ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿ ಆಯ್ಕೆಗೆ ಆಡಿಷನ್

ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿ ಚಿತ್ರದುರ್ಗ: ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿಯ ಆಯ್ಕೆಗೆ ಆಡಿಷನ್ ಕರೆಯಲಾಗುತ್ತಿದ್ದು ಆಗಸ್ಟ್ ತಿಂಗಳಿನಲ್ಲಿ ಬರುವ ವಿನಾಯಕ ಚತುರ್ಥಿಗೆ ಚಿಕ್ಕಜಾಜೂರು ಮತ್ತು ಸುತ್ತಮುತ್ತಲಿನ ವಿವಿಧ ಪ್ರಕಾರದ ಕಲಾವಿದರನ್ನು ಶೋಧಿಸಲು ವಿಶೇಷ ತಂಡ ಸಜ್ಜಾಗಿದೆ ಎಂದು ಕಾರ್ಯಕ್ರಮದ ಮುಖ್ಯಸ್ಥರು ರಂಗಭೂಮಿ ಕಿರುತೆರೆ ಬೆಳ್ಳಿತೆರೆ ಸಾಹಿತಿ ನಿರ್ದೇಶಕ ನಿರ್ಮಾಪಕ ನಟ ಮತ್ತು ಸಂಶೋಧಕ ಡಾ ರಾಧಾಕೃಷ್ಣ ಪಲ್ಲಕ್ಕಿ ತಿಳಿಸಿದ್ದಾರೆ. ಈ ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿಯ ಆಯ್ಕೆಗೆ ಆಡಿಷನ್ ಕರೆಯಲಾಗುತ್ತಿದ್ದು ಜುಲೈ ಎರಡನೆಯ ವಾರ ಸ್ಪರ್ಧಿಗಳು […]

Continue Reading

ಬಿಜೆಪಿ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾಗೆ ಅದ್ದೂರಿ ಸ್ವಾಗತ

ಬಿಜೆಪಿ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾಗೆ ಅದ್ದೂರಿ ಸ್ವಾಗತ   ಮಾಲತೇಶ್ ಅರಸ್ ಚಿತ್ರದುರ್ಗ: ಜಿಲ್ಲಾ ಬಿಜೆಪಿ ನೇತೃತ್ವದ ಕೇಸರಿಪಡೆ ಜನಪ್ರತಿನಿಧಿಗಳ ಶಕ್ತಿ ಪ್ರದರ್ಶನಕ್ಕೆ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ ಹಮ್ಮಿಕೊಂಡಿದ್ದು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾವೇಶ ಸ್ಥಳ ಮುರುಘಾ ಮಠ ಹಾಗೂ ಕಲ್ಲಿನ ಕೋಟೆ ಚಿತ್ರದುರ್ಗ ಸಂಪೂರ್ಣ ಕೇಸರಿಮಯವಾಗಿದೆ. ಚಿತ್ರದುರ್ಗ ಜಿಲ್ಲೆ ಅಂದ್ರೆ ಅದು ಕಾಂಗ್ರೆಸ್ ನ ಭದ್ರಕೋಟೆ.. […]

Continue Reading

ಹಿರಿಯೂರು ಅಪರ ಸರ್ಕಾರಿ ವಕೀಲರಾಗಿ ಟಿ.ಸಂಜಯ್ ನೇಮಕ

ಚಿತ್ರದುರ್ಗ: (ಸುದ್ದಿವಾಣಿ) ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾಮದ ಟಿ.ಸಂಜಯ್ ಅವರನ್ನು ಹಿರಿಯೂರಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಗೆ ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ, ಕಾನೂನು ಇಲಾಖೆ ಅವರು ನೇಮಕ ಮಾಡಿ, ಜೂನ್ 7 ರಂದು ಆದೇಶ ಹೊರಡಿಸಿದ್ದಾರೆ.  ಟಿ.ಸಂಜಯ್ ರವರು ನಗರದ ಹಿರಿಯ ವಕೀಲರಾದ ಬಿ.ಎನ್.ತಿಪ್ಪೇಸ್ವಾಮಿಯವರ ಪುತ್ರ, ವಕೀಲ ವೃತ್ತಿ ಜೊತೆಗೆ ಕೃಷಿಕ್ಷೇತ್ರ  ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಹ  ಗುರುತಿಸಿಕೊಂಡು, ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.  ಪ್ರಸ್ತುತ ಹಿರಿಯೂರು “ವಿಕಾಸ ವೇದಿಕೆ” ಸಂಚಾಲಕರಾಗಿದ್ದು, […]

