ಪತ್ರಕರ್ತರ ಕ್ಷೇಮನಿಧಿಗೆ  ನೂರು ಕೋಟಿ ನೀಡಿ: ಶಿವಾನಂದ ತಗಡೂರು

ರಾಜ್ಯ ಸಮ್ಮೇಳನ ನಿರ್ಣಯ ಜಾರಿಗೆ ಕೆಯುಡಬ್ಲ್ಯೂಜೆ ಆಗ್ರಹ ಕಲಬುರಗಿ: ಜನವರಿ 3 ಮತ್ತು 4 ರಂದು ಕಲಬುರಗಿ ಯಲ್ಲಿ ನಡೆದ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನದಲ್ಲಿ  ತೆಗೆದುಕೊಂಡ ಮೂರು ನಿರ್ಣಯಗಳನ್ನು ಕಾರ್ಯರೂಪಕ್ಕೆ ಬರಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ಸಮ್ಮೇಳನದ ಯಶಸ್ವಿ ಹಿನ್ನೆಲೆಯಲ್ಲಿ ಕಲಬುರಗಿ ಪತ್ರಕರ್ತರು, ಜಿಲ್ಲಾಡಳಿತ ಹಾಗೂ ಸಹಕಾರ ನೀಡಿದ ಎಲ್ಲಾ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಲು ಆಗಮಿಸಿದ ಅವರು ಪತ್ರಿಕಾ ಭವನದಲ್ಲಿ […]

Continue Reading

ಹೆಗಲ ಮೇಲೆ ಕಂಬಳಿ ಹೊದ್ದು ಸುದ್ದಿಗಾರರ ಹಿತಕಾಯುವ ಶಿವಾನಂದ ತಗಡೂರು

ಕಲುಬುರಗಿ:ಡಿ.03: ಕಲಬುರಗಿನಲ್ಲಿ ನಡೆಯುತ್ತಿರುವ 36ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತೇರನೆಳೆದು ಯಶಸ್ವಿಗೊಳಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಮಾಲತೇಶ್ ಅರಸ್ ಹರ್ತಿಕೋಟೆ ಮತ್ತು ಶರಣಯ್ಯ ಒಡೆಯರ್  ಅವರು “ಕಂಬಳಿ” ಹೊದಿಸಿ “ಭಾರತೀಯ ಸಂವಿಧಾನ”ದ ಪುಸ್ತಕ ನೀಡುವ ಮೂಲಕ ಸನ್ಮಾನಿಸಿದರು. ಈ ಸಂದರ್ಭದಲ್ಲಿ  ಸಚಿವರಾದ ಮುರುಗೇಶ್ ನಿರಾಣಿ ಮತ್ತಿತರರು ಇದ್ದರು. ತಗಡೂರು ಅವರು […]

Continue Reading

ಗರಿಗೆದರಿದ ಕನಸು: ಸೇಡಂ ಜಿಲ್ಲೆಗಾಗಿ ಮಹತ್ವದ ಸಭೆ

ಸೇಡಂ :www.suddivaani. com. ಈಗಾಗಲೇ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕನ್ನು ಜಿಲ್ಲೆ ಮಾಡುವ ಕೂಗು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದ ಕೂಡಲೆ, ಸೇಡಂ ನಗರದ ಹಿರಿಯರು, ಕಿರಿಯರು, ಸ್ವಾಮಿಗಳು, ಲೇಖಕರು, ಪತ್ರಕರ್ತರು ನಾನಾ ಕ್ಷೇತ್ರದ ಗಣ್ಯರು ಸಮಾನ ಮನಸ್ಕದಿಂದ ಮಹತ್ವದ ಸಭೆ ಸೇರಿ ಮಾತುಕತೆ ನಡೆಸಿದ್ದಾರೆ. ಇಂದು ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಸೇಡಂ ಜಿಲ್ಲಾ ರಚನೆಯ ಹೋರಾಟದ ಸಮಿತಿಯ ಮಹತ್ವದ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸ್ವಾಮಿಗಳಾದ ಶ್ರೀ ಸದಾಶಿವ […]

Continue Reading

ನಾಡಿನ ಹೆಸರಾಂತ ಸಾಹಿತಿಗಳ ಮಡಿಲು ಸೇರಿದ ಅತ್ಯುನ್ನತ ರಾಜ್ಯ ಮಟ್ಟದ ಅಮ್ಮ ಪ್ರಶಸ್ತಿ

www.suddivaani.com ಸೇಡಂ: ನಾಡಿನ ಹೆಸರಾಂತ ಸಾಹಿತಿಗಳಿಗೆ ರಾಜ್ಯ ಮಟ್ಟದ ಅತ್ಯುನ್ನತ ಅಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಟ್ಟಣದ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡ ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರು ಹಾಗೂ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ ತೇಲ್ಕೂರ ಪ್ರಶಸ್ತಿ ಪ್ರದಾನ ಮಾಡಿದರು. ಕೆ.ಎ.ದಯಾನಂದ ಅವರ ಹಾದಿಗಲ್ಲು (ಆತ್ಮಕಥನ), ಕಿರಣ್ ಭಟ್ ಅವರ ರಂಗ ಕೈರಳಿ (ಪ್ರವಾಸ ಕಥನ), […]

