ವಾರದ ಕವಿತೆ…ಕಣ್ಣೀರು.

ಕಣ್ಣೀರು ————– 1.ನೋವಮೀಟಿ ಬಂದ ಕಣ್ಣೀರಲಿ ಬೆಳಕು ಹಾಯಿತು. 2.ಪ್ರಪಂಚದ ಕ್ರೂರತೆ ತಿಳಿಯದೆ ಕಣ್ಣೀರು ಹೊರಬಂದಿತು. 3.ಜಗತ್ತನ್ನೇ ನೋಡುವ ಕಣ್ಣು ತನ್ನೊಳಗಿನ ಕಣ್ಣೀರನ್ನು ಕಾಣಲಿಲ್ಲ. 4.ಕಣ್ಣ ತುದಿಯಲ್ಲಿನ ಕಣ್ಣೀರು ತನ್ನ ಬಂಧುಗಳಿಗಾಗಿ ಹುಡುಕುತಿತ್ತು. 5.ಮುಖದ ನೆರಿಗೆಗಳು ಸುರಿದ ಕಣ್ಣೀರಹನಿಗಳ ಲೆಕ್ಕವಿಡುತಿದ್ದವು 6.ಅವಳ ಕಣ್ಣೀರೆ ಸಾಗರವಾಗಿದೆ. 7.ನೀರಿನ ಸಹವಾಸದಿಂದ ಕಣ್ಣೀರು ಅಸ್ಥಿತ್ವ ಕಳೆದುಕೊಂಡಿತು. 8.ಕಣ್ಣೀರು ನಿಸ್ವಾರ್ಥಿ ಮಗುವಿನ ಹಾಗೂ ವೃದ್ಧ ನ ಕಣ್ಣೀರಿಗೆ ಬೇಧವಿಲ್ಲ. 9.ಆನಂದ ಬಾಷ್ಪ ದುಃಖದಕಣ್ಣೀರ ಬಳಿ ಬರಲಿಚ್ಚಿಸಲಿಲ್ಲ 10.ಕತ್ತಲೆಯಲ್ಲಿ ಕಣ್ಣೀರ ಮಾತ ಯಾರೂ ಕೇಳಲಿಲ್ಲ. […]

Continue Reading

ಸುದ್ದಿವಾಣಿ ವಾರದ ಕವಿತೆ: ಅಪ್ಪ ಈಗೀಗ ನೆನಪಾಗುತ್ತಾರೆ..!

  ಅಪ್ಪ ಈಗೀಗ ನೆನಪಾಗುತ್ತಾರೆ..! ಟ್ರಾಫಿಕ್ ಸಿಗ್ನಲ್ ನಲ್ಲಿ ಸೆಕೆಂಡ್ ಗಳನ್ನು ಎಣಿಸುವಾಗ ಪಕ್ಕದಲ್ಲಿ ಬಸವಳಿದ ಹಿರಿಯ ಜೀವ ಕಂಡಾಗ ಅಪ್ಪ ಈಗೀಗ ನೆನಪಾಗುತ್ತಾರೆ.. ತಿಂಗಳ ಕೊನೆಗೆ ಪೇಟಿಎಂ, ಫೋನ್ ಪೆ, ಎಟಿಎಮ್ ನಲ್ಲಿ ಬ್ಯಾಲೆನ್ಸ್ ಕಡಿಮೆ ಆದಾಗ ಅದು ಹೇಗೆ ಪಾಸ್ ಬುಕ್ ನಲ್ಲೇ ಅರ್ಧ ಜೀವನ ಕಳೆದು ಬಿಟ್ಟೆ ಅನಿಸಿದಾಗ ಅಪ್ಪ ಈಗೀಗ ನೆನಪಾಗುತ್ತಾರೆ… ಹೆಂಡತಿ, ಏನ್ರೀ ನೀವು ಒಂದ್ ಮನೆ ಮಾಡಲು ಆಗಲಿಲ್ಲ ಅಂದಾಗ, ಸಾಲ – ಸೋಲ ಗೊತ್ತಾಗದೆ ಅರ್ಧ ಜೀವನ […]

