆ : ನಾನು ಗಂಡಲ್ಲ.. ನಾನು ಹೆಣ್ಣಲ್ಲ…: ಡಾ.ವಡ್ಡಗೆರೆ ನಾಗರಾಜಯ್ಯ

ಮಾಲತೇಶ್ ಅರಸ್ ಹರ್ತಿಕೋಟೆ ಸಾರಥ್ಯದಲ್ಲಿ ನಾನು ಗಂಡಲ್ಲ ನಾನು ಹೆಣ್ಣಲ್ಲ ಗಂಡುಹೆಣ್ಣೆಂಬ ಭೇದ ನನಗಿಲ್ಲ! ಗಂಡು ಸಿಕ್ಕಿದಾಗ ಹೆಣ್ಣಾಗುತ್ತೇನೆ, ಹೆಣ್ಣು ಸಿಕ್ಕಿದಾಗ ಗಂಡಾಗುತ್ತೇನೆ ಪಾತ್ರ ಬದಲಿಸುತ್ತೇನೆ! ಕತ್ತಲಲ್ಲಿ ಬೆತ್ತಲಾಗುತ್ತೇನೆ ಬೆತ್ತಲಲ್ಲಿ ಬಯಲಾಗುತ್ತೇನೆ! ಬಯಲ ಬೆತ್ತಲೆಯಲ್ಲಿ ಈ ನನ್ನ ದೇಹವೂ ನನ್ನದಲ್ಲ ಪಂಚಭೂತಗಳ ಜೀವಭಾವ! ಸಮುದ್ರದಲ್ಲಿ ತೆರೆಯಾದ ಮೇಲೆ ತೆರೆಯೊಂದು ಬಂದು ದಡಕೆ ಅಪ್ಪಳಿಸುವಂತೆ ಗಂಡೆಂಬ ಅಲೆ ಹೆಣ್ಣೆಂಬ‌ ಅಲೆ ಅಂಕೆಗಳಿಗೆ ದಕ್ಕದ ಅಲೆಗಳು ಅಪ್ಪಳಿಸಿದ್ದವು ನನ್ನನ್ನು, ಅಲೆಗಳೆಂದರೆ ಬರೀ ನೀರು! ನೀರು ಮೈಸುತ್ತಿ ನಾನು ನೀರ್ಗಲ್ಲಾದೆ ಹಿಮಪರ್ವತವಾದೆ […]

Continue Reading

ಸುದ್ದಿವಾಣಿ ವಾರದ ಕವಿತೆ..:! “ತಮಟೆ ಬೇಕಾಗಿದೆ”

  ನನ್ನ ತಮಟೆ ಹರಿದು ಹೋಗಿದೆ ಎದೆಯಗಲ ಚರ್ಮ ಬೇಕಾಗಿದೆ ಸತ್ತ ದನದ್ದು…. ತಮಟೆ ಸದ್ದಿನೊಳಗೆ ದುಃಖ ದೂರುಗಳ ಜಗಕೆ ಆಡಿ ಹಗುರಗೊಳ್ಳಬೇಕಿದೆ ಜುಂಗು ಕಿತ್ತು ರಂಪಿಗೆ ಆಡಿಸಿ ಅಡಗಲ್ಲಿನಲ್ಲಿ ತಟ್ಟಿ ಹದ ಮಾಡಿ ಹದಿನಾರು ಎಳೆ ಬಿಗಿದು ಎಳೆ ಬಿಸಿಲಿಗಿಡಿದು ಅಲುಗು ಅಲುಗಿಗೂ…ಕಂಟ ಕಾವು ರಣಬಾಜಿ,ಹುಲಿ ಹೊಡೆತ ಎರಡೇಟು…ಗಸ್ತಿ ನೋವು ನೀಗಿಸಿಕೊಳ್ಳಬೇಕಿದೆ ಶತಮಾನಗಳದ್ದು ಈಗೀಗ ವರ್ತಮಾನದ್ದೂ…. ಸತ್ತದನವೊಂದಿದ್ದರೆ ಕೊಟ್ಟು ಬಿಡಿ ನನ್ನ ತಮಟೆ ಹರಿದು ಹೋಗಿದೆ.// ಕಾಡುಕತ್ತಲೆ ಬಿಳಿಯ ತೊಗಲ ದೊರೆ ದೇಶ ತೊಲಗಿದ ಕರಿಯ […]