Continue Reading

ಕನಕ ಮಠದಂಗಳದಲ್ಲಿ ವಿನೂತನ‌ ಅರ್ಥಪೂರ್ಣ ದೀಪಾವಳಿ..

www.suddivaani.com ರಾಯಚೂರು:  ಮೇಷಪೂಜೆ, ಅಜಪೂಜೆಯೊಂದಿಗೆ ಸಾಂಪ್ರದಾಯಿಕ ದೀಪಾವಳಿ(ಹಟ್ಟಿಪೂಜೆ)ಯನ್ನು ಜಿಲ್ಲೆಯ ತಿಂಥಣಿ ಬ್ರಿಜ್ ನ ಕನಕ ಗುರುಪೀಠದಲ್ಲಿ ಆಚರಿಸಿ ಭಗವಂತ ಬೀರದೇವರಿಗೆ ಮಹಾಮಂಗಳಾರತಿ ಮಾಡಲಾಯಿತು. ಬುಡಕಟ್ಟು ಸಂಸ್ಕೃತಿ ಪರಂಪರೆಯ ಮೂಲನೆಲೆಯ ಮೂಲಕ ಸಮಸ್ತರೂ ಇಂತಹ ಅರ್ಥಪೂರ್ಣ ಮೂಲ ಆಚರಣೆಯನ್ನು ಆಚರಿಸಿ ಭಾರತೀಯ ಸಂಸ್ಕೃತಿಯನ್ನು ರಕ್ಷಿಸಬೇಕಿದೆ ಎಂದು ಕಲಬುರಗಿ ವಿಭಾಗದ ತಿಂಥಣಿ ಬ್ರಿಜ್ ನ ಕನಕಗುರುಪೀಠ ಹಾಲುಮತಕೇಂದ್ರದ ಪೀಠಾಧ್ಯಕ್ಷರಾದ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು ಹೇಳಿದರು. ಈ ಸಂದರ್ಭದಲ್ಲಿ ಶ್ರೀ ಮಠದ ಭಕ್ತರು ಅಪಾರ ಭಕ್ತಿಯಿಂದ ಹಟ್ಟಿ ಹಬ್ಬ ಆಚರಿಸಿದರು. ಏನಿದು […]

Continue Reading

ಸೇಡಂನಲ್ಲಿ ನ.೨೬ಕ್ಕೆ `ಅಮ್ಮ ಪ್ರಶಸ್ತಿ’ ಪ್ರದಾನ

www.suddivaani.com ಸುದ್ದಿವಾಣಿ ಕಲಬುರಗಿ, ನ.12: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ಭಾರತಿ ಹೆಗಡೆ, ಸುರೇಶ ನಾಗಲಮಡಿಕೆ, ಕೆ.ಎ.ದಯಾನಂದ, ಕಿರಣ್ ಭಟ್, ಶ್ರೀನಿವಾಸ ಸಿರನೂರಕರ್, ನದೀಂ ಸನದಿ ಮತ್ತು ಸತ್ಯಮಂಗಲ ಮಹಾದೇವ ಅವರ ಕೃತಿಗಳು ಆಯ್ಕೆಯಾಗಿವೆ ಎಂದು `ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ. ಭಾರತಿ ಹೆಗಡೆ ಅವರ `ಸೀತಾಳೆದಂಡೆಯ ಕಥೆಗಳು’ (ಕಥಾ ಸಂಕಲನ), ಸುರೇಶ ನಾಗಲಮಡಿಕೆ ಅವರ `ಹಾಡು ಕಲಿಸಿದ […]

Continue Reading

ಇದು, ಬದುಕಿನ `ಹಾದಿಗಲ್ಲು’ ಮತ್ತು ಬರೆಹದ `ಮೈಲಿಗಲ್ಲು’..

