ನವರಾತ್ರಿ: ಶರನ್ನವರಾತ್ರಿ ದಸರಾ ಸಂಭ್ರಮ

ನವರಾತ್ರಿ: ಶರನ್ನವರಾತ್ರಿ ದಸರಾ ಸಂಭ್ರಮ     ನವರಾತ್ರಿಯ ಮೊದಲ ದಿನ. ಈ ದಿನದ ಬಣ್ಣ ಬಿಳಿ 🤍.ಬಿಳಿ ಬಣ್ಣವು ಶುದ್ಧತೆ, ಒಳ್ಳೆಯತನದ ಪ್ರತೀಕ. ಭೂಮಿಯ ಮೇಲಿನ ಅತ್ಯುತ್ತಮ ಬಣ್ಣ ಈ ಬಿಳಿ ಬಣ್ಣ. ಎಲ್ಲಾ ಬಣ್ಣಗಳನ್ನು ಸಂಯೋಜಿಸುವ ಬಿಳಿ ಬಣ್ಣದಿಂದಾಗಿ, ಇದನ್ನು ಸಂಪೂರ್ಣತೆ ಮತ್ತು ಸಮಾನತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಿಳಿಯು ಬಹುತೇಕ ವೇಳೆ ಪರಿಪೂರ್ಣತೆ, ಶುಭ, ಪ್ರಾಮಾಣಿಕತೆ, ಸ್ವಚ್ಛತೆ, ಆರಂಭ, ನವೀನತೆಗೆ ಸಂಬಂಧಿಸಿದ ಬಣ್ಣ. ಬಿಳಿ ಅತ್ಯಂತ ತಿಳಿ ಬಣ್ಣವಾಗಿದೆ ಮತ್ತು ವರ್ಣರಹಿತವಾಗಿದೆ, ಏಕೆಂದರೆ ಅದು […]

Continue Reading

ಸಂಪಾದಕೀಯ: ಒನಕೆ ಓಬವ್ವ ಜಯಂತಿಯೂ.. ಚುನಾವಣಾ ನೀತಿ ಸಂಹಿತೆಯೂ…

ಚಿತ್ರದುರ್ಗ ಜಿಲ್ಲೆಯ ಜನರಿಗೆ ನವೆಂಬರ್ ೧೧ ನಿಜವಾದ ಹಬ್ಬದ ದಿನ. ದೀಪಾವಳಿ, ಕನ್ನಡ ರಾಜ್ಯೋತ್ಸವಕ್ಕಿಂತಲೂ ಅಕ್ಷರಶಃ ಪ್ರತಿ ಮನೆಮನೆಯಲ್ಲಿಯೂ ಮನಮನದಲ್ಲಿಯೂ ಸಂಭ್ರಮದ ಕ್ಷಣ.  ನವೆಂಬರ್ ೧೧ರಂದು ವೀರವನಿತೆ ಒನಕೆ ಓಬವ್ವ ಜಯಂತಿ. ಅದನ್ನು ಆಚರಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲು ಆದೇಶ ಹೊರಡಿಸಿದೆ. ಈ ಆದೇಶ ಹೊರಬಿದ್ದ ಹೊತ್ತಲ್ಲೇ ಇಡೀ ನಾಡಿನ ದುರ್ಗದ ಓಬವ್ವನ ಅಭಿಮಾನಿಗಳು ಸಂಭ್ರಮಿಸಿದರು. ಒನಕೆ ಓಬವ್ವ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಅಜರಾಮರ. ಕರ್ನಾಟಕದ ವೀರ ವನಿತೆಯರಾದ […]

Continue Reading

ಭಾರತೀಯ ರಾಜಮನೆತನದ ಸುಂದರ ಮಹಾರಾಣಿ ಯಾರು ಗೊತ್ತಾ…?

ಬರೋಡಾ: ಬರೋಡಾದ ರಾಣಿಯಾದ ರಾಧಿಕಾ ರಾಜೇ ಗಾಯಕವಾಡ್ ಅವರನ್ನು ಫೋರ್ಬ್ಸ್ ನಿಯತಕಾಲಿಕವು ಭಾರತೀಯ ರಾಜ್ಯ ರಾಜವಂಶದ ಅತ್ಯಂತ ಸುಂದರ ಮಹಿಳೆ ಎಂದು ಘೋಷಿಸಿದೆ. ಲಕ್ಷ್ಮಿ ವಿಲ್ಲಾ ಅರಮನೆ ಬರೋಡಾ 700 ಎಕರೆ ಮತ್ತು ಬಕಿಂಗ್ಹ್ಯಾಮ್ ಅರಮನೆಯ 4 ಪಟ್ಟು ದೊಡ್ಡದಾಗಿದೆ. ಇದು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವಾಗಿದೆ. ಎಲ್ಲವನ್ನೂ ತೊರೆದು ಇವರು ಜೈನ ಸನ್ಯಾಸ ಧೀಕ್ಷೆ ಪಡೆದರು. https://www.herzindagi.com/inspiration/facts-maharani-radhika-raje-baroda-gujarat-most-beautiful-woman-indian-kingdom-dynasty-lakshmi-vilas-palace-article-161719 ಮಾಲತೇಶ್ ಅರಸ್. ನ್ಯೂಸ್ ಎಡಿಟರ್. ಸುದ್ದಿವಾಣಿ. 9480472030