Continue Reading

ನೂತನ ಸರ್ಕಾರಿ ಶಾಲಾ ಕೊಠಡಿ ಉದ್ಘಾಟನೆ

ಚಿತ್ರದುರ್ಗ ; ಜಿಲ್ಲೆಯ ಕಾಟೀಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭ ನಡೆಯಿತು. ಶಾಸಕ. ಜಿ. ಹೆಚ್. ತಿಪ್ಪಾರೆಡ್ಡಿ ಅವರು ಕೊಠಡಿ ಉದ್ಘಾಟನೆ ಮಾಡಿದರು. ಶಿಕ್ಷಣ ಇಲಾಖಾ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕರಾದ ನೀಲಕಂಠಾಚಾರ್, ECO ಕೃಷ್ಣ ಮೂರ್ತಿ, CRP ಕುಮಾರ್ ಸ್ವಾಮಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಜುನಾಯ್ಕ್, ನೌಕರರ ಸಂಘದ ಖಜಾಂಚಿಯಾದ ವೀರೇಶ್, ಶಾಲೆಯ ಮುಖ್ಯೋಪಾಧ್ಯಾಯ ಬಿ. ಹೆಚ್ ತಿಪ್ಪೇಸ್ವಾಮಿ, ಲೇಖಕಿ ಗೀತಾ ಇದ್ದರು. […]

Continue Reading

ಹರ್ತಿಕೋಟೆಯಲ್ಲಿ ಸಂಭ್ರಮದ ಪರಿಸರೋತ್ಸವ

ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮಪಂಚಾಯತಿ ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಿ.ನೀಲಮ್ಮ, ಮಾಜಿ ಉಪಾಧ್ಯಕ್ಷರಾದ ಪಾಂಡುರಂಗಪ್ಪ, ಸದಸ್ಯರಾದ ಪ್ರತಾಪ್ ಸಿಂಹ, ಯಶೋದಮ್ಮ. ರಾಜಪ್ಪ, ಮಹೇಶ್ವರಿ ಗೋಡೆ ತಿಪ್ಪೇಸ್ವಾಮಿ, ಮುಖಂಡರಾದ ಆರ್ ಹನುಮಂತಪ್ಪ, ಜುಂಜುರಾಮನಾಯಕ, ಗ್ರಾಪಂ ಕಾರ್ಯದರ್ಶಿ ಗಿರೀಶ್, ವನ್ಯಜೀವಿ ಮತ್ತು ಪರಿಸರ ಸಂರಕ್ಷಣಾ ವೇದಿಕೆ ಸಂಚಾಲಕರಾದ ಮಾಲತೇಶ್ ಅರಸ್, ನರೇಗಾ ಇಂಜಿನಿಯರ್ ಹರ್ಷ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇದ್ದರು.   ಹರ್ತಿಕೋಟೆ […]

Continue Reading

ಪರಿಷ್ಕೃತ ಪಠ್ಯದಲ್ಲಿ ಆದಿವಾಸಿಗಳಿಗೆ ಅವಹೇಳನ: ಕರ್ನಾಟಕ ಬುಡಕಟ್ಟು ಪರಿಷತ್ತು ಆಕ್ರೋಶ

ಬೆಂಗಳೂರು: ಜೂ. 04: ಪರಿಷ್ಕೃತ ಪಠ್ಯದಲ್ಲಿ ಆದಿವಾಸಿ ಕಾಡುಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಿರುವ ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲಾಗಿದೆ.  ರಾಮನಗರ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಲಾಗಿದ್ದು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ದೂರು ಸ್ವೀಕರಿಸಿರುವ ರಾಮನಗರ ಪೊಲೀಸ್ ಅಧೀಕ್ಷಕರು ಸದರಿ ವಿಚಾರದ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಹಾಗೂ ಇತರ ಸದಸ್ಯರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಾಥಮಿಕ ಮತ್ತು […]