ಪ್ರವಾಹದ ವಿರುದ್ಧ ಈಜಿ ದಡ ಸೇರಿದ ಕಥನ ಇದು, ಬದುಕಿನ `ಹಾದಿಗಲ್ಲು’ ಮತ್ತು ಬರೆಹದ `ಮೈಲಿಗಲ್ಲು’. ಹೌದು, ಇದೊಂದು `ಅನಾತ್ಮ ಕಥನ’. ಲೇಖಕರಲ್ಲದವರು ಮತ್ತು ಅಧಿಕಾರಿಯಾಗಿದ್ದವರು ಏನು ಬರೆಯಬಲ್ಲರು ಎಂದು ಮೂಗು ಮುರಿಯುವವರ ನಡುವೆ `ಮೂಗಿನ ಮೇಲೆ ಬೆರಳಿಟ್ಟು’ಕೊಳ್ಳುವಂತೆ ಬರೆದಿರುವ ಮತ್ತು ಅಕ್ಷರಗಳಿಗೆ ಅಂತಃಕರಣದ ಕಥನ ರೂಪಿಸಿರುವ ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಅವರಿಗೆ ನನ್ನದೊಂದು ಚೆಂದನೆಯ ನಮಸ್ಕಾರ. ಹುಟ್ಟಿ ಬೆಳೆದ ಹಳ್ಳಿಗಾಡಿನ ಚಿತ್ರಣದೊಂದಿಗೆ ಬದುಕನ್ನು ತಳುಕು ಹಾಕುತ್ತ, ನಗರ ಸಂಸ್ಕೃತಿಯ ನಡುವೆಯೂ `ತನ್ನತನ’ವನ್ನು ಮರೆಯದ ಲೇಖಕ ದಯಾನಂದ […]

Continue Reading

ಶ್ರೀ ಸದಾಶಿವಸ್ವಾಮಿಗಳವರ ಸಿದ್ದ-ಬಸವ ನುಡಿ. ಮೈನಾ ಆಡಿಯೋ ಬುಕ್ ನ ಪ್ರಯತ್ನ

ಸೇಡಂ: ನ್ಯೂಸ್ – ಕೊರೊನಾ ಎಂಬ ಮಹಾಮಾರಿ ರೋಗಾಣು ಇಡೀ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿದೆ. ದೇಶದಲ್ಲಿ ಲಾಕ್ ಡೌನ್ ಆದ ಈ ಸಂದರ್ಭದಲ್ಲಿ ಜನರನು ಅನೇಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಮತ್ತೆ ಬಾಲ್ಯದೆಡೆಗೆ ತಮ್ಮ ಆಟಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಜನರಲ್ಲಿ ಆಧ್ಯಾತ್ಮಿಕವಾಗಿ ಅರಿವು ಮುಡಿಸುವುದಕ್ಕಾಗಿ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಪೂಜ್ಯರಾದ ಶ್ರೀ ಸದಾಶಿವ ಸ್ವಾಮಿಗಳವರು ಸಿದ್ಧ-ಬಸವ ನುಡಿ ಎನ್ನುವ ಶೀರ್ಷಿಕೆಯಡಿ ಮೈನಾ ಆಡಿಯೋ ಡಿಜಿಟಲ್ ಬುಕ್ ನಲ್ಲಿ ಪ್ರತಿದಿನ ತಮ್ಮ ನುಡಿಗಳಿಂದ ಜನರಲ್ಲಿ ಅನೇಕ ವಿಷಯಗಳನ್ನು ತಲುಪಿಸುವ […]

Continue Reading

ಸೇಡಂ ಜನರ ಆಶೋತ್ತರದ ಚಪ್ಪಾಳೆ‌.

ಕಲಬುರಗಿ: ಕೊರೋನಾ ವೈರಸ್ ನಿಂದ ಇಡೀ ಭಾರತವೇ ನಿಶ್ಯಬ್ದವಾಗಿ ಜನತಾ ಕರ್ಫ್ಯೂನಲ್ಲಿ ಒಂದು ದಿನ ಕಳೆದುಹೋಯಿತು. ಪ್ರಧಾನಿಮಂತ್ರಿಗಳ ಮಾತಿನಂತೆ ಸೇಡಂ ಜನರು ತಮ್ಮ ಆಶೋತ್ತರವನ್ನು ಮತ್ತು ಅಭಿಮಾನದ ಚಿಹ್ನೆಯನ್ನು ಚಪ್ಪಾಳೆಗಳ ಮೂಲಕ ವ್ಯಕ್ತಪಡಿಸಿದರು. ಸೇಡಂ ತಾಲೂಕಿನ ಹಲವು ಕಡೆ ಜನರು ಮನೆಯ ಮಾಳಿಗೆ ಮೇಲೆ ಮತ್ತು ಪಡಸಾಲೆಯಲ್ಲಿ ನಿಂತು ವೈದ್ಯರಿಗೆ, ಪೋಲಿಸರಿಗೆ, ಸೈನಿಕರಿಗೆ ಅವರ ಶ್ರಮಕ್ಕೆ ಪ್ರತಿಫಲದ ರೀತಿಯಲ್ಲಿ ಚಪ್ಪಾಳಗಳ ಸುರಿಮಳೆ ಸುರಿಸಿದರು. ವಿಜಯ ಭಾಸ್ಕರ್. ಸುದ್ದಿವಾಣಿ ಪ್ರತಿನಿಧಿ.

Continue Reading