ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೌಕರರಿಂದ ರಕ್ತದಾನ

ಚಿತ್ರದುರ್ಗ: (ಸುದ್ದಿವಾಣಿ): ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೌಕರರ ಸಂಘದ 2021-2022 ಸಾಲಿನ ಒಂದನೇ ವರ್ಷದ ವಾರ್ಷಿಕ ಮಹಾಸಭೆ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭ ದಲ್ಲಿ ಬ್ಯಾಂಕಿನ ನೌಕರರ ಸಂಘ ದಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಬ್ಯಾಂಕಿನ 25 ಜನ ನೌಕರರು ರಕ್ತದಾನ ಮಾಡಿದರು. ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಂಪನಿ ಬೆಂಗಳೂರು ಇವರು ಹೆಲ್ತ್ ಇನ್ಸೂರೆನ್ಸ್ ಬಗ್ಗೆ ಮಾಹಿತಿ ನೀಡಿದರು. ಮತ್ತು ಡಾ. ಕೆ ದೀಪಕ್ ಇವರು ಮಾನಸಿಕ ಒತ್ತಡ […]

Continue Reading

ಡಾನ್ ಬೋಸ್ಕೋ ಶಾಲೆಯ ಅವ್ಯವಸ್ಥೆ ವಿರುದ್ಧ ಪೋಷಕರ ಆಕ್ರೋಶ

  ಚಿತ್ರದುರ್ಗ: (ಸುದ್ದಿವಾಣಿ) ಮೂರು ವರ್ಷವಾದರೂ ನಡೆಯದ ಪೋಷಕರ ಶಿಕ್ಷಕರ ಸಭೆ, ಮಕ್ಕಳ ಕಲಿಕಾ ಮಟ್ಟದ ಏರಿಕೆಯಲ್ಲಿ ಕೊರತೆ, ಪ್ರತಿ ವರ್ಷ ದುಬಾರಿಯಾದ ಶುಲ್ಕ, ಶುಲ್ಕದ ಹೆಸರಿನಲ್ಲಿ ಪರೀಕ್ಷಾ ದಿನವಾದರೂ ಮಕ್ಕಳಿಗೆ ಹಾಲ್ ಟಿಕೆಟ್ ನೀಡದೆ ಕಿರಿಕಿರಿ, ದಿಢೀರ್ ಶಾಲೆಗೆ ಭೇಟಿ ಕೊಟ್ಟ ಪೋಷಕರಿಂದ ತರಾಟೆ. ಪ್ರಾಂಶುಪಾಲರಿಗೆ ಒಂದು ಪೀರಿಯಡ್ ಪಾಠ ಮಾಡಿದ ಪೋಷಕರು. ರೊಚ್ಚಿಗೆದ್ದ ಪಾಲಕರಿಂದ ಆಕ್ರೋಶ. ಕೂಡಲೇ ಸಭೆ ನಡೆಸಲು ಆಗ್ರಹ. ಹೌದು. ಚಿತ್ರದುರ್ಗ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡಾನ್ ಬೋಸ್ಕೋ ಶಾಲೆಯ ಕರ್ಮಕಾಂಡ, […]

Continue Reading

ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ಎಸ್. ಆರ್ . ಎಸ್ ಸಂಸ್ಥೆಯ ಗುರಿ

ಮಾಲತೇಶ್ ಅರಸ್ ಚಿತ್ರದುರ್ಗ: ನಂಬಿಕೆಗೆ ಮತ್ತೊಂದು ಹೆಸರೇ ಎಸ್.ಆರ್.ಎಸ್. ಪೋಷಕರು ಶಾಲೆಯ ಮೇಲೆ ಇಟ್ಟ ನಂಬಿಕೆಯನ್ನು ಉಳಿಸುವ ಜತೆಗೆ ಮಕ್ಕಳ ಅಭಿವೃದ್ಧಿ ನಮ್ಮ ಗುರಿಯಾಗಿದೆ. ನಮ್ಮ ಶಾಲೆಯಲ್ಲಿ ಓದಿದ ಮಕ್ಕಳು ಉನ್ನತಮಟ್ಟಕ್ಕೇರಬೇಕು ಎಂಬುದು ನಮ್ಮ ಉದ್ದೇಶ ಎಂದು ಎಸ್.ಆರ್.ಎಸ್ ಸಮೂಹ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಲಿಂಗಾರೆಡ್ಡಿ ಹೇಳಿದರು. ಬೆಂಗಳೂರು ರಸ್ತೆಯ ಐಯುಡಿಪಿ ಬಡಾವಣೆಯಲ್ಲಿ ನೂತನವಾಗಿ ಆರಂಭವಾದ ಎಸ್.ಆರ್.ಎಸ್ ಆಸ್ಕರ್ ಫರ್ನಾಂಡೀಸ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ಪೋಷಕರಿಗೆ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯಲ್ಲಿ […]