Continue Reading

ವಾರ್ತಾ ಇಲಾಖೆಗೆ “ಪತ್ರಕರ್ತರ ವಾಹನ ” ಕೊಡುವೆ: ಬಸವರಾಜ ಬೊಮ್ಮಾಯಿ

  ಚಿತ್ರದುರ್ಗ:(ಸುದ್ದಿವಾಣಿ) ಜಿಲ್ಲೆಯ ವಾರ್ತಾ ಇಲಾಖೆಯಲ್ಲಿ ಪತ್ರಕರ್ತರ ವಾಹನ ಇಲ್ಲದೆ ದಿನೇ ದಿನೇ ಸಮಸ್ಯೆ ಎದುರಾಗಿದ್ದು ಹೊಸ ವಾಹನ ನೀಡಬೇಕೆಂದು ಪತ್ರಕರ್ತರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಚಿತ್ರದುರ್ಗ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ದಿನೇಶ್ ಗೌಡಗೆರೆ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಮಾಲತೇಶ್ ಅರಸ್, ಜಿಲ್ಲಾ ನಿರ್ದೇಶಕ ಮಂಡಳಿಯ ವೀರೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ವಾಹನ ಒದಗಿಸುವಂತೆ ಮನವಿ ಮಾಡಿದಾಗ. ವಿಶೇಷ ಅನುದಾನವನ್ನು ನೀಡುವ ಮೂಲಕ ಬಸ್ ನೀಡುತ್ತೇನೆ ಎಂದರು. […]

Continue Reading

ಬಿಜೆಪಿಯ ಮದಕರಿ ನಾಯಕ ರಥಯಾತ್ರೆ ರದ್ದಾಗಿದ್ದು ಯಾಕೆ….?.

ಚಿತ್ರದುರ್ಗ: (ಸುದ್ದಿವಾಣಿ) : ಚಿತ್ರದುರ್ಗದ ವೀರ ಮದಕರಿ ನಾಯಕ ಅವರನ್ನು ಬಿಜೆಪಿ ಪ್ರಚಾರಕ್ಕಾಗಿ ಹೈ ಜಾಕ್ ಮಾಡಿಕೊಂಡು ಜೂನ್ 3 ರಂದು ಬಿಜೆಪಿ ನೇತೃತ್ವದಲ್ಲಿ  ನಡೆಯುವ ಮದಕರಿ ನಾಯಕ ರಥಯಾತ್ರೆ ರದ್ದುಗೊಳಿಸಬೇಕು ಎಂದು ಖುದ್ದು  ಜಿಲ್ಲಾ ನಾಯಕ ಸಮಾಜವೇ ಸುದ್ದಿಗೋಷ್ಠಿ ನಡೆಸಿ ತಿರುಗಿ ಬಿದ್ದ ಬೆನ್ನಲ್ಲೇ ಇದೀಗ ಬಿಜೆಪಿ ತನ್ನ  ರಥಯಾತ್ರೆ ರದ್ದು ಮಾಡಿದೆ. ಈ ಬಗ್ಗೆ ವಾಲ್ಮೀಕಿ ಬಿಜೆಪಿ ನಾಯಕರು ಸುದ್ದಿಗೋಷ್ಠಿ ಮಾಡಿ, ವಾಲ್ಮೀಕಿ ಶ್ರೀಗಳು ಫ್ರೀಡಂ ಪಾರ್ಕಿನಲ್ಲಿ 7.5%ಮೀಸಲಾತಿಗಾಗಿ ಧರಣಿ ಕುಳಿತಿದ್ದಾರೆ ಈ ಸಂದರ್ಭದಲ್ಲಿ […]

Continue Reading

ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶ್ರೀ ರಿತು ರಾಜ್ ಅವಸ್ತಿ ಅವರಿಗೆ ಸನ್ಮಾನ

  ಚಿತ್ರದುರ್ಗ: (ಸುದ್ದಿವಾಣಿ) ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ರಿತು ರಾಜ್ ಅವಸ್ತಿ ಇವರನ್ನು ಜಿಲ್ಲೆಯ ನ್ಯಾಯಾಧೀಶರು ಹಾಗೂ ಜಿಲ್ಲಾ ವಕೀಲರ ಸಂಘದವರು ಅಭಿನಂಧಿಸಿದರು. ದಾವಣಗೆರೆಯ ನೂತನ ನ್ಯಾಯಾಲಯದ ಶಂಕುಸ್ಥಾಪನೆ ಉದ್ಘಾಟನೆ ಗೆ ತೆರಳುವ ಮಾರ್ಗದ ಮಧ್ಯೆ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ಅವರು ಜಿಲ್ಲಾ ವಕೀಲರ ಸಂಘ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಗಳಾದ ನಟರಾಜನ್, ಜಿಲ್ಲಾ ನ್ಯಾಯಾಧೀಶರಾದ  ಪ್ರೇಮಾವತಿ ಮನಗೂಳಿ ಎಂ. ವಕೀಲರ ಸಂಘದ ಅಧ್ಯಕ್ಷರಾದ ಸಿ. […]

Continue Reading