Continue Reading

ಕೆಂಪು ದೀಪದಡಿಯಲಿ ಕರಿ ನೆರಳ ಕವಿತೆ : ಆದಿಪ್ರಿಯ

  ಸೆರಗಿಗೆ ಸೆರೆಯಾದ ಇರುಳಿಗೆ ಆಸರೆಯಾದೆ ಒಡಲ ತಾಪದ ತೃಷೆಗೆ ಬಂದಿರುವೆ ಊರ ಬಾವಿಗೆ ಎದೆಯ ಮೇಲರಳಿದ ಹೂಗಳ ಚುಂಬಿಸಲು ತೆರೆಯಬೇಕು ಬೆನ್ನ ಹಿಂದೆ ಬಂಧಿಯಾದ ಕದಗಳು -೨- ಸೋತರೆ ಸಾಲದು ಸನಿಹಕೆ ಬಂದು ಬೆಳಗಾಗುವ ತನಕ ಆಗಬೇಕು ಬಂಧು ಮರೆಯಬೇಕು ಸೊಂಟದಿಳಿಜಾರು ಒಂದಿರುಳ ಸಿಹಿಯಾತನೆಯ ಸೊಡರು ದಾರಿಹೋಕರ ಗಾಬರಿ ಪರಿಚಯ ಮೊದಮೊದಲು ಬೆವರ ಹನಿಗೆ ಬೆಲೆ ಕಟ್ಟಲು ಸಾವಿರಾರು ಹಗಲಿರುಳೆನ್ನದೆ ದುಡಿದು ಅಡ್ಡದಲಿ ಹೆಚ್ಚಿತು ಗರಿಮೆ ಆದರೂ ಮಲಗುವ ಸೂರ್ಯನಿಂದಲೇ ಕೀಳರಿಮೆ! -೩- ಗುಲಾಬಿ ಕೊಟ್ಟು […]

Continue Reading

ಸುದ್ದಿವಾಣಿ ವಾರದ ಕವಿತೆ: “ಕೆಡುನುಡಿಯ ಕೂಗು”

ಕೊಲೆಗಡುಕರ ತಲೆಹಿಡುಕರ ಕೆಡುಗುಡುಕರ ಗಳಘಂಟೆಗೆ ಕಿವಿ ಕೊಟ್ಟರು, ನೊಣದಂತೆ ಗುಡಿಯತ್ತ ಗುಳೆ ಹೊಂಟರು, ರಣಧೀರರು ನಮ್ ಕುಲಬಾಂಧವರ! ಕುಲಹೀನರ ಮುಠ್ಠಾಳರ ಮನೆಮುರುಕರ ಜೋತಿಷ್ಯಕೆ ಕೈ ಕೊಟ್ಟರು, ಮತಿಕಲಹವ ಬಣದೊಟ್ಟಿಗೆ ಬಿಟ್ಹೊಂಟರು, ಹುಳಿಸೊಪ್ಪಿನ ಕುಲಗೇಡಿ ರಣಹೇಡಿಗಳು! ಗುಡಿತಿರುಕರ ಅಂಜುಬುರುಕರ ಹೊಟ್ಟೆಬಾಕರ ಜೋತಿಷ್ಯಕೆ ಕೈ ಕೊಟ್ಟರು, ಹಿಟ್ಟೊಟ್ಟೆಗು ಮಡಿ ಮೈಲಿಗೆ ಗಂಟಿಟ್ಟರು, ಮತಿಗೆಟ್ಟ ಮನುವಾದಿ ದೊಡ್ಮಾದಿಗರು! ಅಜ್ಞಾನವು ಗೂಡಿಟ್ಟಿದೆ, ಅಂಧಕಾರವು ತತ್ತಿ ಇಕ್ಕಿದೆ, ಮೌಢ್ಯದ ಮರಿ ಹುಟ್ಟಿದೆ, ವಿಜ್ಞಾನಕ್ಕೂ ತಲೆಕೆಟ್ಟದೆ! ಮನುಕುಲದ ಮೇಲಾಡಿ ಬದುಕುದ್ದಕು ಬಡಿದಾಡಿ ಕೂಗಾಡಿ ಕೇಡಿನ ನುಡಿ […]