Continue Reading

ಕುರುಬರ ಎಸ್. ಟಿ. ಮೀಸಲಾತಿ ಹೋರಾಟ ಸಮಿತಿ ರಚನೆಯಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯ….?

www.suddivaani. com ಬೆಂಗಳೂರು: ಹಾಲುಮತ ಕುರುಬ ಜನಾಂಗದ ಅಭಿವೃದ್ಧಿ ಪ್ರಯತ್ನಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಅಥವಾ ಮಹಿಳಾ ಶಕ್ತಿ ಸಂವರ್ಧನೆಗೆ (Women Empowerment) ಮಹತ್ವದ ಸ್ಥಾನ ಕಲ್ಪಿಸಬೇಕು ಎಂಬುದು ಕೇವಲ ಪುಸ್ತಕಗಳಲ್ಲಿ ಹಾಗೂ ಭಾಷಣಗಳಲ್ಲಿ ಕಂಡು ಬರುತ್ತದೆ. ಕೇವಲ ಪುಸ್ತಕಗಳಲ್ಲಿ ಬರೆದರೆ ಅಥವಾ ಭಾಷಣ ಮಾಡಿದರೆ ಸಾಲದು. ಕೃತಿ ಕಾರ್ಯ ರೂಪಕ್ಕೆ ಬಂದಾಗ‌‌ ಮಾತ್ರ ಮಹಿಳೆಯರಿಗೆ ಸಮಾನ ಸ್ಥಾನಮಾನ ದೊರೆಯುವುದು ಮತ್ತು ಮಹಿಳಾ ಸಬಲೀಕರಣವಾಗುವುದು. ನಮ್ಮ ಆಶಯ ಕೂಡಾ ಇದೇ ಆಗಿದೆ ಎಂದು ಕರ್ನಾಟಕ ರಾಜ್ಯ ಅಹಿಲ್ಯಾಬಾಯಿ ಹೋಳ್ಕರ […]

Continue Reading

ಸುದ್ದಿವಾಣಿ ವಾರದ ಕವಿತೆ: ಸೂಳೆಗಿಂತ ಪವಿತ್ರಳಿಲ್ಲ-

ಹುಟ್ಟಿಸಿದ ತಂದೆ ಇಲ್ಲ ಇದ್ದರೂ ಅದಾವುದೋ ಕಾಯಿಲೆ ಸಾಲಾಗಿ ನಿಂತ ಬೆನ್ನಿಗೆ ಬಂದವರು ಅನಾಥಳಾದ ತಾಯಿ ಇವರಿಗೆಲ್ಲ ಒಂದೇ ಆಸರೆ ಅದೇ ತಾನೆ ಪ್ರಾಯಕ್ಕೆ ಬಂದ ಹೆಣ್ಣು! ಹೆತ್ತೊಡಲು ಬಿರಿಯುವಂತೆ ಕೂಗುತ್ತಿರುವ ಕಂದಮ್ಮ ಸುಡುವ ಜ್ವರ, ಕಾಯಿಸಿ ಕುಡಿಯಲು ಹಿಡಿ ಗಂಜಿಯಿಲ್ಲ! ಅದಾವನೋ ಕರೆದ ಹತ್ತು ರೂಪಾಯಿಗೆ ಹೋಗಿ ತೀರಿಸಿ ತಂದಳು ಗುಟುಕು ಹಾಲು, ಗಂಜಿ! ಪ್ರೀತಿಸಿಯೇನೋ ಮದುವೆಯಾದಳು ಅದಾವುದೋ ಕಾಯಿಲೆ ಕೆಲಸಕ್ಕೂ ಹೆಚ್ಚು ಬೇಡಿಕೆ ಸೌಂದರ್ಯದ್ದು ಅದನ್ನೇ ಒತ್ತೆಯಿಟ್ಟು ಅವನ ಬದುಕಿಸಿದಳು! ಅವಳ ಕಾಸು ಬೇಕು […]