Continue Reading

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಹೊಸ ಟೀಮ್

ದಾವಣಗೆರೆ : ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ನೂತನ ಅಧ್ಯಕ್ಷರಾಗಿ ಕೆ. ಏಕಾಂತಪ್ಪ ನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಡಾ.ಎಸ್. ವರದರಾಜ್ ಖಜಾಂಚಿಯಾಗಿ ಕುಂದವಾಡದ ಮಧುನಾಗರಾಜ್ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಜಿ.ಎಂ.ಆರ್ ಆರಾಧ್ಯ, ಬಿ.ಎನ್.ಮಲ್ಲೇಶ್, ಮಂಜುನಾಥ್ ಕಾಡಜ್ಜಿ, ಬಸವರಾಜ ದೊಡ್ಮನಿ, ರವಿ. ಆರ್. ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ  ಪದಾಧಿಕಾರಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಗೌರವಿಸಲಾಯಿತು.  ನೂತನ ಪದಾಧಿಕಾರಿಗಳಿಗೆ ಭಾರತೀಯ ಕಾರ್ಯನಿರತ ಪತ್ರಕರ್ತರ […]

Continue Reading

ಚಾಣಕ್ಯ ರತ್ನ ಪ್ರಶಸ್ತಿ ಪ್ರದಾನ, ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ಕಾರ್ಯಾಗಾರ : ಎಚ್. ಚಿದಂಬರ

ಚಿತ್ರದುರ್ಗ: ಪ್ರತಿಷ್ಠಿತ ಶ್ರೀ ಚಾಣಕ್ಯ ಕೋಚಿಂಗ್ ಸೆಂಟರ್ ವತಿಯಿಂದ ಫೆ.೦೬ರ ಭಾನುವಾರ ವಿವಿಧ ಸರ್ಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಶ್ರೀಚಾಣಕ್ಯರತ್ನ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಂಡಲೂರು ಎಜುಕೇಷನ್ ಟ್ರಸ್ಟ್ ಶ್ರೀ ಚಾಣಕ್ಯ ಕೋಚಿಂಗ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕರಾದ ಎಚ್.ಚಿದಂಬರ್ ತಿಳಿಸಿದ್ದಾರೆ. ದಾವಣಗೆರೆ ನಗರದ ಕೇಂದ್ರ ಗ್ರಂಥಾಲಯದ ಹತ್ತಿರದ ರೋಟರಿ ಭವನದಲ್ಲಿ ಬೆಳಗ್ಗೆ ೧೦ ಗಂಟೆಗೆ ಸಮಾರಂಭ ನಡೆಯಲಿದ್ದು, ಖ್ಯಾತ ಲೇಖಕರಾದ ಪಿ.ಎಸ್.ಗಂಗಾಧರ್ ಉದ್ಘಾಟನೆ ಮಾಡಲಿದ್ದಾರೆ. ಮಂಡಲೂರು ಎಜುಕೇಷನ್ ಟ್ರಸ್ಟ್, ಶ್ರೀ ಚಾಣಕ್ಯ […]

Continue Reading

ಎಸ್ಸೆಸ್ಸೆಲ್ಸಿ ಪಾಸ್/ಪಿಯು ಫೇಲ್/ ಐಟಿಐ/ ಡಿಪ್ಲೋಮಾ ಅಭ್ಯರ್ಥಿಗಳಿಂದ ದ್ವಿತೀಯ ಪಿಯುಸಿ ನೇರ ಪರೀಕ್ಷೆಗೆ ಅರ್ಜಿ ಆಹ್ವಾನ

ಎಸ್ಸೆಸ್ಸೆಲ್ಸಿ ಪಾಸ್/ಪಿಯು ಫೇಲ್/ ಐಟಿಐ/ ಡಿಪ್ಲೋಮಾ ಅಭ್ಯರ್ಥಿಗಳಿಂದ ದ್ವಿತೀಯ ಪಿಯುಸಿ ನೇರ ಪರೀಕ್ಷೆಗೆ ಅರ್ಜಿ ಆಹ್ವಾ   ಎಸ್ಸೆಸ್ಸೆಲ್ಸಿ ಪಾಸ್/ಪಿಯು ಫೇಲ್/ ಐಟಿಐ/ ಡಿಪ್ಲೋಮಾ ಅಭ್ಯರ್ಥಿಗಳಿಂದ ದ್ವಿತೀಯ ಪಿಯುಸಿ ನೇರ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ದಂಡ ಸಹಿತ ಮಾರ್ಚ್ ೧೪ರವರೆಗೆ ಕಾಲಾವಕಾಶ ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣದಿಂದ ವಂಚಿತರಾದವರಿಗೆ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ಅಡಿಯಲ್ಲಿ ನಡೆಯುತ್ತಿರುವ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಓಪನ್ ಸ್ಕೂಲ್ (ಎನ್‌ಐಓಎಸ್) ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿ ಬೆಂಗಳೂರು ಇವರ […]