Continue Reading

ವಾರದ ಕವಿತೆ: ಸೂಜಿದಾರ… – ನಾಗರಾಜ್ ಬೆಳಗಟ್ಟ

ಸೂಜಿದಾರ ಸಸ್ಯಾಹಾರ ಸಂಕುಲದಿ ಮಾಂಸಾಹಾರ ಲೋಕದಿ ಹರಿದಿದೆ ನಾಲಿಗೆ… ಸಾಧ್ಯವಾದರೆ ಹೊಲಿದು ಬಿಡು ಮಾತು ಸಂಸ್ಕಾರ ಪಡೆದುಕೊಳ್ಳಲಿ. ಧರ್ಮ ಸ್ಥಾಪಿತ ಗ್ರಂಥಗಳಲ್ಲಿ ಜಾತಿ ಬಿಂಬಿತ ಪಂಥಗಳಲ್ಲಿ ಮನಸ್ಸು ಹೊಡೆದಿದೆ… ಸಾಧ್ಯವಾದರೆ ಹೊಲಿದು ಬಿಡು ಚಿಂತನೆಗಳ ಸಂಕ್ರಮಣವಾಗಲಿ ಕುಲಗಳ ನೆಲೆಯಲ್ಲಿ ಕುಲತಿಲಕರ ಹೆಸರಲ್ಲಿ ಹೃದಯ ನಾಡಿಗಳು ಬಿರುಕಾಗಿವೆ ಸಾಧ್ಯವಾದರೆ ಹೊಲಿದು ಬಿಡು ಹೃದಯಬಡಿತ ಲಯವ ಕಂಡುಕೊಳ್ಳಲಿ ಹರಿದ ನಾಲಿಗೆಯ, ಹೊಡೆದ ಮನಸ್ಸಿನ್ನ ನಾನೇಗೆ ಹೊಲಿಯಲಿ ಈಗ ಹೊಲಿದರೂ ಗುರುತುಗಳೇ ಎದ್ದು ಕಾಣಿಸಿ ನನ್ನನೇ ನೋಡಿ ನಗಬಹುದು. ಹೊಲಿದಿದ್ದು ಬಿಚ್ಚಿಕೊಳ್ಳದಂತೆ […]

Continue Reading

ಅಂಬೇಡ್ಕರರ ತೋರು ಬೆರಳು ; ಕೆ.ಬಿ.ಸಿದ್ದಯ್ಯ…ವಾರದ ಕವಿತೆ

ಮಾಲತೇಶ್ ಅರಸ್ ಸಾರಥ್ಯದಲ್ಲಿ.   ಅಕಾಲದ, ಆ ಕಾಲದ ಬರುವ ಕಾಲದ, ಇರುವ ಕಾಲದ ಕಾಲ ಕಾಲದ ಕೈದಿ, ಕರುಣಾಳುಗಳ ಬೆವರು, ನಿಟ್ಟುಸಿರಿನ ಘನ ನಿಲವು ಇಕೋ… ಈ ಸರ್ವಾಂಗ ಸುಂದರ ವಿಧಾನಸೌಧ ಇಕೋ… ಇಲ್ಲೆ ಕಣ್ಣೆದುರಿಗೆ ನಿಂತಿದೆ ಭಾರತದ ಒಲುಮೆ ಅಂಬೇಡ್ಕರ್ ಪ್ರತಿಮೆ. ಕಣ್ಣಿದ್ದವರು ಕಾಣಿರೋ ಒಳಗಣ್ಣಿದ್ದವರು ಅವನ ಅಂತರಂಗವ ಮುಟ್ಟಿ ಅರಿಯಿರೋ. ನೋಡುಗರ ನೋಟಕ್ಕೆ ದಕ್ಕಿದಂತೆ ಕಂಡೂ ಕಾಣದವರ ಕಣ್ಣು ಕುಕ್ಕುವಂತೆ ಜಾತಿ ಕುರುಡರ ಕಣ್ಣು ತಟ್ಟನೆ ತೆರೆಸುವಂತೆ ಸ್ವಜಾತಿ ಜನರ ಪ್ರಜ್ಞೆ ಸ್ಫೋಟಿಸುವಂತೆ […]