Continue Reading

ಪಠ್ಯಪುಸ್ತಕದಲ್ಲಿ ರಾಣಿ ಅಬ್ಬಕ್ಕ, ರಾಯಣ್ಣ ಪಾಠಕ್ಕೆ ತೆಗೆದರೆ ರಾಜ್ಯಾಧ್ಯಂತ ಉಗ್ರ ಹೋರಾಟ: ಭಾರತೀಯ ಮಹಿಳಾ ರಕ್ಷಣಾ ವೇದಿಕೆ ಎಚ್ಚರಿಕೆ

ಚಿತ್ರದುರ್ಗ: ಚಿಕ್ಕ ವಯಸ್ಸಿನಲ್ಲೆ ರಾಷ್ಟ್ರೀಯ ಆದರ್ಶಗಳನ್ನು ಬೆಳೆಸಿಕೊಂಡ ಕನ್ನಡನಾಡಿನ ವೀರ ಮಹಿಳೆ ರಾಣಿ ಅಬ್ಬಕ್ಕ ದೇವಿ, ಬ್ರಿಟೀಷರ ವಿರುದ್ದ ಹೋರಾಟ ಮಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕರ ಜೀವನ ಚರಿತ್ರೆಗಳನ್ನು ಪಠ್ಯಪುಸ್ತಕದಲ್ಲಿ ಕಡಿತಗೊಳಿಸಿದರೆ ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಭಾರತೀಯ ಮಹಿಳಾ ರಕ್ಷಣಾ ವೇದಿಕೆ ಎಚ್ಚರಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಗಕ್ಕೆ (2020-21) ಮಾತ್ರ ಅನ್ವಯಿಸುವಂತೆ ಒಂದರಿಂದ 10ನೇ ತರಗತಿವರೆಗಿನ ಪಠ್ಯಕ್ರಮದಲ್ಲಿ ಶೇ 30ರಷ್ಟು ಕಡಿತಗೊಳಿಸಲಾಗಿದೆ. ಈ ಪೈಕಿ, […]

Continue Reading

ಬ್ರೇಕಿಂಗ್ ನ್ಯೂಸ್ ಕಾದಂಬರಿಗಾರ್ತಿ, “ನಾಡೋಜ ಡಾ. ಗೀತಾ ನಾಗಭೂಷಣ” ಇನ್ನಿಲ್ಲ

ಸುದ್ದಿವಾಣಿ ಕಲ್ಬುರ್ಗಿ: ಡಾ.ಗೀತಾ ನಾಗಭೂಷಣ (ಮಾರ್ಚ್ ೨೫, ೧೯೪೨ ) ಕನ್ನಡ ಸಾಹಿತ್ಯದ ಪ್ರಸಿದ್ಧ ಬರಹಗಾರ್ತಿಯರಲ್ಲೊಬ್ಬರು. ಗೀತಾ ನಾಗಭೂಷಣ, ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ಸಾವಳಗಿ ಎಂಬ ಪುಟ್ಟ ಹಳ್ಳಿಯಲ್ಲಿ ಮಾರ್ಚ್ ೨೫, ೧೯೪೨ರಲ್ಲಿ ಶಾಂತಪ್ಪ, ಶರಣಮ್ಮ ದಂಪತಿಗಳ ಪ್ರೀತಿಯ ಮಗಳಾಗಿ ಜನಿಸಿದರು. ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾಗಿರುವ ನಾಡೋಜ ಗೀತಾ ನಾಗಭೂಷಣ, ತಮಗಿದ್ದ ಕಿತ್ತು ತಿನ್ನುವ ಬಡತನ, ಅಸಹಕಾರಕ ಪರಿಸರ, ಹೆಣ್ಣು ಮಕ್ಕಳ ನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು […]

Continue Reading

ಕೋಟೆ ನಗರದಲ್ಲಿ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ರೇವತಿ ಹವಾ …!

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ರೇವತಿ ಅವರ ರೌಂಡ್ ನಿಂದ ಜನ ಬೆಚ್ಚಿಬಿದ್ದಿದ್ದಾರೆ. ಯಾರು ಯಾರು ಟ್ರಾಫಿಕ್ ರೂಲ್ ಗಳನ್ನು ಪಾಲನೆ ಮಾಡುತ್ತಿಲ್ಲವೇ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ, ವೃತ್ತಗಳಲ್ಲಿ ಸುಗಮ ಸಂಚಾರಿ ವ್ಯವಸ್ಥೆಗೆ ವ್ಯಾಪಾಕ ಕ್ರಮ ಕೈಗೊಂಡಿರುವ ಸಂಚಾರಿ ಪೊಲೀಸರು, ನೋ ಪಾರ್ಕಿಂಗ್, ತ್ರಿಬಲ್ ರೈಡಿಂಗ್, ಮೊಬೈಲ್ ಸ್ಪೀಕಿಂಗ್ ರೈಡಿಂಗ್ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಸಂಚಾರಿ ನಿಗಾ ಘಟಕದಿಂದ (ಟ್ರಾಫಿಕ್ ಮೇಜೇಜ್‍ಮೆಂಟ್ ಸೆಂಟರ್) ಮಾಹಿತಿ […]