Continue Reading

ಸೇಡಂನಲ್ಲಿ ನ.೨೬ಕ್ಕೆ `ಅಮ್ಮ ಪ್ರಶಸ್ತಿ’ ಪ್ರದಾನ

www.suddivaani.com ಸುದ್ದಿವಾಣಿ ಕಲಬುರಗಿ, ನ.12: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ಭಾರತಿ ಹೆಗಡೆ, ಸುರೇಶ ನಾಗಲಮಡಿಕೆ, ಕೆ.ಎ.ದಯಾನಂದ, ಕಿರಣ್ ಭಟ್, ಶ್ರೀನಿವಾಸ ಸಿರನೂರಕರ್, ನದೀಂ ಸನದಿ ಮತ್ತು ಸತ್ಯಮಂಗಲ ಮಹಾದೇವ ಅವರ ಕೃತಿಗಳು ಆಯ್ಕೆಯಾಗಿವೆ ಎಂದು `ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ. ಭಾರತಿ ಹೆಗಡೆ ಅವರ `ಸೀತಾಳೆದಂಡೆಯ ಕಥೆಗಳು’ (ಕಥಾ ಸಂಕಲನ), ಸುರೇಶ ನಾಗಲಮಡಿಕೆ ಅವರ `ಹಾಡು ಕಲಿಸಿದ […]

Continue Reading

“ನೈಂಟಿ ಹೊಡಿ ಮನೀಗ್ ನಡಿ” ಅದ್ದೂರಿತನದ ಸಿನಿಮಾ

www.suddivaani.com, ಸಿನಿಮಾ ಸುದ್ದಿವಾಣಿ ಬೆಂಗಳೂರು: ಹಾಸ್ಯ ನಟ ವೈಜನಾಥ್ ಬಿರಾದಾರ ನಟನೆಯ ಐನೂರನೇ ಚಿತ್ರ “ನೈಂಟಿ ಹೊಡಿ ಮನೀಗ್ ನಡಿ” ಇತ್ತೀಚೆಗೆ ಮೂಹೂರ್ತ ಕಂಡು ಸುದ್ದಿ ಮನೆಯತ್ತ ಹೊರಳಿಕೊಂಡಿತ್ತು. ಇದೀಗ ಬೆಂಗಳೂರಿನ ಬಿಡದಿ ಸಮೀಪದ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್ ಹಾಕಿಸಿ ಚಿತ್ರೀಕರಿಸಲಾದ “ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರ್ನಾ ಬಾರಸ್ತಿ..” ಎಂಬ ಪಕ್ಕಾ ನಾಟೀ ಸ್ಟೈಲ್ ಹಾಡಿಗೆ ಚಿತ್ರದ ಜೊತೆಗಾತಿ ನಟಿ ನೀತಾ ಜೊತೆ ಎಪ್ಪತ್ತರ ವಯಸ್ಸಿನ ಬಿರಾದಾರ್ ಇಪ್ಪತ್ತರ ಹುಡುಗರೂ ನಾಚುವಂತೆ ಸ್ಟೆಪ್ […]

Continue Reading

ಯಾದವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷೆಯಾಗಿ ಶಾಸಕಿ ಕೆ.‌ ಪೂರ್ಣಿಮಾ ಶ್ರೀನಿವಾಸ್ ನೇಮಕ

ಚಿತ್ರದುರ್ಗ: ಅಖಿಲ ಭಾರತ ಯಾದವ ಮಹಾಸಭಾ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆಯಾಗಿ ನೂತನವಾಗಿ  ಹಿರಿಯೂರು ಶಾಸಕರಾದ ಕೆ.‌ ಪೂರ್ಣಿಮಾ ಶ್ರೀನಿವಾಸ್ ನೇಮಕವಾಗಿದ್ದಾರೆ. ಇದೊಂದು ಕರ್ನಾಟಕದ ಪಾಲಿಗೆ ಅಪೂರ್ವ ಅವಕಾಶ.  ಇವರ ಪತಿ ಶ್ರೀನಿವಾಸ್ ಪ್ರಸ್ತುತ ಕರ್ನಾಟಕ ರಾಜ್ಯ ಗೊಲ್ಲ ಯಾದವ ಸಂಘದ ರಾಜ್ಯಾಧ್ಯಕ್ಷರಾಗಿದ್ದಾರೆ.   ಮಾಲತೇಶ್ ಅರಸ್, ನ್ಯೂಸ್ ಎಡಿಟರ್. ಸುದ್ದಿವಾಣಿ  