Continue Reading

ಸುದ್ದಿವಾಣಿ ವಾರದ ಕವಿತೆ : ನಾನು ಗಂಡಲ್ಲ.. ನಾನು ಹೆಣ್ಣಲ್ಲ…: ಡಾ.ವಡ್ಡಗೆರೆ ನಾಗರಾಜಯ್ಯ

ಮಾಲತೇಶ್ ಅರಸ್ ಹರ್ತಿಕೋಟೆ ಸಾರಥ್ಯದಲ್ಲಿ ನಾನು ಗಂಡಲ್ಲ ನಾನು ಹೆಣ್ಣಲ್ಲ ಗಂಡುಹೆಣ್ಣೆಂಬ ಭೇದ ನನಗಿಲ್ಲ! ಗಂಡು ಸಿಕ್ಕಿದಾಗ ಹೆಣ್ಣಾಗುತ್ತೇನೆ, ಹೆಣ್ಣು ಸಿಕ್ಕಿದಾಗ ಗಂಡಾಗುತ್ತೇನೆ ಪಾತ್ರ ಬದಲಿಸುತ್ತೇನೆ! ಕತ್ತಲಲ್ಲಿ ಬೆತ್ತಲಾಗುತ್ತೇನೆ ಬೆತ್ತಲಲ್ಲಿ ಬಯಲಾಗುತ್ತೇನೆ! ಬಯಲ ಬೆತ್ತಲೆಯಲ್ಲಿ ಈ ನನ್ನ ದೇಹವೂ ನನ್ನದಲ್ಲ ಪಂಚಭೂತಗಳ ಜೀವಭಾವ! ಸಮುದ್ರದಲ್ಲಿ ತೆರೆಯಾದ ಮೇಲೆ ತೆರೆಯೊಂದು ಬಂದು ದಡಕೆ ಅಪ್ಪಳಿಸುವಂತೆ ಗಂಡೆಂಬ ಅಲೆ ಹೆಣ್ಣೆಂಬ‌ ಅಲೆ ಅಂಕೆಗಳಿಗೆ ದಕ್ಕದ ಅಲೆಗಳು ಅಪ್ಪಳಿಸಿದ್ದವು ನನ್ನನ್ನು, ಅಲೆಗಳೆಂದರೆ ಬರೀ ನೀರು! ನೀರು ಮೈಸುತ್ತಿ ನಾನು ನೀರ್ಗಲ್ಲಾದೆ ಹಿಮಪರ್ವತವಾದೆ […]

Continue Reading

ಸುದ್ದಿವಾಣಿ ವಾರದ ಕವಿತೆ..:! “ತಮಟೆ ಬೇಕಾಗಿದೆ”

  ನನ್ನ ತಮಟೆ ಹರಿದು ಹೋಗಿದೆ ಎದೆಯಗಲ ಚರ್ಮ ಬೇಕಾಗಿದೆ ಸತ್ತ ದನದ್ದು…. ತಮಟೆ ಸದ್ದಿನೊಳಗೆ ದುಃಖ ದೂರುಗಳ ಜಗಕೆ ಆಡಿ ಹಗುರಗೊಳ್ಳಬೇಕಿದೆ ಜುಂಗು ಕಿತ್ತು ರಂಪಿಗೆ ಆಡಿಸಿ ಅಡಗಲ್ಲಿನಲ್ಲಿ ತಟ್ಟಿ ಹದ ಮಾಡಿ ಹದಿನಾರು ಎಳೆ ಬಿಗಿದು ಎಳೆ ಬಿಸಿಲಿಗಿಡಿದು ಅಲುಗು ಅಲುಗಿಗೂ…ಕಂಟ ಕಾವು ರಣಬಾಜಿ,ಹುಲಿ ಹೊಡೆತ ಎರಡೇಟು…ಗಸ್ತಿ ನೋವು ನೀಗಿಸಿಕೊಳ್ಳಬೇಕಿದೆ ಶತಮಾನಗಳದ್ದು ಈಗೀಗ ವರ್ತಮಾನದ್ದೂ…. ಸತ್ತದನವೊಂದಿದ್ದರೆ ಕೊಟ್ಟು ಬಿಡಿ ನನ್ನ ತಮಟೆ ಹರಿದು ಹೋಗಿದೆ.// ಕಾಡುಕತ್ತಲೆ ಬಿಳಿಯ ತೊಗಲ ದೊರೆ ದೇಶ ತೊಲಗಿದ ಕರಿಯ […]

Continue Reading

ಸುದ್ದಿವಾಣಿ ವಾರದ ಕವಿತೆ….ಹೋರಾಟದ ನಾಯಕ ಜಯಣ್ಣ….!