Continue Reading

ಹಿರಿಯೂರು ನಗರಸಭೆಗೆ ಮೊದಲ ಲೇಡಿ ಕಮಿಷನರ್ ಆಗಮನ

ಚಿತ್ರದುರ್ಗ: ಹಿರಿಯೂರು ನಗರಸಭೆಗೆ ನೂತನವಾಗಿ ಲೇಡಿ ಕಮಿಷನರ್ ಎಂಟ್ರಿಯಾಗುತ್ತಿದ್ದು, ಪೌರಾಯುಕ್ತರಾಗಿ ಟಿ. ಲೀಲಾವತಿ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಹಿರಿಯೂರು ನಗರಸಭೆಯ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಹಿಳಾ ಪೌರಾಯುಕ್ತರಾಗಿ ಟಿ. ಲೀಲಾವತಿ ಅಧಿಕಾರ ಸ್ವೀಕರಿಸುತ್ತಿರುವುದು ವಿಶೇಷವಾಗಿದೆ. ಇದೇ ನಗರಸಭೆಯಲ್ಲಿ ರೆವಿನ್ಯೂ ಇನ್ಸ್ ಪೆಕ್ಟರ್ ಹಾಗೂ ವಿವಿಧ ಹುದ್ದೆಗಳ ಮೂಲಕ ಅಧಿಕಾರವನ್ನು ಮಾಡಿರುವಂತ ಲೀಲಾವತಿ ಅವರು ಖಡಕ್ ಅಧಿಕಾರಿ ಎಂದೇ ಪೌರ ಕಾರ್ಮಿಕರು ಮತ್ತು ಪೌರ ಸಿಬ್ಬಂದಿಗಳಿಂದ ಹೆಸರುಗಳಿಸಿದ್ದಾರೆ. ಚಿತ್ರದುರ್ಗದ ಜಿಲ್ಲಾಧಿಕಾರಿಯಾಗಿರುವ ವಿನೋತ್ ಪ್ರಿಯಾ, ಜಿಲ್ಲಾ ಪೊಲೀಸ್ […]

Continue Reading

ದೇವಿ ಮುಟ್ಟಾದರೆ ಶ್ರೇಷ್ಠ, ಹೆಣ್ಣು ಮುಟ್ಟಾದರೆ ಮೈಲಿಗೆ ! ಹೆಣ್ಣು..ಪ್ರೇಮ…ಕಾಮ ಮತ್ತು..

ಗೀರ್ವಾಣಿ ಭಟ್.. ಅಸ್ಸಾಂನ ಕಾಮಾಖ್ಯ ದೇವಾಲಯ ಒಂದು ವಿಶೇಷವಾದ ಸ್ಥಳ. ಇಲ್ಲಿ ದೇವಿ ಮುಟ್ಟಾಗುತ್ತಾಳೆ. ಆಕೆಯ ಯೋನಿಯನ್ನೇ ಗರ್ಭಗುಡಿಯಲ್ಲಿಟ್ಟು ಪೂಜಿಸಲಾಗುತ್ತದೆ. ಆಕೆ ಯೋನಿಯನ್ನು ಪ್ರದರ್ಶಿಸುತ್ತಲೇ ಕುಳಿತಿದ್ದಾಳೆ. ಭಕ್ತಾದಿಗಳು ಅವಳ ಯೋನಿಯನ್ನು ಸದಾ ಕುಂಕುಮದಿಂದ ಅಲಂಕರಿಸಿರುತ್ತಾರೆ. ದೇವಿ ಮುಟ್ಟಾಗಿದ್ದರ ಸೂಚಕವಾಗಿ ಆಷಾಢ ಮಾಸದಲ್ಲಿ ಬ್ರಹ್ಮಪುತ್ರಾ ನದಿ ಕೆಂಪು ಬಣ್ಣದಲ್ಲಿ ಹರಿಯುತ್ತದೆ. ಆಗ ಇಲ್ಲಿ ವಿಶೇಷವಾದ ಪೂಜೆ ಉತ್ಸವಗಳು ನಡೆಯುತ್ತದೆ. ಮಹಿಳೆಯ ಮುಟ್ಟನ್ನು ಅತಿ ವರ್ಜಿತ ಎಂದು ನೋಡುವ ನಮ್ಮ ನೆಲದಲ್ಲಿ ಮುಟ್ಟಾಗುವ ದೇವಿಯನ್ನೇ ಆರಾಧಿಸಲಾಗುತ್ತದೆ. ಆಕೆಯ ಯೋನಿಯನ್ನೇ ಶಕ್ತಿ […]

Continue Reading