Continue Reading

ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ಕೆ.ಜೆ.ಹಳ್ಳಿ ಸುರೇಶ್ ನೇಮಕ

ಸುದ್ದಿವಾಣಿ. www.suddivaani.com ಚಿತ್ರದುರ್ಗ: ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ “ರಾಜ್ಯ ಯುವ ಘಟಕ”ದ ಅಧ್ಯಕ್ಷರನ್ನಾಗಿ ಬುಡಕಟ್ಟು ಸಂಸ್ಕೃತಿ ಚಿಂತಕರಾದ ಹೊಳಲ್ಕೆರೆ ತಾಲೂಕಿನ  “ಕಣಿವೆಜೋಗಿಹಳ್ಳಿ ಸುರೇಶ್” (ಕೆ.ಜೆ.ಹಳ್ಳಿ ಸುರೇಶ್) ಅವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರೂ, ವಕೀಲರಾದ ಶಿವುಯಾದವ್ ತಿಳಿಸಿದ್ದಾರೆ. ಚಿತ್ರದುರ್ಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಮಾಧ್ಯಮ ನಿರೂಪಕರು, ವಿಶ್ಲೇಷಣಾತ್ಮಕ ವರದಿಗಳಿಂದ ಚಿರಪರಿಚಿತರಾದ ಸಾಮಾಜಿಕ ಹೋರಾಟಗಾರ ಕಣಿವೆಜೋಗಿಹಳ್ಳಿ ಸುರೇಶ್ ಅವರು ಕಾಡುಗೊಲ್ಲ ಸಮುದಾಯಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ  ಕಾಳಜಿಯನ್ನು […]

Continue Reading

ಕೊರೋನಾ ನಡುವೆ ಶಾಲೆಯ ಅಂದಕ್ಕೆ ಮುಂದಾದ ಶಿಕ್ಷಕರ ತಂಡ.. ವಿಶೇಷ ವರದಿ

http://www.suddivaani.com ಇದು ಕರ್ನಾಟಕ ಪಬ್ಲಿಕ್ ಸ್ಕೂಲ್ ,ಸರ್ಕಾರಿ ಪ್ರೌಢಶಾಲೆ ಸಂತೆಬೆನ್ನೂರು, ಚನ್ನಗಿರಿ ತಾ,ದಾವಣಗೆರೆ ಜಿಲ್ಲೆಯ ಈ ಶಾಲೆ ವಿಶಿಷ್ಟ ಕಾರಣದಿಂದ ಗಮನ ಸೆಳೆಯುತ್ತಿದೆ. ಇದು 1948 ರಲ್ಲಿ ಶ್ರೀ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಆರಂಭಗೊಂಡ ಶಾಲೆ. ಸುತ್ತ ಎಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಇದೇ ಶಿಕ್ಷಣ ಕೇಂದ್ರವಾಗಿತ್ತು. ನಂತರ ದ ದಿನಗಳಲ್ಲಿ ಸರ್ಕಾರದ ಅಧೀನಕ್ಕೆ ಒಳಪಟ್ಟು ಸ್ವಾಮೀಜಿಯವರ ಹೆಸರ ಜೊತೆಯಲ್ಲಿ ಸರ್ಕಾರಿ ಪ್ರೌಢಶಾಲೆ ಎಂದು ಬದಲಾಗಿ ವಿದ್ಯಾದಾನಕ್ಕೆ ಮುಂದಾಯಿತು. 72 ವರುಷ ದಾಟಿ ಸಾಗುತ್ತಿರುವ […]

Continue Reading

ವಾರದ ಕವಿತೆ….ನೀನು ಭಗವಂತನೆ ಇರಬಹುದು…..!

ನೀನು ಸಾಮ್ರಾಟನೆ ಇರಬಹುದು ನಾನು ಕಾಲಾಳು ಅಲ್ಲ ಸಾಮ್ರಾಜ್ಯಗಳು ಅಳಿದು ಸಾಮ್ರಾಟರು – ಸಾಮಂತರು ಮಣ್ಣಾದದ್ದನ್ನು ಕಂಡಿದ್ದೇನೆ. ನೀನು ಪಾಳೆಗಾರನೇ ಇರಬಹುದು ನಾನು ಗುಲಾಮನಲ್ಲ ಪಾಳೆಪಟ್ಟಗಳು ಕಾಲದ ಗತಿಯೊಳಗೆ ನುಚ್ಚು ನೂರಾಗಿ ಪಾತಾಳ ಸೇರಿದ್ದನ್ನು ಕಂಡಿದ್ದೇನೆ ನೀನು ಭಗವಂತನೆ ಇರಬಹುದು ನಾನು ಭಕ್ತನಲ್ಲ ದೇವರೆಂಬ ದೇವರೇ ಬಿರುಗಾಳಿಗೆ ಭೋರ್ಗರೆದ ಮಳೆಗೆ ನಾಮಾವಶೇಷಗೊಂಡಿದ್ದನ್ನು ಕಂಡಿದ್ದೇನೆ. ನೀನು‌ ಧನಿಕನೇ ಇರಬಹುದು ನಾನು ದೀನನಲ್ಲ ಸಂಪತ್ತು – ಐಶ್ವರ್ಯಗಳು ಅನ್ನ- ನೀರುಗಳನ್ನು ಸೃಷ್ಟಿಸಲಾರವು ಎಂಬ ಪ್ರಕೃತಿಯ ವೈಚಿತ್ರ್ಯವನ್ನು ಕಂಡಿದ್ದೇನೆ. ನೀನು ಧರ್ಮವೇ […]

Continue Reading