ಹೋರಾಟದ ನಾಯಕ ಜಯಣ್ಣ ಹೋರಾಟದ ನಾಯಕ ಹೋರಾಟವೆ ಕಾಯಕ ಮಲಗಲಿಲ್ಲಮರಳಲಿಲ್ಲ ಕೂರಲಿಲ್ಲ ನಿಲ್ಲಲಿಲ್ಲ ಸುತ್ತಿ ಸುತ್ತಿಸುಸ್ಥಾಗಲಿಲ್ಲ ಎದೆಯಬೆಂಕಿಆರಲಿಲ್ಲ ಭರ್ಚಿ ಇಲ್ಲ ಬಾಂಬು ಇಲ್ಲ ಕತ್ತಿಇಲ್ಲ ಗುರಾಣಿ ಇಲ್ಲ ಕುಡುಗೋಲು ಮಚ್ಚು ಹಿಡಿಯಲಿಲ್ಲ ಶೋಷಕರಗುಂಡಿಗೆನಡುಗಿತಲ್ಲ ನಿನ್ನ ಕಣ್ಣಿನ ಕಾಂತಿಗೆ ನಿನ್ನ ದನಿಯ ಸದ್ದಿಗೆ ಸತ್ಯವೆ ತಾಯಿಎಂದೆ ಸತ್ಯ ವೇ ತಂದೆ ಎಂದೆ ಸತ್ಯ ವೆಬಂಧುಬಳಗವೆಂದೆ ಕೈಯಿ ಬಾಯಿ ಕಚ್ಚೆ ಶುದ್ಧ ಇಟ್ಟು ಕೊಂಡೆ ಬುದ್ಧ ನನ್ನನ್ನು ಬಿಡಲಿಲ್ಲ ಬಸವಣ್ಣ ನಮರೆಯಲಿಲ್ಲ ಅಂಬೇಡ್ಕರ್ ರ ಅರಿತೆಯಲ್ಲ ಹೋರಾಟ ಗಾರರ ಎದೆಯ […]

Continue Reading

ಸುದ್ದಿವಾಣಿ ವಾರದ ಕವಿತೆ: ವಿಶ್ವ ಮಾನವ..ರವಿನಾಗ್ ತಾಳ್ಯ.

ಯುಗಾದಿಯ ಬೇವುಬೆಲ್ಲ ನೀಡುತ್ತದೆ, ಕಷ್ಟ ಸುಖ ಸಮನಾಗಿ ನೋಡುವ ಶಕ್ತಿ, ರಂಜಾನಿನ ಪ್ರಾರ್ಥನೆ ನೀಡುತ್ತದೆ, ಬಡವ ಬಲ್ಲಿದ ಭಾವದಿಂದ ಮುಕ್ತಿ, ಶಿಲುಬೆಗೇರಿದ ಏಸು ತಿಳಿಸುತ್ತಾರೆ ತನ್ನವರಿಗಾಗಿ ನೋವ ನುಂಗುವ ಸಹನಾಶಕ್ತಿ, ಆಚರಣೆ ಭಿನ್ನವಾದರೂ ಉದ್ದೇಶ ದೈವಭಕ್ತಿ ಬೆಸೆದುಕೊಂಡಿದೆ ಯುಗಾದಿಯ ಬೇವುಬೆಲ್ಲದೊಡನೆ ರಂಜಾನ್ ದಾನ, ಚಂದಿರನ ನೋಡುತ ಆರಂಭ ನವಜೀವನ, ರಂಜಾನ್ ಖೀರು, ಯುಗಾದಿ ಬೇವುಬೆಲ್ಲ, ಕತ್ತರಿಸಿದರೂ ಸವಿಯ ನೀಡುವ ಕ್ರಿಸ್ಮಸ್ ಕೇಕಿನೊಡನೆ ಭಾವ ಸಮ್ಮಿಲನ, ಬದುಕಲಿ ನವ ಚೈತನ್ಯದ ಸಂಚಲನ ಶಿಶುನಾಳ ಶರೀಫರ ಪದಗಳ ಸತ್ವ, ಶಿರಿಡಿ […]

Continue Reading