Continue Reading

ಸರ್ಕಾರಿ ನೌಕರರ ಮೇಲೆ ನೀಡುವ ಸುಳ್ಳು ದೂರು ದಾಖಲೆಗಳನ್ನು ಪರಿಶೀಲಿಸಲು ಮನವಿ

ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಎಸ್.ಪಿ ಗೆ ಪರಶುರಾಮ್ ಅವರಿಗೆ ಮನವಿ ಚಿತ್ರದುರ್ಗ:(ಸುದ್ದಿವಾಣಿ)  ಜಿಲ್ಲೆಗೆ ನೂತನವಾಗಿ ಅಧಿಕಾರವಹಿಸಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ  ಕೆ. ಪರಶುರಾಮ್ ಅವರಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ  ಕೆ. ಮಂಜುನಾಥ್ ಹಾಗೂ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿ ಮತ್ತು ನೌಕರರು ಶುಭ ಕೋರಿದರು. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಮೇಲೆ ನೀಡುವ ಸುಳ್ಳು ದೂರು ದಾಖಲೆಗಳನ್ನು ಮಾನ್ಯ  ಮಾಡಿದೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ […]

Continue Reading

ಉಪ್ಪಾರಹಳ್ಳಿ ಮೇಘನಾ.ಕೆ  ಪಿಎಚ್‌ಡಿ ಪದವಿ

ಚಿತ್ರದುರ್ಗ:(ಸುದ್ದಿವಾಣಿ ) ಹಿರಿಯೂರು ತಾಲೂಕಿನ ಉಪ್ಪಾರಹಳ್ಳಿ ಗ್ರಾಮದ ಡಿ.ಕೃಷ್ಣಪ್ಪ ಹಾಗೂ ಶಿವಲಿಂಗಮ್ಮ ಎಂಬುವರ ಪುತ್ರಿ  ಕೆ.ಮೇಘನಾ ಅವರಿಗೆ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಯಶವಂತ ಚಿತ್ತಾಲರ ಕಥನಗಳಲ್ಲಿ ಮಾನವೀಯ ಸಂಬಂಧಗಳು ಎಂಬ ಸಂಶೋಧನಾ ವಿಷಯಕ್ಕೆ ಪಿಎಚ್‌ಡಿ ಪದವಿ ಲಭಿಸಿದೆ. ಪ್ರಾಧ್ಯಾಪಕ ಪ್ರೊ.ಶಿವಾನಂದ ಕೆಳಗಿನಮನಿ ಮಾರ್ಗದರ್ಶಕರು. ಮೇಘನಾ ಅವರು ಪ್ರಸ್ತುತ ಚಿಕ್ಕಬಳ್ಳಾಪುರದ ಶ್ರೀ ಸತ್ಯಸಾಯಿ ಯೂನಿವರ್ಸಿಟಿ ಫಾರ್ ಹೂಮನ್ ಎಕ್ಸಲೆನ್ಸ್ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Continue Reading

ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸೋಣ: ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು (ಸುದ್ದಿವಾಣಿ): ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಲೇಬೇಕು ಈ ನಿಟ್ಟಿನಲ್ಲಿ ಸರ್ಕಾರ ಕ್ರಿಯಾಶೀಲವಾಗಿದೆ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮನವಿ ಸ್ವೀಕರಿಸಿ ಮಾತಾಡಿದ ಅವರು, ವೇದಿಕೆಯ ಮನವಿಯಂತೆ ಸುಮಾರು 73 ಅತಿ ಹಿಂದುಳಿದ ಜಾತಿಗಳನ್ನು ಗುರುತಿಸಿ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ದೇವರಾಜು‌ ಅರಸು […]

Continue Reading

ಕುಂಚಿಗನಹಾಳ್ ದೇವತೆ ಸನ್ನಿಧಿಯಲ್ಲಿ ಸ್ವಚ್ಛತಾ ಜಾಗೃತಿ ಮತ್ತು ಶ್ರಮದಾನ

ಚಿತ್ರದುರ್ಗ: ನಗರ/ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ಲಾಸ್ಟಿಕ್ ಬಳಸುತ್ತಿರುವುದರಿಂದ ಪ್ರಕೃತಿ ಮತ್ತು ಮಾನವನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.ದೇವಸ್ಥಾನದಲ್ಲಿ ಕೆಲವೊಂದು ಸಂಪ್ರದಾಯಗಳನ್ನು ಪರಿಪಾಲಿಸುವಾಗ ತಿಳಿದೋ ತಿಳಿಯದೆಯೇ ಪ್ರಕೃತಿ ನಾಶ ಮಾಡುತ್ತಿದ್ದೆವೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಅಧ್ಯಕ್ಷರೂ ಹಾಗೂ ರಾಯಲ್ ಸ್ಪೋರ್ಟ್ಸ್ ಅಕಾಡೆಮಿಯ ಗೌರವ ಅಧ್ಯಕ್ಷರಾದ  ಕೆ. ಮಂಜುನಾಥ್ ಹೇಳಿದರು. ನೆಹರು ಯುವ ಕೇಂದ್ರ, ರಾಯಲ್ಸ್ ಸ್ಪೋರ್ಟ್ಸ್ ಅಕಾಡಮಿ, ಆರೋಗ್ಯವೇ ಭಾಗ್ಯ ಯುವಕರ ಸಂಘ, ಮಾರ್ಗ ನೇಚರ್ ಆಂಡ್ […]

Continue Reading